ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂಪಾಯಿ ಅಬಕಾರಿ ಸುಂಕ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.……..ಮುಂದೆ ಓದಿ…..
ಏರಿಕೆ ಕುರಿತು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗದು. ಕಚ್ಚಾ ತೈಲದ ಮೇಲಿನ ಅಂತಾರಾಷ್ಟ್ರೀಯ ದರ ಬ್ಯಾರಲ್ ವೊಂದಕ್ಕೆ 60 ಡಾಲರ್ ಗೆ ಇಳಿದಿದೆ. ಜನವರಿಯಲ್ಲಿ ಕಚ್ಚಾ ತೈಲ ಬೆಲೆ 83 ಡಾಲರ್ ಗೆ ಏರಿದ್ದು, ನಂತರ 75 ಡಾಲರ್ ಗೆ ಇಳಿದಿತ್ತು ಎಂದು ಹೇಳಿದರು. ಅಡುಗೆ ಅನಿಲ ಸಿಲೆಂಡರ್ ಮೇಲಿನ 50 ರೂಪಾಯಿ ಏರಿಕೆಯು ಉಜ್ವಲ ಫಲಾನುಭವಿಗಳಿಗೆ ಮತ್ತು ಒಟ್ಟಾರೆ ಉಜ್ವಲ ಫಲಾನುಭವಿಗಳಲ್ಲದವರಿಗೆ ಅನ್ವಯಿಸಲಿದೆ. ಈ ಏರಿಕೆಯನ್ನು ಪ್ರತಿ 15ರಿಂದ 30 ದಿನಗಳ ನಂತರ ಪರಿಶೀಲಿಸಲಾಗುವುದು. ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಪರಿಸ್ಥಿತಿ ಇದೇ ರೀತಿ ಇದ್ದರೆ, ದರವನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದರು. ಈ ಮಧ್ಯೆ, ತೈಲ ಮಾರಾಟ ಕಂಪನಿಗಳು ಪ್ರತಿಕ್ರಿಯಿಸಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 2 ರೂಪಾಯಿ ಅಬಕಾರಿ ಸುಂಕ ಏರಿಕೆಯಿಂದ ಚಿಲ್ಲರೆ ದರಗಳ ಮೇಲೆ ವ್ಯತ್ಯಾಸವಾಗುವುದಿಲ್ಲ ಎಂದು ತಿಳಿಸಿವೆ.