Advertisement
ಸುದ್ದಿಗಳು

ಕೇರಳಕ್ಕಿಂತ ಕರ್ನಾಟಕವೇ ಬೆಸ್ಟ್ ಈಗ…! | ಕೇರಳದಲ್ಲಿ ಪೆಟ್ರೋಲ್ ಕರ್ನಾಟಕಕ್ಕಿಂತ ದುಬಾರಿ…! |

Share

ಇಂಧನ ಬೆಲೆ ಒಂದು ರೂಪಾಯಿ ಹೆಚ್ಚಾದರೂ ಏರಿಕೆ ಬಗ್ಗೆ ದೇಶಕ್ಕೆ ದೇಶವೇ ಚರ್ಚೆ ನಡೆಸುತ್ತದೆ. ಕಾರಣ ಇಷ್ಟೇ,  ಜಗತ್ತಿನಾದ್ಯಂತ ಅದರ ಮೇಲಿರುವ ಅವಲಂಬನೆ ಹೆಚ್ಚು. ತೈಲ ಬೆಲೆ ಆಧಾರದಲ್ಲಿಯೇ ಎಲ್ಲವೂ ದುಬಾರಿಯಾಗುತ್ತದೆ. ಇದೀಗ ಗಡಿಭಾಗದಲ್ಲಿ ಪೆಟ್ರೋಲ್ ಕಾರಣದಿಂದ ಕೇರಳದಿಂದ ಕರ್ನಾಟಕಕ್ಕೆ ಸಾರ್ವಜನಿಕರು ಆಗಮಿಸುತ್ತಿದ್ದಾರೆ.

Advertisement
Advertisement
Advertisement

ಕೇರಳದಲ್ಲಿ ಪೆಟ್ರೋಲ್ ದರ ಕರ್ನಾಟಕಕ್ಕಿಂತ ಭಾರೀ ಹೆಚ್ಚು. ಕೇರಳ ಸರ್ಕಾರ ಸೆಸ್ ದರ ಹೆಚ್ಚಿಸಿದ ಕಾರಣ ಕೇರಳದಲ್ಲಿ  ಪೆಟ್ರೊಲ್ ದರ ಹಿಗ್ಗಾಮುಗ್ಗಾ ಏರಿಕೆಯಾಗಿದೆ. ಕರ್ನಾಟಕಕ್ಕಿಂತ ಕೇರಳದಲ್ಲಿ ಪೆಟ್ರೋಲ್ ದರ 7 ರೂಪಾಯಿ ಹೆಚ್ಚಿದೆ. ಅದೇ ರೀತಿ ಡೀಸೆಲ್ ದರ 10 ರೂಪಾಯಿ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಲೀಟರ್​ಗೆ 108.48 ರೂಪಾಯಿ ಆಗಿದ್ದರೆ. ಡೀಸೆಲ್ ಗೆ 97.40 ರೂಪಾಯಿಯಾಗಿದೆ. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

Advertisement

ಅದೇ ರೀತಿ ಮಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.48 ರೂಪಾಯಿಯಾಗಿದೆ. ಹೀಗಾಗಿ ಕೇರಳ ರಾಜ್ಯಕ್ಕಿಂತ 7 ರೂಪಾಯಿ ಕಡಿಮೆ ಬೆಲೆಗೆ ಪೆಟ್ರೋಲ್ ದೊರೆಯುತ್ತಿದೆ. ಇದೇ ಕಾರಣಕ್ಕೆ ಕೇರಳದ ಗಡಿಭಾಗಗಳಿಂದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಕರ್ನಾಟಕಕ್ಕೆ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಒಟ್ಟಾರೆ ಪೆಟ್ರೋಲ್, ಡೀಸೆಲ್ ದರಕ್ಕೆ ಹೋಲಿಸಿದರೆ ನಮ್ಮ ನೆರೆಯ ಕೇರಳಕ್ಕಿಂತ ಕರ್ನಾಟಕವೇ ಬೆಸ್ಟ್ ಎಂಬುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

3 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

4 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

22 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

23 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

23 hours ago