#RainRecord | ಈ ಬಾರಿ ಮಳೆ ಹೇಗಿದೆ ? | 5 ವರ್ಷಗಳಿಂದ ಮಳೆಯ ಬದಲಾವಣೆ ಹೇಗಾಗುತ್ತಿದೆ…?

July 27, 2023
11:31 AM
ಕಳೆದ 5 ವರ್ಷಗಳಿಂದ ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಮಳೆ ಜಾಸ್ತಿಯಾಗುತ್ತಿದೆ.  ಈ ರೀತಿಯ ಬದಲಾವಣೆ  ನಿಧಾನವಾಗಿ ಆಗುತ್ತಿದೆ ಎಂಬ ಸೂಕ್ಷ್ಮವಾದ ಮಳೆ ಬದಲಾವಣೆಯನ್ನು ಗಮನಿಸಿದ್ದಾರೆ ಹವಾಮಾನ ಆಸಕ್ತ, 48 ವರ್ಷಗಳಿಂದ ಮಳೆ ದಾಖಲು ಮಾಡುತ್ತಿರುವ ಪಿ ಜಿ ಎಸ್‌ ಎನ್‌ ಪ್ರಸಾದ್‌ ಬಾಳಿಲ.

ಮಳೆ ಹೇಗೆ ? ಮೊನ್ನೆಯವರೆಗೆ ಮಳೆ ಕಡಿಮೆ ಎನ್ನುತ್ತಿದ್ದವರೆಲ್ಲಾ ಈಗ ಎಂತಾ ಮಳೆ ಎಂದು  ಕರಾವಳಿ ಜಿಲ್ಲೆಗಳಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಆದರೆ ನಮಗೆಲ್ಲಾ ಗೊತ್ತೇ ಇಲ್ಲದ ಹಾಗೆ ಕಳೆದ 5 ವರ್ಷಗಳಲ್ಲಿ ಮಳೆಯ ಅವಧಿ ಬದಲಾಗುತ್ತಿದೆ.  ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಬಾಳಿಲದ ಪಿಜಿಎಸ್‌ಎನ್‌ ಪ್ರಸಾದ್‌ ಅವರ ಸೂಕ್ಷ್ಮವಾದ ಗಮನಿಸುವಿಕೆಯ ಮಾಹಿತಿಯ ಪ್ರಕಾರ ಮಳೆಯಲ್ಲಿ ಬದಲಾವಣೆ ಆಗುತ್ತಿದೆ…

Advertisement
Advertisement

ಕಳೆದ 48 ವರ್ಷಗಳಿಂದ ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಪಿಜಿಎಸ್‌ಎನ್‌ ಪ್ರಸಾದ್‌ ಅವರ ಪ್ರಕಾರ ಕಳೆದ ವರ್ಷ ಜುಲೈ ತಿಂಗಳಲ್ಲಿ 2077 ಮಿಮೀ ಮಳೆಯಾಗಿತ್ತು.  ಹಿಂದೆ ಈ ಮಾದರಿ ಇರಲಿಲ್ಲ .ಕಳೆದ 5  ವರ್ಷಗಳಲ್ಲಿ ಜೂನ್‌ ವರೆಗೆ ಕಡಿಮೆಯಾಗಿ ನಂತರ ಜುಲೈ, ಆಗಸ್ಟ್‌ ತಿಂಗಳಲ್ಲಿ ಅಧಿಕ ಮಳೆಯಾಗುತ್ತಿದೆ.

ಈ ವರ್ಷ ಸುಮಾರು ಮೇ ಅಂತ್ಯದವರೆಗೆ ಮಳೆ ಕಡಿಮೆ ಇತ್ತು, ಒಮ್ಮೆ ಮಳೆಯಾಗಲಿ ಎನ್ನುವ ಭಾವ ಇತ್ತು. ಜೂನ್.‌6 ಕ್ಕೆ ಮುಂಗಾರು ಪ್ರವೇಶ ಆದರೂ ತೀರಾ ದುರ್ಬಲವಾಗಿತ್ತು. ಹೀಗಾಗಿ ಜೂನ್‌ ಅಂತ್ಯದವರೆಗೆ ಬಾಳಿಲದಲ್ಲಿ  728 ಮಿಮೀ ಮಳೆಯಷ್ಟೇ ಆಗಿತ್ತು. ಆದರೆ ಜುಲೈ ತಿಂಗಳಲ್ಲಿ ಮುಂಗಾರು ವೇಗ ಪಡೆಯಿತು, ಹೀಗಾಗಿ ಜುಲೈ ತಿಂಗಳಲಿ  1205 ಮಿಮೀ ಮಳೆ ಇದುವರೆಗೆ ಆಗಿದೆ. ಮಳೆ ಅಳತೆಯ ಕಾರಣದಿಂದ ಈ ಸೂಕ್ಷ್ಮಗಳನ್ನು ಗಮನಿಸಲಾಗಿದೆ. ಈ ವರ್ಷ  10% ಮಳೆ ಕಡಿಮೆ ಇರಬಹುದು ಎನ್ನುವ ಲೆಕ್ಕಾಚಾರ ಈಗಿನದು. ಆದರೆ ಈ ಲೆಕ್ಕಾಚಾರ ಪ್ರಕೃತಿಯ ಕಾರಣದಿಂದ ಬದಲಾಗುತ್ತಿದೆ ಎನ್ನುವುದು  ಗಮನಿಸಬೇಕಾದ ಅಂಶ.

ಪಿಜಿಎಸ್‌ಎನ್‌ ಪ್ರಸಾದ್, ಬಾಳಿಲ

ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಮಳೆ ಜಾಸ್ತಿಯಾಗುತ್ತಿದೆ.  ಕೆಲವು  5 ವರ್ಷಗಳಿಂದ ಈ ರೀತಿ ಆಗುತ್ತಿದೆ ಈ ರೀತಿಯ ಬದಲಾವಣೆ  ಆಗುತ್ತಿದೆ.ಇದಕ್ಕೆ ಕಾರಣಗಳು ಹಲವಾರು, ಈ ಬಗ್ಗೆ ಅಧ್ಯಯನ ಆಗಬೇಕಿದೆ ಎನ್ನುವುದು  ಪಿಜಿಎಸ್‌ಎನ್‌ ಪ್ರಸಾದ್‌ ಅವರ ಅಭಿಪ್ರಾಯ.

Advertisement
Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಪುಟ್ಟ ಚಿಟ್ಟೆ | ಭಾವ ತಟ್ಟಿದ ದಿಟ್ಟೆ
May 16, 2025
12:40 PM
by: ದ ರೂರಲ್ ಮಿರರ್.ಕಾಂ
ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ
ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |
May 16, 2025
7:16 AM
by: The Rural Mirror ಸುದ್ದಿಜಾಲ
ಮೇ 18 ರ ನಂತರ ರಾಹು ಕಾಟದಿಂದ ಈ 5 ರಾಶಿಯವರಿಗೆ ಕಷ್ಟಗಳು
May 16, 2025
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group