ಮಳೆ ಹೇಗೆ ? ಮೊನ್ನೆಯವರೆಗೆ ಮಳೆ ಕಡಿಮೆ ಎನ್ನುತ್ತಿದ್ದವರೆಲ್ಲಾ ಈಗ ಎಂತಾ ಮಳೆ ಎಂದು ಕರಾವಳಿ ಜಿಲ್ಲೆಗಳಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಆದರೆ ನಮಗೆಲ್ಲಾ ಗೊತ್ತೇ ಇಲ್ಲದ ಹಾಗೆ ಕಳೆದ 5 ವರ್ಷಗಳಲ್ಲಿ ಮಳೆಯ ಅವಧಿ ಬದಲಾಗುತ್ತಿದೆ. ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಬಾಳಿಲದ ಪಿಜಿಎಸ್‌ಎನ್ ಪ್ರಸಾದ್ ಅವರ ಸೂಕ್ಷ್ಮವಾದ ಗಮನಿಸುವಿಕೆಯ ಮಾಹಿತಿಯ ಪ್ರಕಾರ ಮಳೆಯಲ್ಲಿ ಬದಲಾವಣೆ ಆಗುತ್ತಿದೆ…
ಕಳೆದ 48 ವರ್ಷಗಳಿಂದ ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಪಿಜಿಎಸ್‌ಎನ್ ಪ್ರಸಾದ್ ಅವರ ಪ್ರಕಾರ ಕಳೆದ ವರ್ಷ ಜುಲೈ ತಿಂಗಳಲ್ಲಿ 2077 ಮಿಮೀ ಮಳೆಯಾಗಿತ್ತು. ಹಿಂದೆ ಈ ಮಾದರಿ ಇರಲಿಲ್ಲ .ಕಳೆದ 5 ವರ್ಷಗಳಲ್ಲಿ ಜೂನ್ ವರೆಗೆ ಕಡಿಮೆಯಾಗಿ ನಂತರ ಜುಲೈ, ಆಗಸ್ಟ್ ತಿಂಗಳಲ್ಲಿ ಅಧಿಕ ಮಳೆಯಾಗುತ್ತಿದೆ.
ಈ ವರ್ಷ ಸುಮಾರು ಮೇ ಅಂತ್ಯದವರೆಗೆ ಮಳೆ ಕಡಿಮೆ ಇತ್ತು, ಒಮ್ಮೆ ಮಳೆಯಾಗಲಿ ಎನ್ನುವ ಭಾವ ಇತ್ತು. ಜೂನ್.6 ಕ್ಕೆ ಮುಂಗಾರು ಪ್ರವೇಶ ಆದರೂ ತೀರಾ ದುರ್ಬಲವಾಗಿತ್ತು. ಹೀಗಾಗಿ ಜೂನ್ ಅಂತ್ಯದವರೆಗೆ ಬಾಳಿಲದಲ್ಲಿ 728 ಮಿಮೀ ಮಳೆಯಷ್ಟೇ ಆಗಿತ್ತು. ಆದರೆ ಜುಲೈ ತಿಂಗಳಲ್ಲಿ ಮುಂಗಾರು ವೇಗ ಪಡೆಯಿತು, ಹೀಗಾಗಿ ಜುಲೈ ತಿಂಗಳಲಿ 1205 ಮಿಮೀ ಮಳೆ ಇದುವರೆಗೆ ಆಗಿದೆ. ಮಳೆ ಅಳತೆಯ ಕಾರಣದಿಂದ ಈ ಸೂಕ್ಷ್ಮಗಳನ್ನು ಗಮನಿಸಲಾಗಿದೆ. ಈ ವರ್ಷ 10% ಮಳೆ ಕಡಿಮೆ ಇರಬಹುದು ಎನ್ನುವ ಲೆಕ್ಕಾಚಾರ ಈಗಿನದು. ಆದರೆ ಈ ಲೆಕ್ಕಾಚಾರ ಪ್ರಕೃತಿಯ ಕಾರಣದಿಂದ ಬದಲಾಗುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶ.
ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆ ಜಾಸ್ತಿಯಾಗುತ್ತಿದೆ. ಕೆಲವು 5 ವರ್ಷಗಳಿಂದ ಈ ರೀತಿ ಆಗುತ್ತಿದೆ ಈ ರೀತಿಯ ಬದಲಾವಣೆ ಆಗುತ್ತಿದೆ.ಇದಕ್ಕೆ ಕಾರಣಗಳು ಹಲವಾರು, ಈ ಬಗ್ಗೆ ಅಧ್ಯಯನ ಆಗಬೇಕಿದೆ ಎನ್ನುವುದು ಪಿಜಿಎಸ್‌ಎನ್ ಪ್ರಸಾದ್ ಅವರ ಅಭಿಪ್ರಾಯ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…