ರಸ್ತೆ ಗುಂಡಿಗಳಲ್ಲಿ ನವ ವಧುವಿನ ಫೋಟೋ ಶೂಟ್ | ಇದೆಂತಾ ಫೋಟೊ ಶೂಟ್…!‌ | ಭಾರೀ ವೈರಲ್‌ ಆದ ಫೋಟೊ |

September 21, 2022
1:29 PM

ಬೇರೆ ಬೇರೆ ವಿಧದಲ್ಲಿ ಫೋಟೊ ಶೂಟ್‌ ನಡೆಯುತ್ತಿದೆ. ಆದರೆ ಕೇರಳದಲ್ಲಿ ನಡೆದ ವಿಭಿನ್ನ ಮಾದರಿಯ ಫೋಟೊ ಶೂಟ್‌ ಈಗ ವೈರಲ್‌ ಆಗಿದೆ.  ಗುಂಡಿಗಳಿಂದ ಕೂಡಿದ  ರಸ್ತೆಯಲ್ಲಿ  ವಧುವಿನ ಫೋಟೋಶೂಟ್‌ ಮಾಡಿಸಿದ್ದಾರೆ. ಇದು ಈಗ ವೈರಲ್‌ ಆಗಿದೆ.

Advertisement

ವಿವಾಹ ಸಮಾರಂಭದ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ವೆಡ್ಡಿಂಗ್ ಫೋಟೊಶೂಟ್ ಮಾಡಲಾಗುತ್ತದೆ. ಆದರೆ ಈಗ ಕೇರಳದ ನವವಧುವೊಬ್ಬರು ವಿನೂತನ ಶೈಲಿಯಲ್ಲಿ ಫೋಟೊಶೂಟ್ ಮಾಡಿಸಿದ್ದು, ಈ ಚಿತ್ರಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇದರ ಚಿತ್ರ ಮತ್ತು ವೀಡಿಯೊಗಳನ್ನು ಇನ್​ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ.

ರಸ್ತೆಯ ಮಧ್ಯದಲ್ಲಿ ವಧುವಿನ ಫೋಟೋಶೂಟ್ ಎಂಬ ಲೈನ್ ಬರೆದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ಇದುವರೆಗೆ 4.3 ಮಿಲಿಯನ್ ವೀಕ್ಷಣೆ ಹಾಗೂ 3,70,400 ಲೈಕ್‌ ಬಂದಿವೆ. ವಧುವಿನ ಈ ಸೃಜನಶೀಲ ಫೋಟೊಗ್ರಾಫಿ ಸಾಮಾಜಿಕ ಜಾಲತಾಣದಲ್ಲಿ ತೀರಾ ವೈರಲ್ ಆಗಿದೆ.

ಈಚೆಗಷ್ಟೇ ಸುಳ್ಯದ ರಸ್ತೆಯ ಫೋಟೊ ಕೂಡಾ ಇದೇ ಮಾದರಿಯಲ್ಲಿ ವೈರಲ್‌ ಆಗಿತ್ತು. ಆ ಸಂದರ್ಭದಲ್ಲಿ ಕೀಬೋರ್ಡ್‌ ವಾರಿಯರ್‌ ಎಂಬ ವಿಷಯವೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಜನರು ತಮ್ಮ ಅಸಮಾಧಾನಗಳನ್ನು,ಬೇಸರಗಳನ್ನು, ಅನೇಕ ಸಮಯಗಳ ಬೇಡಿಕೆಗಳು ಈಡೇರದೇ ಇದ್ದಾಗ ಸಾಮಾಜಿಕ ಜಾಲತಾಣಗಳ ಮೂಲಕ ಆಡಳಿತವನ್ನು ಎಚ್ಚರಿಸುವ ಮಾದರಿಗಳು ದೇಶದೆಲ್ಲೆಡೆಯೂ ನಡೆಯುತ್ತದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪೆಟ್ರೋಲ್,ಡೀಸೆಲ್ ಅಬಕಾರಿ ಸುಂಕ 2 ರೂ. ಹೆಚ್ಚಳ | ಗ್ರಾಹಕರ ಮೇಲೆ ಹೆಚ್ಚಳ ವರ್ಗಾವಣೆ ಇಲ್ಲ
April 8, 2025
10:19 AM
by: The Rural Mirror ಸುದ್ದಿಜಾಲ
ಧಾರವಾಡ | ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ  ಕ್ರಮವಹಿಸಬೇಕು – ಸಚಿವ ಸಂತೋಷ ಲಾಡ್
April 8, 2025
9:55 AM
by: The Rural Mirror ಸುದ್ದಿಜಾಲ
ರಾಜ್ಯದ ವಿವಿದೆಡೆ ಮಳೆ
April 8, 2025
9:52 AM
by: The Rural Mirror ಸುದ್ದಿಜಾಲ
ಹಾವೇರಿಯಲ್ಲಿ ಹಾಲಿನ ಶೇಖರಣೆ ದರ ಹೆಚ್ಚಿಸಿ ಹಾಲು ಒಕ್ಕೂಟ ಆದೇಶ
April 8, 2025
8:01 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group