ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಈಗ ಕೃಷಿಗೆ ಸಂಕಷ್ಟವಾಗಿದೆ. ಜೋಯಿಡಾ ತಾಲೂಕಿನಲ್ಲಿ ಗೆಡ್ಡೆ ಗೆಣಸುಗಳನ್ನು ಸಾವಯವ ಪದ್ಧತಿಯಲ್ಲಿ ಅನೇಕ ವರ್ಷಗಳಿಂದಲೂ ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬರಲಾಗಿದೆ. ಆದರೆ ಈಗ ಹಂದಿ ಮತ್ತು ಕಾಡು ಪ್ರಾಣಿಗಳ ಕಾಟದಿಂದ ರೈತರು ಹೈರಾಣಾಗಿ ಹೋಗಿದ್ದಾರೆ. ಅರಣ್ಯ ಇಲಾಖೆ ಹಾನಿಯಾದ ಬೆಳೆಗೆ ಯಾವುದೇ ಪರಿಹಾರವನ್ನು ನೀಡುತ್ತಿಲ್ಲ. ಇದನ್ನೇ ನಂಬಿದ ರೈತ ಕುಟುಂಬಗಳು ಗೆಡ್ಡೆ ಗೆಣಸು ಬೆಳೆಯುವುದನ್ನು ನಿಲ್ಲಿಸಲು ಮುಂದಾಗಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿ ಈಗ ಜೋಯಿಡಾ ತಾಲೂಕಿನಲ್ಲಿ ಉದ್ಭವವಾಗಿದೆ. ತಾಲೂಕಿನ ಗೆಡ್ಡೆ ಗೆಣಸು ಹಾಗೂ ಕೆಸು ಗಡ್ಡೆಗೆ ರಾಷ್ಟ್ರೀಯ ಪ್ರಶಸ್ತಿ ಬಂದ ನಂತರ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಅನೇಕ ರೈತರು ಕೇಸು ಮತ್ತು ಇತರೆ ಗೆಡ್ಡೆ ಗೆಣಸುಗಳಾದ ಕಣಂಗ, ಕಾಟೆಕಣಂಗ, ಚಿರಕೊ, ನವಲಕೋನ್, ಕೊನ್, ಕಾಸರ ಆಳು, ಧವೆ ಆಳು ಸೇರಿದಂತೆ 40 ಕ್ಕೂ ಹೆಚ್ಚು ವಿವಿಧ ಜಾತಿಯ ಗೆಡ್ಡೆ ಗೆಣಸು (ಕಂದ ಮುಳೆ) ಬೆಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಗೆಡ್ಡೆ ಗೆಣಸು ವಿಶೇಷ : ಜೋಯಿಡಾ ತಾಲೂಕಿನ ಗೆಡ್ಡೆ ಗೆಣಸುಗಳಿಗೆ ರಾಷ್ಟ್ರೀಯ ಪ್ರಶಸ್ತಿ ಬಂದನಂತರ ಹೆಚ್ಚಾಗಿ ಬೆಳಸುತ್ತಾರೆ. ಹಂದಿ ಕಾಟ ಹೆಚ್ಚಾಗಿದೆ. ಎಕರೆ ಗಟ್ಟಲೆ ಕೇಸು ಬೆಳೆ ಹಂದಿ ಪಾಲಾಗಿದೆ. ವಿದ್ಯುತ್ ಬೇಲಿ ಉಪಯೋಗಿಸಿದರು ಹಂದಿ ಕಾಟ ನಿಯಂತ್ರಣ ಅಸಾಧ್ಯವಾಗಿದೆ.
ಹಂದಿ ಮತ್ತು ಕಾಡು ಪ್ರಾಣಿಗಳ ಕಾಟ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕಾಡು ಹಂದಿ ಕಾಟ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಪರಿಹಾರ ನೀಡಲು ಅವಕಾಶ ಇಲ್ಲ ಎನ್ನುತ್ತಾರೆ. ಬೆಳೆ ರಕ್ಷಣೆಗೆ ವಿದ್ಯುತ್ ಬೇಲಿ ಅಥವಾ ಸಿಮೆಂಟಿನ ಗೋಡೆ ನಿರ್ಮಿಸಿ ಕೊಡುವ ಅಗತ್ಯ ಇದೆ ಎಂದು ರೈತರು ಆಗ್ರಹಿಸಿದ್ದಾರೆ.
ಕೆಸುವಿನ ಗೆಡ್ಡೆಗೆ ಹಂದಿ ದಾಳಿಯಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇಳಿದರೆ ಪರಿಹಾರ ನೀಡಲು ಅವಕಾಶ ಇಲ್ಲ ಎನ್ನುತ್ತಾರೆ. ನಾವು ಹೈರಾಣಾಗಿದ್ದೇವೆ. ಪರಿಹಾರ ನೀಡುವಂತೆ ಆಗ್ರಹಿಸುತ್ತೇನೆ ಎಂದು ಒತ್ತಾಯಿಸಿದ್ದಾರೆ ರೈತ ಮಂಜುನಾಥ ಬುದೊ ಕಾಲೇಕರ.
(ಮಾಹಿತಿ: ದೀಪಕ್, ಜೋಯಿಡಾ)
ರಾಮನಗರ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…
ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…
ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…
ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದ್ದು,…
ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…
ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು…