#AdityaL1Mission | ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಆದಿತ್ಯ-ಎಲ್1 ಉಪಗ್ರಹದ ವೀಕ್ಷಣೆ ಲಭ್ಯ

September 1, 2023
6:32 PM
ಭಾರತದ ಪ್ರಪ್ರಥಮ ಖಗೋಳ ಸೌರವೀಕ್ಷಣಾಲಯ ಆದಿತ್ಯ-ಎಲ್ 1 ಉಪಗ್ರಹವನ್ನು ಸೆ.2ರಂದು ಬೆಳಿಗ್ಗೆ 11.50ಕ್ಕೆ ಆಂಧ್ರದ ಶ್ರೀಹರಿಕೋಟ ಕೇಂದ್ರದಿಂದ ಉಡಾವಣೆ ಪ್ರಕ್ರಿಯೆ ಮಾಡುವುದಾಗಿ ಇಸ್ರೋ ಈಗಾಗಲೇ ಘೋಷಿಸಿದೆ. ಇದರ ವೀಕ್ಷಣೆಗೆ ಮಂಗಳೂರಿನ ಪಿಲಿಕುಳದಲ್ಲಿ ವೀಕ್ಷಣೆಗೆ ಅವಕಾಶ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚಂದ್ರಯಾನ 3ರ ಅಭೂತಪೂರ್ವ ಯಶಸ್ವಿನಿಂದ ಜಾಗತಿಕ ಮನ್ನಣೆಗಳಿಸಿದ ನಂತರ ಇಸ್ರೋ ಇನ್ನೊಂದು ಚಾರಿತ್ರಿಕ ಸಾಧನೆಗೆ ಮುಂದಾಗಿದೆ. ಹತ್ತಿರದ ಚಂದ್ರನಿಂದ ದೂರದ ಸೂರ್ಯನಿಗೆ ಗಮನಹರಿಸಿ ಭಾರತದ ಪ್ರಪ್ರಥಮ ಖಗೋಳ ಸೌರವೀಕ್ಷಣಾಲಯ ಆದಿತ್ಯ-ಎಲ್ 1 ಉಪಗ್ರಹವನ್ನು ಸೆ.2ರಂದು ಬೆಳಿಗ್ಗೆ 11.50ಕ್ಕೆ ಆಂಧ್ರದ ಶ್ರೀಹರಿಕೋಟ ಕೇಂದ್ರದಿಂದ ಉಡಾವಣೆ ಪ್ರಕ್ರಿಯೆ ಮಾಡುವುದಾಗಿ ಇಸ್ರೋ ಈಗಾಗಲೇ ಘೋಷಿಸಿದೆ.

Advertisement

ಪಿಲಿಕುಳ ವಿಜ್ಞಾನ ಕೇಂದ್ರವು ಆದಿತ್ಯ–ಎಲ್1 ಉಪಗ್ರಹದ ಮಾಹಿತಿ ಹಾಗೂ ಪ್ರಯೋಗಗಳ ಬಗ್ಗೆ ಇಸ್ರೋ ವಿಜ್ಞಾನಿಗಳ ನೇತೃತ್ವ ಹಾಗೂ ಭಾಗವಹಿಸುವಿಕೆಯೊಂದಿಗೆ ಜಿಲ್ಲೆಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪ್ರತ್ಯೇಕ ಕಾರ್ಯಗಾರಗಳನ್ನು ಆಯೋಜಿಸಿತ್ತು.

ಈಗ ಆದಿತ್ಯ-ಎಲ್1 ಉಪಗ್ರಹ ಉಡ್ಡಯನ ಸಂದರ್ಭದಲ್ಲಿ ವಿಜ್ಞಾನ ಕೇಂದ್ರ ಅದರ ನೇರಪ್ರಸಾರ ಹಾಗೂ ಭಿತ್ತಿ ಚಿತ್ರ ಪ್ರದರ್ಶನವನ್ನು ಬೆಳಿಗ್ಗೆ 11.30ಕ್ಕೆ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಏರ್ಪಡಿಸಿದೆ. ಉಪಗ್ರಹದ ವಿವರಗಳನ್ನು ಕೇಂದ್ರದ ಸಿಬ್ಬಂದಿ ನೀಡಲಿದ್ದು, ಆಸಕ್ತರು ಭಾಗವಹಿಸುವಂತೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ಕೆ.ವಿ. ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಿರಾಡಿ ಘಾಟಿ | ರಾಷ್ಟ್ರೀಯ ಹೆದ್ದಾರಿ -ರೈಲು ಸಂಪರ್ಕ ಅಭಿವೃದ್ದಿಗೆ ಸಂಯೋಜಿತ ಡಿಪಿಆರ್ ತಯಾರಿಸಲು ಮನವಿ
April 17, 2025
6:41 PM
by: The Rural Mirror ಸುದ್ದಿಜಾಲ
ಮಳೆಗಾಲ ಸಿದ್ಧತೆ | ಚರಂಡಿ ಹೂಳೆತ್ತಲು ಜಿಲ್ಲಾಧಿಕಾರಿ ಸೂಚನೆ
April 17, 2025
6:35 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 17-04-2025 | ಎ.20 ರಿಂದ ರಾಜ್ಯದ ವಿವಿದೆಡೆ ಮತ್ತೆ ಮಳೆ
April 17, 2025
4:50 PM
by: ಸಾಯಿಶೇಖರ್ ಕರಿಕಳ
ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”
April 17, 2025
10:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group