ತೆಂಗಿನಲ್ಲಿ ಅರಳಿದ “ಪಿಂಗಾರ” | ತೆಂಗು ಕೊಯ್ಲು ತಂಡ ರಚನೆ ಮಾಡಿದ “ಪಿಂಗಾರ” ರೈತ ಉತ್ಪಾದಕ ಕಂಪನಿ |

Advertisement
Advertisement

ವಿಟ್ಲದ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿ (FPO) ತೆಂಗು ಬೆಳೆಗಾರರಿಗೆ ಸಮಸ್ಯೆ ನಿವಾರಣೆಗೆ ಹೆಜ್ಜೆ ಇರಿಸಿದೆ. ತೆಂಗು ಕೊಯ್ಲು ಮಾಡುವ ತಂಡವನ್ನು ರಚನೆ ಮಾಡಿದ್ದು ಸೋಮವಾರ ಕೊಯ್ಲು ಆರಂಭಿಸಿದೆ. ಕಂಪನಿಯ ನಿರ್ದೇಶಕ ಜಯರಾಮ ರೈ ಅವರ ಮನೆಯಲ್ಲಿ  ತೆಂಗು ಕೊಯ್ಲು ತಂಡ ಕೆಲಸ ಆರಂಭಿಸಿತು.

Advertisement

Advertisement
Advertisement

ಬಂಟ್ವಾಳ ತಾಲೂಕು ವಿಟ್ಲದಲ್ಲಿರುವ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯು ಈಗಾಗಲೇ  ಅಡಿಕೆ ಕೊಯ್ಲು ತಂಡವನ್ನು ರಚಿಸಿದೆ. ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಯ ಕೆಲಸ ನಡೆಸುತ್ತಿದ್ದು, ಇದೀಗ ತೆಂಗು ಕೊಯ್ಲು ಪಡೆಯನ್ನು ಸಿದ್ಧಗೊಳಿಸಿದೆ. ಈ ತಂಡದ ಕೆಲಸವನ್ನು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಉದ್ಘಾಟಿಸಿ ಶುಭಹಾರೈಸಿದರು.

Advertisement
Advertisement

ಈ ಸಂದರ್ಭ ಮಾತನಾಡಿದ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ, ತೆಂಗು ಕೊಯ್ಲು ತಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆರಂಭವಾಗಿದೆ. ಈ ತಂಡ ಇನ್ನಷ್ಟು ವಿಸ್ತಾರಗೊಳ್ಳಬೇಕು. ಇದಕ್ಕಾಗಿ ಅಲ್ಲಲ್ಲಿ ಸಹಕಾರಿ ಸಂಘಗಳು, ಎಫ್‌ಪಿಒ ಗಳು ತಂಡಗಳನ್ನು ರಚನೆ ಮಾಡಬೇಕು, ಈ ಮೂಲಕ ಕೃಷಿಕರಿಗೆ ನೆರವಾಗಬಹುದು  ಎಂದು ಹೇಳಿದರು.

Advertisement
Advertisement

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ ಮಾತನಾಡಿ, ಕರೆದಲ್ಲಿಗೆ ತೆರಳಿ ತೆಂಗು ಕೊಯ್ಲು ಮಾಡುವ ಯೋಜನೆ ಇದಾಗಿದೆ. ಸದ್ಯ ಸುಮಾರು 25 ಕಿಮೀ ವ್ಯಾಪ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು ಮುಂದೆ ಅಗತ್ಯ ಬಿದ್ದರೆ ವಿಸ್ತರಣೆ ಮಾಡಲಾಗುವುದು  ಎಂದರು.

Advertisement
Advertisement

ಪಿಂಗಾರ ಸಂಸ್ಥೆಗೆ ಕರೆ ಮಾಡಿ ರೈತರು ಕೊಯ್ಲಿಗೆ ದಿನ ನಿಗದಿ ಮಾಡಬೇಕು. ನಿಗದಿತ ದಿನದಂದು ನಾಲ್ವರು ಕಾರ್ಮಿಕರ ಜೊತೆ ಓರ್ವ ಮ್ಯಾನೇಜರ್‌ ಓಮ್ನಿ ವಾಹನದಲ್ಲಿ ತೋಟಕ್ಕೇ ಬಂದು ತೆಂಗಿನ ಕೊನೆಗಳನ್ನು ಕತ್ತಿಯಿಂದ ಕಡಿದು ಕೊಡುತ್ತಾರೆ. ಒಂದು ಮರದ ಕೊಯ್ಲಿಗೆ 50 ರು. ನಿಗದಿಪಡಿಸಲಾಗಿದೆ. ಕನಿಷ್ಠ, ಗರಿಷ್ಠ ಮರಗಳ ಸಂಖ್ಯೆಯ ಮಿತಿ ಇಲ್ಲ, ಕರೆ ಬಂದಲ್ಲಿಗೆ ತೆರಳಿ ವರ್ಷಪೂರ್ತಿ ತಂಡ ಕಾರ್ಯಾಚರಿಸಲಿದೆ ಎಂದು ಹೇಳುತ್ತಾರೆ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಸಿಇಒ ಪ್ರದೀಪ್.‌ ಪಿಂಗಾರ ಸಂಸ್ಥೆಯ ಸಂಪರ್ಕ ಸಂಖ್ಯೆ 08255265799 ಅಥವಾ 9480229008

Advertisement
Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ತೆಂಗಿನಲ್ಲಿ ಅರಳಿದ “ಪಿಂಗಾರ” | ತೆಂಗು ಕೊಯ್ಲು ತಂಡ ರಚನೆ ಮಾಡಿದ “ಪಿಂಗಾರ” ರೈತ ಉತ್ಪಾದಕ ಕಂಪನಿ |"

Leave a comment

Your email address will not be published.


*