ಕಳೆದ 10-12 ದಿನಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡದ(Uttara Kannada) ಜನತೆ ನಲುಗಿದ್ದಾರೆ. ಈ ಮಧ್ಯೆ ಅಂಕೋಲದಲ್ಲಿ ನಡೆದ ಗುಡ್ಡ ಕುಸಿತ ದುರಂತ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿತ್ತು. ಇದೀಗ ಉತ್ತರ ಕನ್ನಡದಲ್ಲಿ ಮಳೆ(Rain) ಅಬ್ಬರ ಕಮ್ಮಿಯಾಗಿ ನದಿ, ತೊರೆ, ಬಾವಿಗಳು ನೀರಿನಿಂದ ತುಂಬಿದ್ದರು, ಕೆಲ ಊರಿನ ಜನಕ್ಕೆ ಕುಡಿಯಲು(Drinking water) ಹಾಗೂ ದಿನ ಬಳಕೆಗೆ ನೀರಿಲ್ಲದೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ನೆರೆ ಬಂದು ಜನರ ಜೀವನ ದಿಕ್ಕಾಪಾಲಾಗಿದೆ. ಸದ್ಯ ಕುಮಟಾದ ಹಲವೆಡೆ ಜನರಿಗೆ ಕುಡಿಯಲು ನೀರಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸ. ಹೌದು, ಅಘನಾಶಿನಿಯ (Aghanashini) ನೆರೆಗೆ ಸಿಕ್ಕಿ ನಲುಗುತ್ತಿರುವ ಕುಮಟಾದ ಹೆಗಡೆ ಗ್ರಾಮಸ್ಥರಿಗೆ ಕುಡಿಯಲು ನೀರಿಲ್ಲ.
ನೀರು ಪೂರೈಕೆ : ಅಣ್ಣಪ್ಪ ಎಂಬುವವರ ನೇತೃತ್ವದಲ್ಲಿ ಯುವಾಬ್ರಿಗೇಡ್‌ನ 10 ಜನರ ತಂಡವೊಂದು ಕುಮಟಾ ತಾಲೂಕಿನ ಹೆಗಡೆಯ ಗ್ರಾಮದ 40 ಮನೆಗಳಿಗೆ ಹಗಲು- ರಾತ್ರಿ ಎನ್ನದೇ ನೀರು ಪೂರೈಕೆ ಮಾಡಿದೆ. ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನ ಪೂರೈಕೆಯನ್ನು ಮಚಗೋಣದಿಂದ ತಂದು ಈ ತಂಡ ಪೂರೈಸುತ್ತಿದೆ. ಈಗಾಗಲೇ ಗ್ರಾಮಸ್ಥರಿಗಾಗಿ 12,000 ಲೀಟರ್‌ನಷ್ಟು ನೀರನ್ನು ಹಂಚಿದೆ. ಎರಡು ಪಿಕಪ್ ವಾಹನಗಳಲ್ಲಿ ತಂಡದ ಸದಸ್ಯರು 40 ಕುಟುಂಬದ 200 ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಒಟ್ಟಿನಲ್ಲಿ ಸಮುದ್ರ ತುಂಬಾ ನೀರಿದ್ರೂ, ಕುಡಿಯೋಕೆ ಆಗಲ್ಲ ಅನ್ನೋ ಹಾಗೆ ಉತ್ತರ ಕನ್ನಡದ ಹಲವೆಡೆ ಮನೆ ಸುತ್ತಮುತ್ತ ನೀರಿದ್ರೂ ನೆರೆಯ ನಡುವೆ ಕುಡಿಯುವ ನೀರಿಗಾಗಿ ಬವಣೆ ಎದುರಿಸುವಂತಾಗಿದೆ.
ನೆರೆಯಿಂದಾಗಿ ನೀರಿನಲ್ಲಿ ಕೆಸರು ಹಾಗೂ ಮಣ್ಣು ಮಿಶ್ರಣಗೊಂಡಿರುವುದರಿಂದ ಗೃಹ ಬಳಕೆಗೆ ಉಪಯೋಗಿಸಲಾಗಂತಾಗಿದೆ. ಇದರಿಂದ ಊರ ಜನ ನೀರಿಗಾಗಿ ಪರದಾಡುವಂತಾಗಿದೆ. ಜನ ಪ್ರತಿನಿಧೀಗಳು ಮಾಡಬೇಕಾದ ಕೆಲಸವನ್ನು ಯುವಾ ಬ್ರಿಗೇಡ್ ಮಾಡಿ ಊರ ಜನರ ನೀರಿನ ಬವಣೆಯನ್ನು ನೀಗಿಸುತ್ತಿದೆ.
- ಅಂತರ್ಜಾಲ ಮಾಹಿತಿ