ಕೊಪ್ಪಳ ನಗರದಲ್ಲಿ ಆಯೋಜನೆಗೊಂಡಿದ್ದ ಆರು ದಿನಗಳ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನ ಮುಕ್ತಾಯಗೊಂಡಿದೆ. ಈ ಅಭಿಯಾನದಲ್ಲಿ 45 ಲಕ್ಷಕ್ಕೂ ಹೆಚ್ಚಿನ ಸಸಿಗಳು ಹಾಗೂ ವಿವಿಧ ಪರಿಕರಗಳ ಬೇಡಿಕೆಯ ವಹಿವಾಟು ನಡೆಸುವ ಮೂಲಕ ಸಸ್ಯಸಂತೆ ವಿಶೇಷವಾಗಿ ಗಮನ ಸೆಳೆದಿದೆ. ಇಲಾಖೆಯ ಮಾದರಿ ಕಾರ್ಯ ಇದಾಗಿದೆ.
ತೋಟಗಾರಿಕಾ ಬೆಳೆಗಳ ಸಸಿಗಳು ಹೆಚ್ಚಾಗಿ ಮಾರಾಟವಾಗಿದ್ದವು. ವಿದೇಶಿ ಸಸಿಗಳಲ್ಲಿ ಮುಖ್ಯವಾಗಿ ಮಾವಿನ ತಳಿ ಮಿಯಾಚಾಕಿ, ಮೆಕಡೋಮಿಯಾ, ಮ್ಯಾಂಗೋಸ್ಟಿನ್, ಲಿಚ್ಚಿ, ವಿದೇಶಿ ಹಲಸು ಮತ್ತು ಚರಿ ಸಸಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ. ರೈತರು ಸಸ್ಯ ಸಂತೆಯಲ್ಲಿ ಹಣ್ಣು ಮತ್ತು ತೋಟಗಾರಿಕಾ ಸಸಿಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದು, 25 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸ್ವದೇಶಿ ಮತ್ತು ವಿದೇಶಿ ಸಸಿಗಳ ಖರೀದಿಗೆ ಮುಂಗಡವಾಗಿ ಹೆಸರು ನೊಂದಾಯಿಸಿದ್ದಾರೆ. 2 ಸಾವಿರ ಎಕರೆಗೂ ಹೆಚ್ಚಿನ ತೋಟಗಾರಿಕಾ ಪ್ರದೇಶಗಳಲ್ಲಿ ಮಾವು, ಮೂಸಂಬಿ, ನೇರಳೆ, ಸೇಬು, ನಿಂಬೆ, ಹಲಸು ಹಾಗೂ ಸಾಂಬಾರ ಪದಾರ್ಥಗಳನ್ನು ಬೆಳೆಯಲು ಮುಂದಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ರಾಜ್ಯ ವಲಯದ ಸಹಾಯಕ ನಿರ್ದೇಶಕ ಮಂಜುನಾಥ್ ದೊಡ್ಡಪತ್ತಾರ ಹೇಳುತ್ತಾರೆ.
ಮುನಿರಾಬಾದ್ ತೋಟಗಾರಿಕಾ ಇಲಾಖೆಯಿಂದ ಸಸ್ಯಸಂತೆಯ ಬಗ್ಗೆ ಮಾಹಿತಿ ದೊರೆಯಿತು. ಇಲ್ಲಿ ವಿಭಿನ್ನ ತಳಿಯ ಹೂವು ಹಾಗೂ ಹಣ್ಣಿನ ಸಸಿಗಳನ್ನು ಖರೀದಿ ಮಾಡಿರುವುದಾಗಿ ರೈತರು ಅನುಭವ ಹಂಚಿಕೊಂಡಿದ್ದಾರೆ. ಮೇಳದಲ್ಲಿ ಸ್ವದೇಶಿ ಹಾಗೂ ವಿದೇಶಿ ಹಣ್ಣಿನ ಸಸಿಗಳ ಕುರಿತಾಗಿ ಸಸ್ಯಸಂತೆಯಲ್ಲಿ ಮಾಹಿತಿ ದೊರಕಿದ್ದು, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸಸಿಗಳನ್ನು ಕೊಳ್ಳಲು ಸಾಧ್ಯವಾಗಿದ್ದರ ಬಗ್ಗೆ ರೈತ ಪ್ರಶಾಂತ್ ನಿಲೋಗಲ್ ಸಂತಸ ಹಂಚಿಕೊಂಡರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…