ಮಣ್ಣಿನ ಸವೆತ ತಡೆಯಲು ಲಾವಂಚ ಹುಲ್ಲು ನೆಡಿ | ರೈತರ ನೆಲದ ಸಂರಕ್ಷಣೆಗೆ, ಅಂತರ್ಜಲದ ಮರುಪೂರಣಕ್ಕೆ ಲಾವಂಚ ಒಂದು ಪ್ರಬಲ ಅಸ್ತ್ರ |

July 22, 2024
12:59 PM

ಮಣ್ಣಿನ ಸವೆತವು(Soil erosion) ಮಣ್ಣನ್ನು ಅದರ ಮೂಲ ಸ್ಥಳದಿಂದ ಸ್ಥಳಾಂತರಿಸುವ ಅಥವಾ ತೊಳೆಯುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಮಣ್ಣಿನ(Soil) ರಚನೆ ಮತ್ತು ಮಣ್ಣಿನ ನಷ್ಟದ ನೈಸರ್ಗಿಕ ಸಮತೋಲನವು ಅಡ್ಡಿಪಡಿಸಿದಾಗ ಇದು ಸಂಭವಿಸುತ್ತದೆ, ಇದು ಫಲವತ್ತಾದ ಮೇಲ್ಮಣ್ಣು ತೆಗೆಯುವಿಕೆಗೆ ಕಾರಣವಾಗುತ್ತದೆ.

Advertisement
Advertisement
Advertisement

ಮಣ್ಣಿನ ಸವೆತವು ಗಾಳಿ(Air), ನೀರು(Water) ಮತ್ತು ಗುರುತ್ವಾಕರ್ಷಣೆಯಂತಹ ನೈಸರ್ಗಿಕ ಅಂಶಗಳಿಂದ ಉಂಟಾಗಬಹುದು, ಆದರೆ ಅರಣ್ಯನಾಶ(Deforestation), ಅಸಮರ್ಪಕ ಭೂ ನಿರ್ವಹಣೆ ಮತ್ತು ತೀವ್ರವಾದ ಕೃಷಿಯಂತಹ ಮಾನವ ಚಟುವಟಿಕೆಗಳು ಮಣ್ಣಿನ ಸವೆತಕ್ಕೆ ಪ್ರಮುಖ ಕಾರಣ. ಅದರಲ್ಲೂ ಮಳೆಗಾಲದಲ್ಲಿ ಇದರ ಪ್ರಕ್ರಿಯೆ ಜೋರು. ಇದನ್ನು ತಡೆಯಲು  ನೈಸರ್ಗಿಕವಾಗಿ ಬೆಳೆಯುವ ಹುಲ್ಲುಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಲಾವಂಚದ ಹುಲ್ಲುಗಳನ್ನು(Vetiver grass) ನೆಡುವುದರಿಂದ ಮಣ್ಣಿನ ಸವೆತ ತಡೆಯಲು ಬಹಳ ಉಪಯೋಗ. ಲಾವಂಚದ ಹುಲ್ಲು  ಯಾವ ರೀತಿಯಲ್ಲಿ ಮಣ್ಣಿನ ಸವಕಳಿಯನ್ನು ತಡೆಯುವಲ್ಲಿ ಪ್ರಕೃತಿಗೆ(Environment) ಸಹಾಯ ಮಾಡುತ್ತವೆ ಮತ್ತು ಮಳೆಯ ನೀರು ಅಂತರ್ಜಲವನ್ನಾಗಿಸುವಲ್ಲಿ(Underground water) ಯಾವ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಅನ್ನೋದನ್ನ ನೋಡೋಣ..

Advertisement

ಮಣ್ಣಿನ ಸವೆತವು ಗಮನಾರ್ಹವಾದ ಪರಿಸರ ಮತ್ತು ಕೃಷಿ ಸವಾಲುಗಳನ್ನು ಒಡ್ಡುತ್ತದೆ. ಏಕೆಂದರೆ ಇದು ಫಲವತ್ತಾದ ಮಣ್ಣಿನ ನಷ್ಟಕ್ಕೆ ಕಾರಣವಾಗುತ್ತದೆ, ನೀರಿನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ, ಕೃಷಿ ಉತ್ಪಾದಕತೆ ಕಡಿಮೆಯಾಗಿದೆ ಮತ್ತು ಭೂಮಿಯ ಅವನತಿಗೆ ಕಾರಣವಾಗುತ್ತದೆ. ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಮತ್ತು ಭೂಮಿಯ ಆರೋಗ್ಯ ಮತ್ತು ಉತ್ಪಾದಕತೆಯನ್ನು ಸಂರಕ್ಷಿಸಲು ಮಣ್ಣಿನ ಸಂರಕ್ಷಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ .

 

Advertisement

ಲಾವಂಚ ಬಹುವಾರ್ಷಿಕ ಬೆಳೆ: ಮರಳು ಮಣ್ಣನ್ನು ಹೊರತುಪಡಿಸಿ ಬೇರೆ ಎಲ್ಲಾ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ. ಸಸ್ಯ ಮೈದಾನ, ಗುಡ್ಡಪ್ರದೇಶಗಳಲ್ಲಿ ಮತ್ತು ನದಿ ದಡದಲ್ಲಿ ಸಹಜವಾಗಿ ಬೆಳೆಯುತ್ತದೆ. ಸಮುದ್ರಮಟ್ಟಕ್ಕಿಂತ ಸು. 1200 ಮೀ ಎತ್ತರದವರೆಗೆ ಮತ್ತು ವರ್ಷಕ್ಕೆ 100-200 ಸೆಂಮೀ ಮಳೆ ಸುರಿವ ಪ್ರದೇಶಗಳಲ್ಲಿ ಇವನ್ನು ಬೆಳೆಸಬಹುದು. ದುಂಡಗಿರುವ ಕಾಂಡ ಭೂಮಿಯಲ್ಲಿ ಹುದುಗಿರುತ್ತದೆ. ಎಲೆಗಳ ಉದ್ದ 1.5-2 ಮೀ, ಅಗಲ 1-20 ಸೆಂಮೀ. ಸಸ್ಯದ ಬೇರುಗಳು ಮೃದು. ಸುವಾಸನೆಉಂಟು. ಬಣ್ಣ ತಿಳಿಹಳದಿ, ಹಳದಿ, ಕಂದು ಅಥವಾ ತಿಳಿಗೆಂಪು. ಸಂಕೀರ್ಣ ಪುಷ್ಪಗುಚ್ಛ (ಪ್ಯಾನಿಕಲ್). ಇದರ ಉದ್ದ 15-40 ಸೆಂಮೀ. ಇದರ ಹೂಗಳಿಗೆ ಸ್ಪೈಕ್‌ಲೆಟ್‌ಗಳು (ಕಿರುಹೂಗಳು) ಎಂದು ಹೆಸರು. ಇವುಗಳಿಗೆ ತಿಳಿಹಸುರು ಅಥವಾ ನೇರಿಳೆ ಬಣ್ಣ ಲೇಪಿಸಿದಂತಿರುವುವು. ಗಿಡ ಬೆಳೆದು ಒಂದು ವರ್ಷದ ಬಳಿಕ ಬೇರುಗಳನ್ನು ಮೊನಚಾದ ಚಾಕುವಿನಿಂದ ಬೇರ್ಪಡಿಸಲಾಗುತ್ತದೆ.

ಸಾಮಾನ್ಯವಾಗಿ ನದಿ, ಕೆರೆ, ತೋಡು ಇತ್ಯಾದಿಗಳ ಬದಿಯಲ್ಲಿ ಲಾವಂಚದ ಗಿಡಗಳನ್ನು ಕಾಣಬಹುದು. ಲಾವಂಚದ ಬೇರುಗಳು ಸುಮಾರು ಎರಡರಿಂದ ಮೂರು ಮೀಟರುಗಳಷ್ಟು ಭೂಮಿಯ ಆಳಕ್ಕೆ ಇಳಿಯಬಲ್ಲವು. ಇದರಿಂದ ಅದು ಮಣ್ಣಿನ ಸವಕಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ನೀರಿಂಗಿಸುವ  ಗುಣವಿದೆ. ಇಳಿಜಾರು ಪ್ರದೇಶಗಳಲ್ಲಿ ಲಾವಂಚದ ಗಿಡಗಳನ್ನು ನೆಡುವುದರಿಂದ ಮಳೆ ನೀರು ಹರಿದು ಹೋಗುವುದನ್ನು ತಡೆಯಬಹುದು. ಮಾತ್ರವಲ್ಲ ನೀರಿನೊಂದಿಗೆ ಕೊಚ್ಚಿಹೋಗುವ ಮಣ್ಣನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಬಹುದು.

Advertisement

ಇದರಿಂದಲೇ ಲಾವಂಚವನ್ನು “ಬಡವನ ನೀರಾವರಿ” ಎನ್ನುವರು. ಜಾನುವಾರುಗಳಿಗೆ  ಮೇವು ಒದಗಿಸುವುದಲ್ಲದೆ ಭೂಮಿಯ ಮೇಲೆ ಹಸಿರು ಹೊದಿಕೆಯಾಗಿದ್ದು, ತಂಪಿನ ವಾತಾವರಣ ಸೃಷ್ಟಿಸುವುದು. ನೀರಿನ ಶುದ್ಧೀಕರಣಕ್ಕೆ ನಮ್ಮಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ವೆಟಿವೇರ್‌ಗಳನ್ನು ಬಳಸಲಾಗುತ್ತದೆ. ಮುಖ್ಯವಾಗಿ ಕ್ವೀನ್ಸ್‌‌ಲ್ಯಾಂಡ್‌, ಆಸ್ಟ್ರೇಲಿಯಾ, ಚೀನಾ, ಥೈಲ್ಯಾಂಡ್‌, ವಿಯೆಟ್ನಾಂ, ಸೆನೆಗಲ್‌ ಮುಂತಾದವುಗಳು. ಅವು ಕೆಲವೇ ತಿಂಗಳುಗಳಲ್ಲಿ ಬೃಹತ್ ಪೊದೆಯಾಗಿ ಬೆಳೆದು ಹೊಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಇಂಗಿಸಿಕೊಡುತ್ತವೆ. ಒಂದರ್ಥದಲ್ಲಿ ಇವನ್ನು ಬಡವನ ನೀರಾವರಿ ಎಂದೂ ಹೇಳಬಹುದು. ರೈತ ಸಮುದಾಯ ತಮ್ಮ ನೆಲದ ಸಂರಕ್ಷಣೆಗೆ, ಅಂತರ್ಜಲದ ಮರುಪೂರಣಕ್ಕೆ ಲಾವಂಚವನ್ನು ಒಂದು ಪ್ರಬಲ ಅಸ್ತ್ರವನ್ನಾಗಿ ಬಳಸಬಹುದು. ಲಾವಂಚವು ಮೇವು, ಕೃಷಿಭೂಮಿಯ ಹೊದಿಕೆಗೆ ಹುಲ್ಲು ಹಾಗೂ ಉರುವಲಿನಂತಹ ಕಿರು ಉತ್ಪನ್ನಗಳನ್ನೂ ಕೊಡುತ್ತದೆ.

ಮೂಲ : digital source

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಹಿಳೆಯರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ | ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹೇಗೆ..?
October 18, 2024
6:58 AM
by: ದ ರೂರಲ್ ಮಿರರ್.ಕಾಂ
ಭೂಮಿ ಹುಣ್ಣಿಮೆ | ಅನ್ನದಾತರಿಂದ ಹೊಲ ಗದ್ದೆಗಳಲ್ಲಿ ವಿಶೇಷ ಪೂಜೆ |
October 18, 2024
6:50 AM
by: The Rural Mirror ಸುದ್ದಿಜಾಲ
ಕೊಪ್ಪಳದಲ್ಲಿ ಮಳೆಯಿಂದ ದ್ರಾಕ್ಷಿ ಬೆಳೆ ನಾಶ | ಸಂಕಷ್ಟಕ್ಕೆ ಸಿಲುಕಿದ ರೈತರು
October 18, 2024
6:39 AM
by: ದ ರೂರಲ್ ಮಿರರ್.ಕಾಂ
6 ಜಿ ತಂತ್ರಜ್ಞಾನದತ್ತ ಮುನ್ನುಗ್ಗುತ್ತಿರುವ ಭಾರತ | ಹಳ್ಳಿಗಳಿಗೂ ವೇಗ ಇಂಟರ್ನೆಟ್‌ ಏಕೆ ಅಗತ್ಯ..? | ಬಿಎಸ್‌ಎನ್‌ಎಲ್‌ ಒಳಗೆ ಕೆಲಸ ಹೇಗೆ ನಡೆಯುತ್ತಿದೆ…?
October 18, 2024
6:32 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror