“ತಾಯಿಯ ಹೆಸರಲ್ಲಿ ಒಂದು ಗಿಡ” ಅಭಿಯಾನ | ಪರಿಸರ ಉಳಿಸಿ ಇದೂ ಒಂದು ಅಭಿಯಾನ |

August 27, 2024
11:53 AM
ನಮ್ಮ ತಾಯಂದಿರು ನಮ್ಮನ್ನು ಪ್ರೀತಿಸುವಂತೆಯೇ, ಪ್ರಕೃತಿ ಮಾತೆ ನಮ್ಮನ್ನು ಕಾಳಜಿ ವಹಿಸುತ್ತದೆ, ನಿರೀಕ್ಷೆಯಿಲ್ಲದೆ ಸಹಾಯ ಮಾಡುತ್ತದೆ. ಇದಕ್ಕಾಗಿಯೇ ತಾಯಿಯ ಹೆಸರಿನಲ್ಲಿ ನಮ್ಮದೂ ಒಂದು ಗಿಡ.

ಕಳೆದೊಂದು ವಾರದಿಂದ “ತಾಯಿಯ ಹೆಸರಲ್ಲಿ ಒಂದು ಗಿಡ” ಅಭಿಯಾನಕ್ಕೆ ಎಲ್ಲೆಡೆಯೂ ಚಾಲನೆ ನೀಡಲಾಗಿದೆ. ಪರಿಸರ ಸ್ವಚ್ಛತೆ ಹಾಗೂ ಸ್ವಚ್ಛ ಪರಿಸರವೂ ಒಂದು ಅಭಿಯಾನವಾಗಿದೆ. ಎಲ್ಲಾ ಅಭಿಯಾನಗಳೂ ಒಂದು ದಿನಕ್ಕೆ ಮುಗಿಯುವುದಿಲ್ಲ, ಇದು ನಿರಂತರ ಪ್ರಕ್ರಿಯೆ. 

Advertisement
Advertisement

ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನವು ರಾಜ್ಯದ ಮಾತ್ರವಲ್ಲ ದೇಶದ ಹಲವು ಕಡೆಗಳಲ್ಲಿ ನಡೆಯುತ್ತಿದೆ. ಈಗಾಗಲೇ ಪರಿಸರ ಉಳಿಸುವ ಅಭಿಯಾನವು ಹಾಗೂ ಹವಾಮಾನ ಬದಲಾವಣೆಯ ನಿಯಂತ್ರಣ ತೀರಾ ಅನಿವಾರ್ಯವಾಗಿ ನಡೆಯಲೇಬೇಕಿದೆ. ಹವಾಮಾನ ಬದಲಾವಣೆ ಕಾರಣದಿಂದ ಕೃಷಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಈಗಾಗಲೇ ಹಲವು ಸಂಕಷ್ಟಗಳು ಆರಂಭವಾಗಿದೆ. ಇದರ ನಿಯಂತ್ರಣಕ್ಕೆ ಇಂತಹ ಅಭಿಯಾನಗಳು ನಿರಂತರವಾಗಿ ನಡೆಯಬೇಕಿದೆ. ಶಾಳೇಐ ಆವರಣಗಳಲ್ಲಿ ಹಣ್ಣಿನ ಗಿಡನಗಳನ್ನು ನೆಡುವ ಮೂಲಕ ಮಕ್ಕಳಿಗೂ, ಪರಿಸರಕ್ಕೂ ಪೂರಕವಾದ ವಾತಾವರಣ ಸೃಷ್ಟಿಯಾಗಬಹುದಾಗಿದೆ.

Advertisement

“ತಾಯಿಯ ಹೆಸರಲ್ಲಿ ಒಂದು ಗಿಡ” ಅಭಿಯಾನದಡಿ ಕೋಲಾರ ತಾಲೂಕಿನ ಸೀತಿ ಬಿಜಿಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಏಕಕಾಲದಲ್ಲಿ 100 ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.  ವಿದ್ಯಾರ್ಥಿಗಳು ಕೂಡಾ ಹುಟ್ಟುಹಬ್ಬದಂದು ಒಂದೊಂದು ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡಲು ಇಲ್ಲಿ ನಿರ್ಧರಿಸಲಾಗಿದೆ.  ಇದರ ಜೊತೆಗೇ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಿ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿಸಲೂ ಚಿಂತನೆ ನಡೆದಿದೆ.

ತಾಯಿಯ ಹೆಸರಿನಲ್ಲಿ ಗಿಡ ನೆಡುವುದು ಏಕೆ? ತಾಯಿ ಯಾವತ್ತೂ ಪ್ರೀತಿ, ಸಹಾನುಭೂತಿ ಮತ್ತು  ಕಾಳಜಿಯನ್ನು ಹೊಂದಿದವಳು. ಪರಿಸರವೂ ಹಾಗೆಯೇ, ಯಾವತ್ತೂ ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನೂ ಕಾಪಾಡುತ್ತಾ ಇರುತ್ತದೆ. ತಾಯಿಯಂತೆಯೇ, ಪ್ರಕೃತಿ ಮಾತೆ ಕೂಡ ನಮ್ಮನ್ನು ಬೇಷರತ್ತಾಗಿ ಪೋಷಿಸುತ್ತಾಳೆ, ಯಾವಾಗಲೂ ನಮ್ಮನ್ನು ರಕ್ಷಿಸುತ್ತಾಳೆ. ಅವಳ ಅಪ್ಪುಗೆಯಿಂದ ಸಾಂತ್ವನವನ್ನು ಕಂಡುಕೊಳ್ಳುತ್ತೇವೆ. ಹೀಗಾಗಿ ಅವುಗಳ ರಕ್ಷಣೆ ಎಲ್ಲರ ಜವಾಬ್ದಾರಿಯೂ ಹೌದು. ಗಿಡಗಳನ್ನು ನೆಟ್ಟು ತಾಯಂದಿರು ನೀಡುವ ಪ್ರೀತಿ, ಕಾಳಜಿಯನ್ನು ಗೌರವಿಸೋಣ.

Advertisement

ನಮ್ಮ ತಾಯಂದಿರು ನಮ್ಮನ್ನು ಪ್ರೀತಿಸುವಂತೆಯೇ, ಪ್ರಕೃತಿ ಮಾತೆ ನಮ್ಮನ್ನು ಕಾಳಜಿ ವಹಿಸುತ್ತದೆ, ನಿರೀಕ್ಷೆಯಿಲ್ಲದೆ ಸಹಾಯ ಮಾಡುತ್ತದೆ. ಇದಕ್ಕಾಗಿಯೇ ತಾಯಿಯ ಹೆಸರಿನಲ್ಲಿ ನಮ್ಮದೂ ಒಂದು ಗಿಡ. ಅದು ಫೋಟೋ ತೆಗೆಯಲು ಅಲ್ಲ…!.

The “Plant in Mother’s Name” campaign has been launched globally over the past week. In addition, promoting environmental cleanliness and a clean environment is also a key focus of this campaign. It is important to recognize that these campaigns are ongoing efforts and not something that can be achieved in a single day.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆ | ದಕ್ಷಿಣ ಕನ್ನಡದಲ್ಲೂ ಯಶಸ್ವಿಯಾಗಿ ಅನುಷ್ಟಾನ |
September 16, 2024
11:17 AM
by: ದ ರೂರಲ್ ಮಿರರ್.ಕಾಂ
ಹಾಲಿನ ದರ ಹೆಚ್ಚಳ ಚರ್ಚೆ| ಹೈನುಗಾರರಿಗೆ ಪ್ರಯೋಜನವೇನು…? |
September 16, 2024
10:54 AM
by: ದ ರೂರಲ್ ಮಿರರ್.ಕಾಂ
ಭಾರತೀಯ ಕಿಸಾನ್‌ ಸಂಘದ ವತಿಯಿಂದ ಬಲರಾಮ ಜಯಂತಿ ಕಾರ್ಯಕ್ರಮ | ಆಡಿಯೋ ವರದಿ |
September 15, 2024
10:11 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-09-2024 | ಸೆ.21ರಿಂದ ಉತ್ತರ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆ ಸಾಧ್ಯತೆ |
September 15, 2024
4:16 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror