ಕಳೆದೊಂದು ವಾರದಿಂದ “ತಾಯಿಯ ಹೆಸರಲ್ಲಿ ಒಂದು ಗಿಡ” ಅಭಿಯಾನಕ್ಕೆ ಎಲ್ಲೆಡೆಯೂ ಚಾಲನೆ ನೀಡಲಾಗಿದೆ. ಪರಿಸರ ಸ್ವಚ್ಛತೆ ಹಾಗೂ ಸ್ವಚ್ಛ ಪರಿಸರವೂ ಒಂದು ಅಭಿಯಾನವಾಗಿದೆ. ಎಲ್ಲಾ ಅಭಿಯಾನಗಳೂ ಒಂದು ದಿನಕ್ಕೆ ಮುಗಿಯುವುದಿಲ್ಲ, ಇದು ನಿರಂತರ ಪ್ರಕ್ರಿಯೆ.
ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನವು ರಾಜ್ಯದ ಮಾತ್ರವಲ್ಲ ದೇಶದ ಹಲವು ಕಡೆಗಳಲ್ಲಿ ನಡೆಯುತ್ತಿದೆ. ಈಗಾಗಲೇ ಪರಿಸರ ಉಳಿಸುವ ಅಭಿಯಾನವು ಹಾಗೂ ಹವಾಮಾನ ಬದಲಾವಣೆಯ ನಿಯಂತ್ರಣ ತೀರಾ ಅನಿವಾರ್ಯವಾಗಿ ನಡೆಯಲೇಬೇಕಿದೆ. ಹವಾಮಾನ ಬದಲಾವಣೆ ಕಾರಣದಿಂದ ಕೃಷಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಈಗಾಗಲೇ ಹಲವು ಸಂಕಷ್ಟಗಳು ಆರಂಭವಾಗಿದೆ. ಇದರ ನಿಯಂತ್ರಣಕ್ಕೆ ಇಂತಹ ಅಭಿಯಾನಗಳು ನಿರಂತರವಾಗಿ ನಡೆಯಬೇಕಿದೆ. ಶಾಳೇಐ ಆವರಣಗಳಲ್ಲಿ ಹಣ್ಣಿನ ಗಿಡನಗಳನ್ನು ನೆಡುವ ಮೂಲಕ ಮಕ್ಕಳಿಗೂ, ಪರಿಸರಕ್ಕೂ ಪೂರಕವಾದ ವಾತಾವರಣ ಸೃಷ್ಟಿಯಾಗಬಹುದಾಗಿದೆ.
“ತಾಯಿಯ ಹೆಸರಲ್ಲಿ ಒಂದು ಗಿಡ” ಅಭಿಯಾನದಡಿ ಕೋಲಾರ ತಾಲೂಕಿನ ಸೀತಿ ಬಿಜಿಎಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಏಕಕಾಲದಲ್ಲಿ 100 ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ವಿದ್ಯಾರ್ಥಿಗಳು ಕೂಡಾ ಹುಟ್ಟುಹಬ್ಬದಂದು ಒಂದೊಂದು ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡಲು ಇಲ್ಲಿ ನಿರ್ಧರಿಸಲಾಗಿದೆ. ಇದರ ಜೊತೆಗೇ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಿ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿಸಲೂ ಚಿಂತನೆ ನಡೆದಿದೆ.
ತಾಯಿಯ ಹೆಸರಿನಲ್ಲಿ ಗಿಡ ನೆಡುವುದು ಏಕೆ? ತಾಯಿ ಯಾವತ್ತೂ ಪ್ರೀತಿ, ಸಹಾನುಭೂತಿ ಮತ್ತು ಕಾಳಜಿಯನ್ನು ಹೊಂದಿದವಳು. ಪರಿಸರವೂ ಹಾಗೆಯೇ, ಯಾವತ್ತೂ ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನೂ ಕಾಪಾಡುತ್ತಾ ಇರುತ್ತದೆ. ತಾಯಿಯಂತೆಯೇ, ಪ್ರಕೃತಿ ಮಾತೆ ಕೂಡ ನಮ್ಮನ್ನು ಬೇಷರತ್ತಾಗಿ ಪೋಷಿಸುತ್ತಾಳೆ, ಯಾವಾಗಲೂ ನಮ್ಮನ್ನು ರಕ್ಷಿಸುತ್ತಾಳೆ. ಅವಳ ಅಪ್ಪುಗೆಯಿಂದ ಸಾಂತ್ವನವನ್ನು ಕಂಡುಕೊಳ್ಳುತ್ತೇವೆ. ಹೀಗಾಗಿ ಅವುಗಳ ರಕ್ಷಣೆ ಎಲ್ಲರ ಜವಾಬ್ದಾರಿಯೂ ಹೌದು. ಗಿಡಗಳನ್ನು ನೆಟ್ಟು ತಾಯಂದಿರು ನೀಡುವ ಪ್ರೀತಿ, ಕಾಳಜಿಯನ್ನು ಗೌರವಿಸೋಣ.
ನಮ್ಮ ತಾಯಂದಿರು ನಮ್ಮನ್ನು ಪ್ರೀತಿಸುವಂತೆಯೇ, ಪ್ರಕೃತಿ ಮಾತೆ ನಮ್ಮನ್ನು ಕಾಳಜಿ ವಹಿಸುತ್ತದೆ, ನಿರೀಕ್ಷೆಯಿಲ್ಲದೆ ಸಹಾಯ ಮಾಡುತ್ತದೆ. ಇದಕ್ಕಾಗಿಯೇ ತಾಯಿಯ ಹೆಸರಿನಲ್ಲಿ ನಮ್ಮದೂ ಒಂದು ಗಿಡ. ಅದು ಫೋಟೋ ತೆಗೆಯಲು ಅಲ್ಲ…!.
The “Plant in Mother’s Name” campaign has been launched globally over the past week. In addition, promoting environmental cleanliness and a clean environment is also a key focus of this campaign. It is important to recognize that these campaigns are ongoing efforts and not something that can be achieved in a single day.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…