ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ ಯ ಬಗ್ಗೆ ತರಬೇತಿ ಮತ್ತು ವಸ್ತುಪ್ರದರ್ಶನ ನಡೆಯಿತು. ವಸ್ತುಪ್ರದರ್ಶನದಲ್ಲಿ ವಿವಿಧ ಜಿಲ್ಲೆಗಳ ರೈತರು ತಂದಿದ್ದ ಹಣ್ಣುಗಳ ತಳಿಗಳು, ಬೀಜಗಳು, ವೈವಿಧ್ಯತೆಯ ಸ್ಥಳೀಯ ಸೊಪ್ಪು ಹಾಗೂ ತರಕಾರಿಗಳು, ಸಿರಿಧಾನ್ಯಗಳ ತಳಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ. ನಿರಂಜನ ಮೂರ್ತಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿರುವ ಸಸ್ಯ ತಳಿಗಳನ್ನು ಅದರಲ್ಲೂ ವಿಶೇಷವಾಗಿ ರೈತರು ಸಂರಕ್ಷಿಸಿದ ಸಸ್ಯತಳಿಗಳನ್ನು ರಕ್ಷಣೆ ಮಾಡಬೇಕು, ಅದರ ಜೊತೆಗೆ ಹಲಸು ತಳಿಗಳನ್ನೂ ಸಂರಕ್ಷಣೆ ಮಾಡಬೇಕಿದೆ ಎಂದು ಕರೆ ನೀಡಿದರು. ಇದೇ ವೇಳೆ ದೇಸೀ ತಳಿ ಬೀಜ ಸಂರಕ್ಷಕ ರೈತರನ್ನು ಗೌರವಿಸಲಾಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel