ಸಸ್ಯ ಪರಿಚಯ | ಮರಳಿ ತನ್ನಿ ಮರೆತ ಸೊಪ್ಪು – ತುಂಬೆ ಗಿಡ

October 8, 2025
7:25 AM

ಅಚ್ಚ ಬಿಳಿಯ ಹೂಗಳಿಂದ ನಳನಳಿಸುವ ತುಂಬೆ ಗಿಡವು ಶಿವ ದೇವರಿಗೆ ಪ್ರೀತಿಯ ಹೂವಂತೆ. ಮಳೆಗಾಲದಲ್ಲಿ ಅಂಗಳ, ಹೂತೋಟ, ತೋಟದ ಬದಿಗಳಲ್ಲಿ ಹುಟ್ಟಿ ಬೆಳೆಯುವ ತುಂಬೆ ಗಿಡವು ಔಷಧೀಯ ಗಿಡ.

ಚಿಕ್ಕ ಮಕ್ಕಳಿಗೆ ಕಫದ ಸಮಸ್ಯೆ ಯಾದಾಗ ತುಂಬೆ ಎಲೆಗಳ ರಸವನ್ನು ಜೇನುತುಪ್ಪ ಸೇರಿಸಿ ನುಣ್ಣಗೆ ಅರೆದು ಕುಡಿಸಿದರೆ ಕಫ ನಿವಾರಣೆ ಆಗುತ್ತದೆ. ಶೀತ, ನೆಗಡಿ , ಜ್ವರ ತಲೆನೋವು ಮೊದಲಾದ ಮಳೆಗಾಲದ ಸಮಸ್ಯೆಗಳನ್ನು ತುಂಬೆ ಕಷಾಯವನ್ನು ಸೇವಿಸಿ ಕಡಿಮೆ ಮಾಡಿಕೊಳ್ಳಬಹುದು. ಅಲರ್ಜಿ, ತುರಿಕಜ್ಜಿಗಳಿಗೆ ತುಂಬೆ ರಸವನ್ನು ಉಪ್ಪಿನ ಜತೆ ಬೆರೆಸಿ ಹಚ್ಚಿದರೆ ಉಪಶಮನವಾಗುತ್ತದೆ.

ಕಣ್ಣು ನೋವು ಬಂದಾಗ ಒಂದು ಹಿಡಿ ತುಂಬೆಹೂಗಳನ್ನು ಚೆನ್ನಾಗಿ ಜಜ್ಜಿ ಶುದ್ಧ ವಾದ ಬಟ್ಟೆಯನ್ನು ಬಳಸಿ ರಸವನ್ನು ಹಿಂಡಿಕೊಂಡು ಕಣ್ಣಿಗೆ ನಾಲ್ಕಾರು ಹನಿಗಳನ್ನು ದಿನಕ್ಕೆರಡು ಬಾರಿ ಬಿಡಬೇಕು. ಎರಡು ಮೂರು ದಿನಗಳಲ್ಲಿ ಕಣ್ಣುನೋವು ಕಡಿಮೆಯಾಗುತ್ತದೆ. ತುಂಬೆ ಬೇರನ್ನು ಸಹ ಔಷಧವಾಗಿ ಬಳಸುತ್ತಾರೆ.ಆಯುರ್ವೇದದಲ್ಲಿ ತುಂಬೆ ಗಿಡವನ್ನು ತುಂಬಾ ಬಳಕೆ ಮಾಡುತ್ತಾರೆ.

ಮಳೆಗಾಲದಲ್ಲಿ ಸಮೃದ್ಧವಾಗಿ ದೊರೆಯುವ ತುಂಬೆ ಗಿಡಗಳನ್ನು ಬೇರು ಸಹಿತ ಕಿತ್ತು ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡರೆ ಬೇಸಿಗೆಯಲ್ಲಿ ಗಿಡಗಳ ಲಭ್ಯತೆ ಕಡಿಮೆ ಇದ್ದಾಗ ಔಷಧವಾಗಿ ಬಳಸಿ ಕೊಳ್ಳಬಹುದು.

ತುಂಬೆ ಗಿಡ ಚರ್ಮದ ತುರಿಕೆಗೆ ಉತ್ತಮ ಔಷಧವಾಗಿದೆ. ಎಲೆಗಳ ರಸವನ್ನು ಪೇಸ್ಟ್ ಮಾಡಿ ಚರ್ಮಕ್ಕೆ ಲೇಪಿಸಿದರೆ ತಕ್ಷಣ ತುರಿಕೆ ಕಡಿಮೆಯಾಗುತ್ತದೆ. ತುಂಬೆಗಿಡದ ಬೇರಿನ ಪುಡಿಯೊಂದಿಗೆ 1-2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಕುಡಿದರೆ ಸಂಧಿವಾತ ಕಡಿಮೆಯಾಗುತ್ತದೆ. ನಿದ್ರಾಹೀನತೆಯ ನಿವಾರಣೆಗೆ ತುಂಬೆ ಗಿಡದ ಕಷಾಯ ಸಹಕಾರಿ. ತುಂಬೆ ಗಿಡದ ಎಲೆಗಳ ಕಷಾಯ ಮಾಡಿ ಕುಡಿದರೆ ನರಗಳ ಸೆಳೆತ, ಗಂಟು ಕಟ್ಟುವುದು, ನೋವು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತುಂಬೆ ರಸಕ್ಕೆ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿದರೆ ಮಲೇರಿಯಾ ಜ್ವರ ಕಡಿಮೆಯಾಗುತ್ತದೆ.

Advertisement

ದ್ರೋಣಿ ಪುಷ್ಠಿ ಎಂಬ ಹೆಸರಿರುವ ತುಂಬೆ ಗಿಡದ ಪುಡಿಯನ್ನು ಯಕೃತ್ತಿನ ಅಸ್ವಸ್ಥತೆಯನ್ನು ದೂರ ಮಾಡುತ್ತದೆ. ತುಂಬೆ ಗಿಡದ ಕಷಾಯವು ಅಜೀರ್ಣಕ್ಕೆ ಉತ್ತಮ ಪ್ರಯೋಜನಕಾರಿ. ಇದರ ಸಸ್ಯ ಶಾಸ್ತ್ರೀಯ ಹೆಸರು (eucas spera) ಹೊಟ್ಟೆಯಲ್ಲಿ ಜಂತುಹುಳವಿನಿಂದಾಗಿ ಪ್ರಾರಂಭವಾದರೆ ತುಂಬೆಯ ಎಲೆಗಳನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಕಷಾಯ ಮಾಡಿ ಚಿಟಿಕೆ ಅರಸಿನ ಬೆರೆಸಿ ಕುಡಿದರೆ ಶರೀರದಲ್ಲಿ ಹಸಿಗಾಯ ಮಾಯವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಜಯಲಕ್ಷ್ಮಿ ದಾಮ್ಲೆ

ಜಯಲಕ್ಷ್ಮಿ ದಾಮ್ಲೆ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ಸಂಬಂಧಿತ ಬರಹ, ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದಾರೆ.

ಇದನ್ನೂ ಓದಿ

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ
ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror