ಪ್ಲಾಸ್ಟಿಕ್‌ಮಯ ಪರಿಸರ | ಪ್ಲಾಸ್ಟಿಕ್‌ನಲ್ಲೇ ಮುಳುಗಲಿದೆ ಪ್ರಪಂಚ | ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ

October 25, 2023
8:20 PM
ಪ್ಲಾಸ್ಟಿಕ್‌ ಮುಕ್ತ ಭಾರತದ ಕನಸು ಕಂಡಿರುವ ಕೇಂದ್ರ ಸರ್ಕಾರ, ಅಕ್ಟೋಬರ್‌ 2ರ ಬಳಿಕ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಅನ್ನು ಪೂರ್ಣವಾಗಿ ನಿಷೇಧಿಸಿದೆ.

ಜಗತ್ತಿನಲ್ಲಿ ಪ್ರಸ್ತುತ ಇರುವ ಪ್ಲಾಸ್ಟಿಕ್‌ಗಳ(plastic) ಪೈಕಿ ಶೇ. 40 ಪ್ಲಾಸ್ಟಿಕ್‌ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌(single use plastic) ಆಗಿದೆ. ಇಂತಹ ಪ್ಲಾಸ್ಟಿಕ್‌ಗಳು ಒಮ್ಮೆ ಬಳಕೆಯಾದ ಬಳಿಕ ಅವುಗಳು ತ್ಯಾಜ್ಯವಾಗಿ ಬದಲಾಗುತ್ತವೆ. ಸಂಶೋಧನೆಯ ಪ್ರಕಾರ 20ನೇ ಶತಮಾನದ ಉತ್ತರಾರ್ಧದ ಬಳಿಕ ಉತ್ಪಾದನೆಯಾದ ಒಟ್ಟು ಪ್ಲಾಸ್ಟಿಕ್‌ಗಳ ಪೈಕಿ ಶೇ. 79 ಪ್ಲಾಸ್ಟಿಕ್‌ ಪರಿಸರವನ್ನು(Environment) ಸೇರಿವೆ. ಇವುಗಳು ಇಂದು ಪರಿಸರಕ್ಕೆ ಮಾರಕವಾಗಿ ಬದಲಾಗುತ್ತಿವೆ.

Advertisement
Advertisement
Advertisement

ಪ್ರತಿ ವರ್ಷ ಸಮುದ್ರಕ್ಕೆ 48 ಲಕ್ಷದಿಂದ 1 ಕೋಟಿ ಟನ್‌ ಪ್ಲಾಸ್ಟಿಕ್‌ ಸೇರುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣದಲ್ಲಿ ಶೇ. 10 ಹೆಚ್ಚಾಗುತ್ತಿದೆ. ಸಮುದ್ರಕ್ಕೆ ಪ್ಲಾಸ್ಟಿಕ್‌ ಸೇರಿದರೆ ಸಮುದ್ರ ಜೀವಿಗಳಿಗೆ ತೀರಾ‌ ಅಪಾಯಕಾರಿ. ಪ್ಲಾಸ್ಟಿಕ್‌ ಮುಕ್ತ ಭಾರತದ ಕನಸು ಕಂಡಿರುವ ಕೇಂದ್ರ ಸರ್ಕಾರ, ಅಕ್ಟೋಬರ್‌ 2ರ ಬಳಿಕ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಅನ್ನು ಪೂರ್ಣವಾಗಿ ನಿಷೇಧಿಸಿದೆ. ಆದರೆ, ಇದರಿಂದ ಆರ್ಥಿಕತೆಗೆ ಮತ್ತಷ್ಟು ಹೊಡೆತ ಬೀಳಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಪ್ಲಾಸ್ಟಿಕ್‌ ಬಳಕೆ ಹೀಗೇ ಮುಂದುವರಿದರೆ ಇಡೀ ಭೂಮಿಯೇ ಪ್ಲಾಸ್ಟಿಕ್‌ ಮಯವಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮಾನವನ ಜತೆಗೆ ಇಡೀ ಜೀವಸಂಕುಲಕ್ಕೇ ಕಂಟಕವಾಗಲಿದೆ ಪ್ಲಾಸ್ಟಿಕ್‌.

Advertisement

ಪ್ಲಾಸ್ಟಿಕ್‌ ಮಾನವನ ಜೀವನವನ್ನು ಸರ್ವವ್ಯಾಪಿಯಾಗಿ ಆವರಿಸಿದೆ. ಪ್ಲಾಸ್ಟಿಕ್‌ ಬಳಸುವ ಏಕೈಕ ಜೀವಿ ಮಾನವನೇ ಆಗಿದ್ದರೂ, ಅದರಿಂದಾಗುವ ಭಯಾನಕ ದುಷ್ಪರಿಣಾಮವನ್ನು ಇಡೀವಿಶ್ವವೇ ಅನುಭವಿಸಬೇಕಿದೆ. ಪ್ರತಿದಿನವೂ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್‌ ಪ್ರಮಾಣವನ್ನು ನೋಡಿದರೆ ಭಯ ಹುಟ್ಟಿಸುವಂತಿದೆ. ಇದೇ ರೀತಿ ಮುಂದುವರಿದರೆ, ಭೂಖಂಡಗಳ ಜತೆಗೆ ಜಲಗೋಳ, ವಾಯುಗೋಳವೂ ಪ್ಲಾಸ್ಟಿಕ್‌ಮಯವಾಗುವುದರಲ್ಲಿ ಆಶ್ಚರ್ಯವಿಲ್ಲ.

ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಅಕ್ಟೋಬರ್‌ 2ರ ಬಳಿಕ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಅನ್ನು ಪೂರ್ಣವಾಗಿ ನಿಷೇಧಿಸಿದೆ. ಒಟ್ಟು 12 ವಿಧದ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ (ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌) ಬಳಕೆಯನ್ನು ನಿಷೇಧಿಸಲಾಗಿದೆ. ಈ ಪೈಕಿ ಪಾನೀಯಗಳ ಸರಬರಾಜಿಗೆ ಬಳಸುವ ಪ್ಲಾಸ್ಟಿಕ್ ಬಾಟಲಿಗಳು, ಅಂಲಕಾರಕ್ಕಾಗಿ ಬಳಸುವ ಥರ್ಮೋಕೋಲ್ ಮತ್ತು ಸಿಗರೇಟ್ ಬಟ್ಸ್ , ಹ್ಯಾಂಡ್ ಕವರ್‌ಗಳು ಸೇರಿವೆ.

Advertisement

ಮೊದಲ ಹಂತದಲ್ಲಿ ಬ್ಯಾನ್‌ ಆಗಿರುವ ವಸ್ತುಗಳು: ಮೊದಲ ಹಂತದಲ್ಲಿ ಬ್ಯಾನ್ ಅಗಲಿರುವ ವಸ್ತುಗಳ ಪಟ್ಟಿ ಈ ರೀತಿ ಇದೆ. ಕ್ಯಾರಿ ಬ್ಯಾಗ್ ಗಳು (50 ಮೈಕ್ರಾನ್ ಗಿಂತ ಕಡಿಮೆ), ಪ್ಲಾಸ್ಟಿಕ್ ಬಟ್ಟಲುಗಳು, ಪೊಟ್ಟಣಕ್ಕೆ ಬಳಸಲಾಗುವು ಕವರ್ ಗಳು, ಫೋಮ್ಡ್ ಕಪ್ ಗಳು, ಸ್ಟ್ರಾ, ಯೂಸ್ ಆಂಡ್ ಥ್ರೋ ಪ್ಲಾಸ್ಟಿಕ್ ಕಪ್ ಗಳು, ಬೋರ್ಡ್ ಗಳು, ಪ್ಲಾಸ್ಟಿಕ್ ಲ್ಯಾಮಿನೇಟೆಡ್ ಬಿಲ್ ಗಳು, ಆಕಾಶಬುಟ್ಟಿಗಳು, ಧ್ವಜಗಳು ಮತ್ತು ಮಿಠಾಯಿಗಳ ಹಾಕಲು ಬಳಸುವ ಪಾರದರ್ಶಕ ಪ್ಲಾಸ್ಟಿಕ್ ಕವರ್ ಗಳು; ಸಿಗರೇಟ್ ಬಟ್ಸ್ ಗಳು, ಪಾನೀಯಗಳಿಗಾಗಿ ಬಳಸುವ ಗ್ಲಾಸ್ ಗಳು ಮತ್ತು ರಸ್ತೆಬದಿಯ ಬ್ಯಾನರ್‌ಗಳನ್ನು ಮೊದಲ ಹಂತದಲ್ಲಿ ನಿಷೇಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಎಂದರೆ? : ಸಿಂಗಲ್‌ ಅಥವಾ ಕೇವಲ ಒಂದೇ ಬಾರಿ ಬಳಕೆ ಮಾಡಿ ಬಳಿಕ ಎಸೆಯುವ, ತ್ಯಾಜ್ಯವಾಗುವ ಪ್ಲಾಸ್ಟಿಕ್‌. ಇಂತಹ ಪ್ಲಾಸ್ಟಿಕ್‌ಅನ್ನು ಒಮ್ಮೆ ಬಳಸಿದರೆ ಮತ್ತೆ ಪುನರ್ಬಳಕೆ ಸಾಧ್ಯವಿಲ್ಲ. ಹೀಗಾಗಿ ಬಳಕೆಯಾದ ಪ್ಲಾಸ್ಟಿಕ್‌ ಎಲ್ಲವೂ ಪರಿಸರಕ್ಕೆ ತ್ಯಾಜ್ಯವಾಗಿ ಸೇರುತ್ತಲೇ ಹೋಗುತ್ತದೆ. ಈಗಾಗಲೇ ವಿಶ್ವಾದ್ಯಂತ ಸುಮಾರು 4 ಹಿಮಾಲಯ ಪರ್ವತಗಳಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಪರಿಸರ ಸೇರಿರುವ ಅಂದಾಜಿದೆ. ಪ್ರತಿ ವರ್ಷವೂ ಸುಮಾರು 1 ಕೋಟಿ ಟನ್‌ ಪ್ಲಾಸ್ಟಿಕ್‌ ಸಮುದ್ರ ಸೇರುತ್ತಿದೆ.

Advertisement

ಇದುವರೆಗಿನ ಪ್ಲಾಸ್ಟಿಕ್‌ ತ್ಯಾಜ್ಯ 9 ಬಿಲಿಯನ್‌ ಟನ್‌ :  1950ರ ಬಳಿಕ ಜಾಗತಿಕವಾಗಿ 9 ಬಿಲಿಯನ್‌ ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗಿದೆ. ಈ ಪ್ರಮಾಣ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ನ ಎತ್ತರಕ್ಕೆ ಸಮವಾಗಿದೆ. ಈಗಾಗಲೇ 4 ಎವರೆಸ್ಟ್‌ ಪರ್ವತಗಳನ್ನು ಸೃಷ್ಟಿಸಬಹುದಾದಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಯಾಗಿದೆ. ಭಾರತದಲ್ಲಿ ಪ್ರತಿದಿನ 25,940 ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿದೆ. ಇವುಗಳ ತೂಕ ಏಷ್ಯಾದ 9,000 ಆನೆಗಳಿಗೆ ಸಮ. ಆದರೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವೇ ಕಡಿಮೆ ಪ್ಲಾಸ್ಟಿಕ್‌ ಬಳಸುತ್ತಿದೆ. 2014-15ರ ಮಾಹಿತಿ ಇಲ್ಲಿ ಒಬ್ಬರು ಪ್ರತಿದಿನ ಸರಾಸರಿ 11 ಕೆ.ಜಿ. ಪ್ಲಾಸ್ಟಿಕ್‌ ಬಳಸುತ್ತಾರೆ. ಜಗತ್ತಿನ ಸರಾಸರಿ ಬರೋಬ್ಬರಿ 28 ಕೆ.ಜಿ. ಆಗಿದೆ.

ಆಹಾರದೊಳಗೆ ಪ್ಲಾಸ್ಟಿಕ್‌ : ನಾವು ಸೇವಿಸುವ ಆಹಾರದ ಮೂಲಕ ದಿನದಲ್ಲಿ ಲಕ್ಷಾಂತರ ಪ್ಲಾಸ್ಟಿಕ್‌ ಕಣಗಳು ನಮಗೆ ಅರಿವಿಲ್ಲದಂತೆ ದೇಹ ಸೇರುತ್ತಿವೆ. ವಾಟರ್‌ ಬಾಟಲ್‌, ಟೀ ಬ್ಯಾಕ್‌, ಪೇಪರ್‌ ಪ್ಲೇಟ್‌, ಪ್ಲಾಸ್ಟಿಕ್‌ ಕವರ್‌ ಎಲ್ಲದಿಂದರಿಂದಲೈ ಆಹಾರದೊಳಗೆ ಪ್ಲಾಸ್ಟಿಕ್‌ ಕಣಗಳು ಸೇರ್ಪಡೆಯಾಗುತ್ತವೆ, ಸಾಫ್ಟ್ ಡ್ರಿಂಕ್ಸ್‌ ಕಂಪನಿಗಳು ಬಾಟಲಿಯ ಬದಲಿಗೆ ಪ್ಲಾಸ್ಟಿಕ್‌ ಬಳಕೆಗೆ 1970ರಲ್ಲಿ ಮುಂದಡಿಯಿಟ್ಟವು. ಬಳಿಕ ಇದರ ನಿರ್ವಹಣೆಯ ಪ್ರಶ್ನೆ ಎದುರಾದಾಗ ಅಮೆರಿಕ ಸರಕಾರ ಪ್ಲಾಸ್ಟಿಕ್‌ ಬಾಟಲಿಗಳನ್ನು ನಿಷೇಧಿಸಲು ಕ್ರಮ ಕೈಗೊಂಡಿತು. ಆದರೆ, ನಿರುದ್ಯೋಗ ಹೆಚ್ಚಾಗುವ ಬೀತಿಯಿಂದ ನಿಷೇಧ ಹಿಂದೆಗೆಯಿತು.

Advertisement

ಪ್ರತಿವರ್ಷ 5 ಲಕ್ಷ ಕೋಟಿ ಪ್ಲಾಸ್ಟಿಕ್‌ ಬ್ಯಾಗ್‌ : ವಿಶ್ವಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ಪ್ಲಾಸ್ಟಿಕ್‌ ಬ್ಯಾಗು ಗಳನ್ನು ಬಳಸ ಲಾಗುತ್ತದೆ. ಇದು ಪರಿಸರ ಮತ್ತು ಜೀವಿಗಳಿಗೆ ಮಾರಕವಾಗಿದೆ. ಈ ಅಂಶವನ್ನು ಅರಿತುಕೊಂಡ ನೆರೆಯ ಬಾಂಗ್ಲಾ ದೇಶ 2002ರಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವೊಂದು ಕೈಗೊಂಡ ಮೊದಲ ತೀರ್ಮಾನ ಇದು.

ಎಷ್ಟು ದೇಶಗಳು ನಿಷೇಧಿಸಿವೆ? : ಈಗಾಗಲೇ ವಿಶ್ವಾದ್ಯಂತ 127 ದೇಶಗಳು ಪ್ಲಾಸ್ಟಿಕ್‌ ಬಳಕೆ ಮೇಲೆ ನಿರ್ಬಂಧ ಹೇರಿವೆ. ಬ್ಯಾಗ್‌ಗಳಿಗೆ ನಿಷೇಧವಿಲ್ಲದಿದ್ದರೂ ಅಲ್ಲಿನ ಕೆಲವು ರಾಜ್ಯಗಳು ನಿಷೇಧ ಹೇರಿವೆ. 27 ದೇಶಗಳು ಏಕ ಬಳಕೆಯ ಪ್ಲಾಸ್ಟಿಕ್‌ ಮೇಲೆ ಪೂರ್ಣ ನಿಷೇಧ ಹೇರಿವೆ.

Advertisement

ಪೂರ್ಣ ನಿಷೇಧ ಹೇರಿರುವ 27 ರಾಷ್ಟ್ರಗಳು: ಆ್ಯಂಟಿಗುವಾ ಮತ್ತು ಬಬುಡ, ಚೀನ, ಕೊಲಂಬಿಯಾ, ರೊಮಾನಿಯಾ, ಸೆನೆಗಲ್‌, ರುವಾಂಡಾ, ದಕ್ಷಿಣ ಕೊರಿಯಾ, ಜಿಂಬಾಬ್ವೆ, ಟ್ಯುನೀಶಿಯಾ, ಸಮೋಹ, ಬಾಂಗ್ಲಾದೇಶ, ಕ್ಯಾಮರೂನ್‌, ಅಲ್ಬೇನಿಯಾ, ಜಾರ್ಜಿಯಾ ಸೇರಿದಂತೆ 27 ರಾಷ್ಟ್ರಗಳು ಏಕಬಳಕೆ ಪ್ಲಾಸ್ಟಿಕ್‌ ಮೇಲೆ ಪೂರ್ಣ ನಿಷೇಧ ಹೇರಿವೆ.

Source : Digital Media

Advertisement
Every year, 48 lakh to 1 crore tonnes of plastic enters the sea. Year by year its amount is per cent. 10 is increasing. Single-use plastic has been completely banned after October 2. However, discussions are going on that this will further hit the economy. However, if the use of plastic continues like this, the entire earth will become plastic. If we don't wake up now, plastic will become a thorn in human beings as well as the entire living organism.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror