ಅಡಿಕೆ ಗಿಡ ನರ್ಸರಿಗೆ ಪ್ಲಾಸ್ಟಿಕ್‌ ರಹಿತ ವ್ಯವಸ್ಥೆ | ವೈಜ್ಞಾನಿಕ ಮಾಹಿತಿ ನೀಡಿದ ಸಿಪಿಸಿಆರ್‌ಐ ವಿಜ್ಞಾನಿಗಳು | ತರಕಾರಿ ಗಿಡ ನರ್ಸರಿಗೆ ಪೇಪರ್‌ ತೊಟ್ಟೆ…!- ಇದು ಕೃಷಿಕನ ಪ್ರಯತ್ನ |

November 17, 2023
12:38 PM
ಕೃಷಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ಇದೀಗ ಈ ಕಡೆಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಯುತ್ತಿದೆ. ವಿಜ್ಞಾನಿಗಳೂ, ಕೃಷಿಕರೂ ವಿವಿಧ ಪ್ರಯತ್ನ ಮಾಡುತ್ತಿದ್ದಾರೆ. ಸಿಪಿಸಿಆರ್‌ಐ ಅಡಿಕೆ ಗಿಡಕ್ಕೆ ಬೆಳೆಸಲು ಕಾಂಡದ ಬಳಕೆ ಮಾಡಿದರೆ, ಕೃಷಿಕ ಸತ್ಯಮೂರ್ತಿ ಕೋಟೆ ಅವರು ತರಕಾರಿ ಬೀಜ ಮೊಳಕೆಗೆ ಪೇಪರ್‌ ತೊಟ್ಟೆ ಬಳಕೆ ಮಾಡುತ್ತಿದ್ದಾರೆ.

ದೇಶದೆಲ್ಲೆಡೆ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ವಿವಿಧ ಪ್ರಯತ್ನ ನಡೆಯುತ್ತಿದೆ. ಆದರೆ ಕೃಷಿಯಲ್ಲಿ ಬೇರೆ ಬೇರೆ ಕಾರಣಗಳಿಂದ ಪ್ಲಾಸ್ಟಿಕ್‌ ಬಳಕೆ ಅನಿವಾರ್ಯವಾಗಿತ್ತು. ಇದೀಗ ಅಲ್ಲೂ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿದೆ. ಇದೀಗ ಈ ಕಡೆಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಯುತ್ತಿದೆ. ವಿಜ್ಞಾನಿಗಳೂ, ಕೃಷಿಕರೂ ವಿವಿಧ ಪ್ರಯತ್ನ ಮಾಡುತ್ತಿದ್ದಾರೆ.

Advertisement
Advertisement
Advertisement
ಸಿಪಿಸಿಆರ್‌ಐಯಲ್ಲಿ ನಡೆದಿರುವ ಅಡಿಕೆ ಮರದ ಕಾಂಡದಲ್ಲಿ ಗಿಡ ಬೆಳೆಸುವ ಪ್ರಯೋಗ

ಕೃಷಿ ಪೂರಕ ಚಟುವಟಿಕೆಯನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಹಲವು ಪ್ರಯತ್ನ ಮಾಡುತ್ತಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಯೋಜನ ನೀಡುವ ತಂತ್ರಜ್ಞಾನ ಗಳಮ್ಮ ರೈತರು ಹೆಚ್ಚು ಬಳಸಬೇಕು ಎಂಬುದು ಸಂಸ್ಥೆಯ, ವಿಜ್ಞಾನಿಗಳ ಆಶಯ. ಹಿಂದೆ ಅಡಿಕೆ ಗಿಡಗಳನ್ನು ನೆಲದಲ್ಲೇ ಮಾಡಿ ಬಳಿಕ ತೋಟಗಳಿಗೆ ಸ್ಥಳಾಂತರ ಮಾಡಲಾಗುತ್ತಿತ್ತು. ಆದರೆ ನೆಲದಿಂದ ಎಬ್ಬಿಸಿ ತೆಗೆಯುವ ಸಂದರ್ಭ ಗಿಡಗಳ ಬೇರಿಗೆ ಹಾನಿಯಾಗುತ್ತದೆ. ಈ ಕಾರಣಕ್ಕೆ ಪ್ಲಾಸ್ಟಿಕ್‌ ತೊಟ್ಟೆಗಳಲ್ಲಿ ಗಿಡಗಳನ್ನು ಬೆಳೆಸಲು ಮಹತ್ವ ನೀಡಲಾಗಿತ್ತು. ಗಿಡಗಳನ್ನು ನೆಟ್ಟ ಬಳಿಕ ಪ್ಲಾಸ್ಟಿಕ್ ಲಕೋಟೆಗಳ ವಿಲೇವಾರಿ ಸಮಸ್ಯೆ, ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸದ ಮೇಲೂ ಪರಿಣಾಮ ಆಗುತ್ತಿತ್ತು.

Advertisement
ಸಿಪಿಸಿಆರ್‌ಐಯಲ್ಲಿ ನಡೆದಿರುವ ಅಡಿಕೆ ಮರದ ಕಾಂಡದಲ್ಲಿ ಗಿಡ ಬೆಳೆಸುವ ಪ್ರಯೋಗ

ಇದಕ್ಕಾಗಿ  ವಿಟ್ಲದ ಸಿಪಿಸಿಆರ್‌ಐ ವಿಜ್ಞಾನಿ  ಡಾ.ನಾಗರಾಜ್‌ ಅವರು ಅಡಿಕೆ ನರ್ಸರಿಗೆ ಅಡಿಕೆ ಕುಂಡ ಬಳಕೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದ್ದಾರೆ. ಅತ್ಯಂತ ಯಶಸ್ವಿ ಪ್ರಯೋಗ ಎಂದು ಹೇಳಿದ್ದಾರೆ. ಪರಿಸರ ಸ್ನೇಹಿ ವ್ಯವಸ್ಥೆ ಇದಾಗಿದೆ.  ವ್ಯರ್ಥವಾಗಿ ಹೋಗುವ ಅಡಿಕೆ ಮರ, ಬಿದಿರಿನ ಮೆಳೆ, ಅಡಿಕೆ ಹಾಳೆ, ಸೀಯಾಳದ ತೊಟ್ಟೆಗಳನ್ನು ಗಿಡ ಮಾಡಲು ಬಳಸುವ ಕಾರ್ಯ ಸದ್ಯ ಚಾಲ್ತಿಗೆ ಬರುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ಕುಂಡಗಳ ನಿರ್ಮಾಣಕ್ಕೆ ಜನರು ಮುಂದಾಗುತ್ತಿದ್ದಾರೆ, ಈ ಕುಂಡಗಳು ಮಣ್ಣನ್ನು ಸೇರಿ ಗೊಬ್ಬರವಾಗಿ ಸಸಿಯ ಬೆಳವಣಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿವೆ. ಈ ಬಗ್ಗೆ ಅಡಿಕೆ ಕುಂಡದ ಬಗ್ಗೆ ಸಿಪಿಸಿಆರ್‌ಐ ವಿಜ್ಞಾನಿ  ಡಾ.ನಾಗರಾಜ್‌ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಈ ಕುಂಡದಲ್ಲೂ ಗಿಡಗಳು ಉತ್ತಮವಾಗಿ ಬೆಳೆಯುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಅಡಿಕೆಯ ಮರವನ್ನು ಸಣ್ಣ ತುಂಡುಗಳನ್ನಾಗಿಸಿ ಅದರ ಅಡಿಭಾಗಕ್ಕೆ ಅಡಿಕೆ ಹಾಳೆಯನ್ನು ಇರಿಸಿ ಮಣ್ಣು ತುಂಬಿ ಅಡಿಕೆ ಬೀಜವನ್ನು ಮೊಳಕೆ ಬರಲು ಹಾಕಲಾಗುತ್ತದೆ. ಮೊಳಕೆ ಬಂದ ಬಳಿಕ ಅದನ್ನೇ ನಾಟಿ ಮಾಡಲೂ ಬಹುದಾಗಿದೆ ಅಥವಾ ಅದನ್ನು ಒಡೆದು ನಾಡಿ ಮಾಡಬಹುದು. ಪರಸರಕ್ಕೂ, ಗಿಡಕ್ಕೂ ಉತ್ತಮವಾಗಿದೆ.

ಸಿಪಿಸಿಆರ್‌ಐಯಲ್ಲಿ ನಡೆದಿರುವ ಅಡಿಕೆ ಮರದ ಕಾಂಡದಲ್ಲಿ ಗಿಡ ಬೆಳೆಸುವ ಪ್ರಯೋಗದಲ್ಲಿ ತಳಭಾಗಕ್ಕೆ ಅಡಿಕೆ ಹಾಳೆ ಬಳಕೆ

ಅಡಿಕೆ ಮರದ ಕುಂಡಗಳಿಗೆ ಹೊಸ ಸ್ವರೂಪ ನೀಡುವುದರಿಂದ ನಗರ ಭಾಗಗಳಲ್ಲಿ ಆಲಂಕಾರಿಕ ಗಿಡ ಬೆಳೆಯಲು ಬಳಸಿಕೊಳ್ಳಬಹುದು. ಜತೆಗೆ ಅಲಂಕಾರಿಕವಾಗಿ ಬಳಸಿಕೊಳ್ಳಲು ಅವಕಾಶಗಳಿವೆ. ತೋಟಗಳಲ್ಲೇ ಗೊಬ್ಬರವಾಗಿ ಹಾಳಾಗುತ್ತಿರುವ ಅಡಿಕೆ ಮರಕ್ಕೂ ಉತ್ತಮ ಬೆಲೆ ಸಿಗಬಹುದಾಗಿದೆ.

Advertisement

ತರಕಾರಿ ಗಿಡ ಬೆಳೆಸಲು ಪೇಪರ್‌ ಬಳಕೆ ಮಾಡಿದ ಕೃಷಿಕ: ಅಡಿಕೆ ಮಾದರಿಯಲ್ಲಿಯೇ ತರಕಾರಿ ಗಿಡ ಬೆಳೆಸಲು ಕೃಷಿಕರಿಗೆ ಹಲವು ಸವಾಲುಗಳು ಇವೆ. ತರಕಾರಿ ಬೀಜವನ್ನು ಪ್ಲಾಸ್ಟಿಕ್‌ ರಹಿತವಾಗಿ ಬೆಳೆಸಬೇಕು. ಇದಕ್ಕಾಗಿ ಹಲವು ಕೃಷಿಕರು ತೆಂಗಿನ ಸಿಪ್ಪೆಯಲ್ಲಿ ಅಥವಾ ಗೋಣಿಗಳಲ್ಲಿ ತರಕಾರಿ ಬೀಜ ಹಾಕಿ ಮೊಳಕೆ ಬಂದ ಬಳಿಕ ನಾಟಿ ಮಾಡುತ್ತಾರೆ.

ಸತ್ಯಮೂರ್ತಿ ಕೋಟೆ ಅವರ ತರಕಾರಿ ಗಿಡದ ಬೀಜ ನಾಟಿಗೆ ಪ್ರಯೋಗ

ಆದರೆ ಪುತ್ತೂರು ಬಳಿಕ ಕೆದಿಲದ ಸಮೀಪ ಇರುವ ಸತ್ಯಮೂರ್ತಿ ಕೋಟೆ ಅವರು  ತರಕಾರಿ ಬೀಜವನ್ನು ಪೇಪರ್‌ ತೊಟ್ಟೆಯಲ್ಲಿ ಹಾಕಿ ಗಿಡವಾದ ಬಳಿಕ ಅದನ್ನೇ ನಾಟಿ ಮಾಡುವ ಹೊಸ ಪ್ರಯೋಗ ಮಾಡಿದ್ದಾರೆ. ಪೇಪರ್‌ ತುಂಡುಗಳನ್ನು ತೊಟ್ಟೆಯಾಕಾರಕ್ಕೆ ರಚನೆ ಮಾಡಿ ಅದಕ್ಕೆ ಮಣ್ಣು ತುಂಬಿ ತರಕಾರಿ ಬೀಜವನ್ನು ಹಾಕಲಾಗುತ್ತದೆ. ನಂತರ ಅಲ್ಲಿ ಮೊಳಕೆ ಬಂದ ಗಿಡವನ್ನು ನೇರವಾಗಿ ನಾಟ ಮಾಡಿದಾಗ ತರಕಾರಿ ಗಿಡ ಬೇರುಗಳಿಗೂ ಪೆಟ್ಟಾಗದೆ ಗಿಡ ಚೆನ್ನಾಗಿ ಬರುತ್ತದೆ.

Advertisement
ಸತ್ಯಮೂರ್ತಿ ಕೋಟೆ ಅವರ ತರಕಾರಿ ಗಿಡದ ಬೀಜ ನಾಟಿಗೆ ಪ್ರಯೋಗ

ಕೃಷಿಕರೊಬ್ಬರ ಈ ಪ್ರಯತ್ನವೂ ಈಗ ಗಮನ ಸೆಳೆದಿದೆ. ಹಲವರು ಕೃಷಿಕರಿಗೂ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ಪ್ರೇರಣೆಯಾಗಿದೆ.

ಮಣ್ಣು ತುಂಬಿಸಲು ತಯಾರಿ

The use of plastic was inevitable in agriculture due to various reasons. Now there are efforts to reduce the use of plastic. Now there is an effort to throw light in this direction. Scientists and farmers are making various efforts.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |
November 23, 2024
5:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror