ಕಾಲಜ್ಞಾನದಲ್ಲಿ ಒಂದು ಮಾತು ಹೇಳಿದೆಯಂತೆ , “ಮನುಷ್ಯ(Human) ಒಂದು ವಸ್ತುವನ್ನು ಅದರ ಕೆಟ್ಟ ಪರಿಣಾಮಗಳನ್ನು ಅರಿಯದೆ ಹೆಚ್ಚು ಹೆಚ್ಚು ಬಳಸುತ್ತಾ ಹೋಗುತ್ತಾನೆ. ಆ ವಸ್ತುವೇ ಅವನ ವಿನಾಶಕ್ಕೆ ಕಾರಣವಾಗುತ್ತದೆ”. ಅದುವೇ ಪ್ಲಾಸ್ಟಿಕ್(Plastic) ಎಂಬುದು ವಿಜ್ಞಾನಿಗಳ(Scientist) ಅಭಿಮತ. ಪ್ಲಾಸ್ಟಿಕ್ ಉತ್ಪತ್ತಿಯಾಗುವುದು ಪೆಟ್ರೋಲಿಯಂ(Petroleum) ನಿಂದ. ಹೀಗಾಗಿ ಆ ವಸ್ತು ಪೆಟ್ರೋಲಿಯಂ, ಎಂಬುದು ಸರಿಯಾದ ಉತ್ತರ ಆದೀತು.
ನಮ್ಮ ಹಿರಿಯರು ಹೇಳುತ್ತಿದ್ದರು, ಭೂಮಿಗೆ ಕನ್ನ ಕೊರೆಯಬೇಡಿ. ಅದು ಪಾತಾಳ ಲೋಕ ಅಲ್ಲಿ ಸಿಗುವುದೆಲ್ಲ ವಿಷವೇ. ನಾಗಲೋಕ ಎಂದು ಕೂಡ ಅದನ್ನು ಕರೆದರು. ಹಿರಿಯರ ಈ ಮಾತು ಇಂದು ನಿಜವಾಗುತ್ತಿದೆ. ಜರ್ಮನಿಯ ಇಬ್ಬರು ವಿಜ್ಞಾನಿಗಳ ಜೊತೆ ನಾನು ಬೆಂಗಳೂರಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದೆ. ಮುಂದೆ ಒಂದು ಲಾರಿ ಹೊಗೆ ಬಿಡುತ್ತಿತ್ತು. ಅದರ ಹಿಂದೆ ಸಾಲಾಗಿ ಹತ್ತಾರು ಜನ ಬೈಕ್ ಸವಾರರು ಆ ಹೊಗೆ ಕುಡಿಯುತ್ತಿದ್ದರು! ಒಬ್ಬರೂ ಮಾಸ್ಕ್ ಹಾಕಿರಲಿಲ್ಲ. ಆ ವಿಜ್ಞಾನಿ ಒಬ್ಬರು ನನಗೆ ಹೇಳಿದರು, ಬದಾಮಿ, ಈ ಜನರೆಲ್ಲಾ ವಿದ್ಯಾವಂತರು ಎಂದೆನಿಸುತ್ತಾರೆ. ಆದರೆ ಅವರಾರಿಗೂ ಈ ಹೊಗೆ ಕ್ಯಾನ್ಸರ್ ತರಿಸುತ್ತದೆ, ತಮ್ಮ ಸಾವಿಗೆ ಕಾರಣವಾಗುತ್ತದೆ, ಎಂದು ಗೊತ್ತಿಲ್ಲವಲ್ಲ, ಅದು ಎಂಥ ವಿದ್ಯಾವಂತರಿವರು ನಿಜಕ್ಕೂ ಎಂಥ ದುರಂತ.
ನಾವಿಂದು ಬಳಸುವ ಎಲ್ಲ ಪ್ಲಾಸ್ಟಿಕ್ ಸಮುದ್ರ ಸೇರುತ್ತದೆ. ಸಮುದ್ರದ ಉಪ್ಪಿನ ಜೊತೆ, ಮತ್ತೇ ನಮ್ಮ ಮನೆಗೇ ಬರುತ್ತದೆ! ಪ್ರತಿಯೊಬ್ಬರ ದೇಹದಲ್ಲೂ ಇಂದು ಪ್ಲಾಸ್ಟಿಕ್ ಇದೆ..!! ಈ ಪ್ಲಾಸ್ಟಿಕ್ ಬಳಕೆ ಖಂಡಿತವಾಗಿಯೂ ಕ್ಯಾನ್ಸರ್ ತರಿಸುತ್ತದೆ. ಹೆಚ್ಚುತ್ತಿರುವ ನರರೋಗಗಳು, ಸಂತಾನ ಹೀನತೆ, ಹೃದಯದ ಕಾಯಿಲೆಗಳು, ಸಕ್ಕರೆ ಕಾಯಿಲೆ, ಬೊಜ್ಜು, ಇವುಗಳಿಗೂ ಕಾರಣವಾಗಿದೆ. ಜಗತ್ತಿನ ಉದ್ದಕ್ಕೂ ನಡೆದ ಒಂದು ಲಕ್ಷಕ್ಕೂ ಹೆಚ್ಚು ಸಂಶೋಧನೆಗಳು ಇದನ್ನು ಸ್ಪಷ್ಟಪಡಿಸಿವೆ. ಮಕ್ಕಳಿಗೆ, ಗರ್ಭಿಣಿಯರಿಗೆ ಇದು ಅತ್ಯಂತ ಅಪಾಯಕಾರಿ.
ವಿಚಿತ್ರವೆಂದರೆ ನಾವು ಮಕ್ಕಳಿಗೆ ತಿನಿಸುವ ಚಾಕಲೇಟ್, ಬಿಸ್ಕೆಟ್, ಮುಂತಾದ ಹೊರಗಿನ ತಿಂಡಿಗಳು ಪ್ಲಾಸ್ಟಿಕ್ ನಲ್ಲಿ ಇರುತ್ತವೆ. ಶಾಲೆಗಳಲ್ಲೂ ಬರ್ತಡೇ ಎಂದು ಮಕ್ಕಳಿಗೆ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಚಾಕಲೇಟ್ ಕೊಡಿಸುತ್ತಾರೆ! ನಮ್ಮ ಮನೆಯಲ್ಲಿ ಬಳಸುವ ಎಲ್ಲ ವಸ್ತುಗಳೂ ಪ್ಲಾಸ್ಟಿಕ್ ನದ್ದೇ. ಕುರ್ಚಿ ಪ್ಲಾಸ್ಟಿಕ್. ಏಕೆ? ಅತಿಥಿಗಳು ನೆಲದಲ್ಲಿ ಚಾಪೆ ಮೇಲೆ ಮೇಲೆ ಕೂತರೆ ನಮಗೆ ಅವಮಾನ..! ನಮ್ಮ ಹುಡುಗಿಯರಿಗೆ ಪಿಸಿಓಡಿ (ಸರಿಯಾಗಿ ಮುಟ್ಟಾಗದಿದ್ದರೆ), ನಮ್ಮ ಹುಡುಗರು ಷoಡರಾದರೆ, ನಮ್ಮ ಮನೆಯಲ್ಲಿ ಮೊಮ್ಮಕ್ಕಳು ಹುಟ್ಟದಿದ್ದರೆ, ಅದು ಅವಮಾನವಲ್ಲ!
ಎಂಥಾ ಮನಸ್ಥಿತಿಯ ಜನ ನಾವಾಗಿದ್ದೇವೆ? : ನಾವು ನೀರು ಸಂಗ್ರಹಿಸುವುದು ಪ್ಲಾಸ್ಟಿಕ್ ನಲ್ಲಿ. ಆ ನೀರಿನ ಜೊತೆ ಪ್ರತಿನಿತ್ಯ ಪ್ಲಾಸ್ಟಿಕ್ ದೇಹ ಸೇರುತ್ತಿದೆ. ಅಡಿಗೆ ಮನೆಯಲ್ಲಿ ಬೇಳೆ, ಕಾಳು, ಚಟ್ನಿ, ಉಪ್ಪಿನಕಾಯಿ, ಎಲ್ಲವೂ ಪ್ಲಾಸ್ಟಿಕ್. ಬೀದಿ ಬದಿಯ ಮತ್ತು ಸ್ಟಾರ್ ಹೋಟೆಲ್ ಗಳಲ್ಲಿನ ಊಟವೂ ಪ್ಲಾಸ್ಟಿಕ್ ತಟ್ಟೆಯಲ್ಲಿ. ಮದುವೆಗಳಂತೂ ಸಂಪೂರ್ಣ ಪ್ಲಾಸ್ಟಿಕ್ ಮಯ.! ವಧು- ವರರು ತಮ್ಮ ಜೀವಮಾನದಲ್ಲೇ ಸಂತಾನಹೀನತೆ ಉಂಟುಮಾಡುವ ರಾಸಾಯನಿಕಗಳನ್ನು ತಮ್ಮ ದೇಹಕ್ಕೆ ಹೆಚ್ಚು ಸೇವಿಸುವುದು ಅವರ ಮದುವೆಯ ದಿನ!!
ಅಂದರೆ ಮದುವೆಯ ಉದ್ದೇಶ ಸಂತಾನವಲ್ಲ, ಸಂತಾನ ಹೀನತೆ..! ಎಂತಹ ನೀಚ ಜನ ನಾವಾದೆವು..!? : ನಾವು ಪಾಲಿಸುವ ಹೆಚ್ಚಿನ ಮಠಾಧೀಶರು, ರಾಜಕಾರಣಿಗಳು, ಶ್ರೀಮಂತರು, ವಿದ್ಯಾವಂತರು, ಎಲ್ಲರ ಬಳಕೆ ಪ್ಲಾಸ್ಟಿಕ್! ಬಡವರದೇನು ತಪ್ಪು? ಅವರು ಇವರನ್ನು ಅನುಸರಿಸುತ್ತಾರೆ. ಒಟ್ಟಿನಲ್ಲಿ ಜಗತ್ತು ಪ್ಲಾಸ್ಟಿಕ್ ಮಯ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಜೀವ ಜಗತ್ತನ್ನು ಬಹುಶ: ಯಾರೂ ಉಳಿಸಲಾರರು. ನೀರಲ್ಲಿ ಪ್ರಾರಂಭವಾದ ಜೀವಲೋಕ, ಪ್ಲಾಸ್ಟಿಕ್ ನ ಬಳಕೆಯಿಂದ ಮೊಟ್ಟಮೊದಲಿಗೆ ಸಮುದ್ರಗಳಲ್ಲಿ ಅಂದರೆ ನೀರಿನಲ್ಲೇ ಅವಸಾನಗೊಳ್ಳುತ್ತದೆ. ಪ್ರತಿ ವರ್ಷ ಮಿಲಿಯನ್ ಗಟ್ಟಲೆ ಪ್ರಾಣಿಗಳು ನಮ್ಮ ಸಮುದ್ರಗಳಲ್ಲಿ ಪ್ಲಾಸ್ಟಿಕ್ ನುಂಗಿ ಸಾಯುತ್ತಿವೆ. ಆ ಪಾಪ ನಮ್ಮನ್ನು ಸುತ್ತಿಕೊಳ್ಳುತ್ತಿದೆ. ನಂತರದ್ದು ನಮ್ಮ ಸರದಿ.
ಒಟ್ಟಿನಲ್ಲಿ ಅಳಿಯಲು ಸಿದ್ದರಾಗಬೇಕಿದೆ. ಪ್ಲಾಸ್ಟಿಕ್ ಬದಲು ಬಳಸಲು ನಮ್ಮ ದೇಶದಲ್ಲಿ ಬಟ್ಟೆ, ಗಾಜು, ಸ್ಟೀಲ್, ಮಣ್ಣು, ಹೀಗೆ ಬೇಕಾದಷ್ಟು ಅವಕಾಶಗಳಿವೆ. ಬಳಸುವವರಾರು? ಜಾಣರಾಗಿ. ನಿಮ್ಮ ಮನೆಯಿಂದಲಾದರೂ ಎಲ್ಲ ಪ್ಲಾಸ್ಟಿಕ್ ವಸ್ತುಗಳನ್ನು ಹೊರಹಾಕಿ. ನಿಮ್ಮ ಸಂತಾನವನ್ನು ರಕ್ಷಿಸಿಕೊಳ್ಳಿ. ಕ್ಯಾನ್ಸರ್ ನಿಮ್ಮ ಮನೆಗೆ ಬರುವುದು ಬೇಡ. ರಾಸಾಯನಿಕ ಮುಕ್ತ, ಆರೋಗ್ಯಕರ, ಭಾರತದ ನಿರ್ಮಾಣದಲ್ಲಿ ಸಹಕರಿಸಿ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…