ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಆಂದೋಲನ ರೂಪದಲ್ಲಿ ಕಲೆಯನ್ನು ಬಳಸಿದ ಹರಿದ್ವಾರದ ಯುವಕ ಸುಮಾರು 350 ಕೆಜಿಯಷ್ಟು ಬಳಕೆ ಮಾಡಿದ ಪ್ಲಾಸ್ಟಿಕ್ ಬಳಸಿಕೊಂಡು ಕಲಾಕೃತಿಯನ್ನು ಮಾಡಿದ್ದಾರೆ. ಹರಿದ್ವಾರದ ಮನ್ವೀರ್ ಸಿಂಗ್ ಈ ಪ್ರಯತ್ನ ಮಾಡಿದ ಯುವಕ.
ಮನ್ವೀರ್ ಸಿಂಗ್ ಅವರು ವೃತ್ತಿಯಲ್ಲಿ ಕಲಾ ಶಿಕ್ಷಕರಾಗಿದ್ದಾರೆ. ದೆಹಲಿಯ ಕಾಲೇಜ್ ಆಫ್ ಆರ್ಟ್ ನಿಂದ ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ ಮನ್ವೀರ್ ಅವರು ಮನೆಯಲ್ಲಿ ಮರುಬಳಕೆ ಮಾಡಲು ಕಷ್ಟಕರವಾದ ಪ್ಲಾಸ್ಟಿಕ್‌ನ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಾಗಿ 2018 ರಿಂದ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದಾರೆ. ಇವರು ಮಾಡಿರುವ ಕಲಾಕೃತಿಯನ್ನು ಜರ್ಮನಿ, ಯುಎಇ ಅಬುಧಾಬಿಯಲ್ಲಿ ಮಾರಾಟವನ್ನು ಮಾಡಿದ್ದಾರೆ.
ಇತ್ತಿಚಿಗೆ, ಒಡಿಶಾದ ಪುರಿ ಬೀಚ್‌ನಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಿದ 15 ಅಡಿ ಆಲಿವ್ ರಿಡ್ಲಿ ಸಮುದ್ರ ಆಮೆ ಕಲಾಕೃತಿಯನ್ನು ಮಾಡಿದ ಸಿಂಗ್.ಇಲ್ಲಿಯವರೆಗೆ 12 ಕಲಾಕೃತಿಗಳನ್ನು ಬೋರ್ಡ್ ಗಳು, ಟೇಪ್‌ಸ್ಟ್ರಿ, ಲೋಹ, ಕನ್ನಡಿ ಮತ್ತು ಮುಂತಾದವುಗಳನ್ನು ಬಳಸಿಕೊಂಡು ರಚಿಸಿದ್ದೇನೆ ಎನ್ನುತ್ತಾರೆ. ಪ್ರತಿಯೊಂದು ಕಲಾಕೃತಿಗಳನ್ನು ರಚಿಸಲು ಸರಾಸರಿ ಎರಡರಿಂದ ಮೂರು ತಿಂಗಳುಗಳನ್ನು ತೆಗೆದುಕೊಂಡಿದ್ದೇನೆ ಎಂದು ಮನ್ವೀರ್ ಸಿಂಗ್ ಹೇಳಿದ್ದಾರೆ.