ಮತ್ತದೇ ಬೇಸರ ಕಳೆಯಲು ಈ ಹಿತವಾದ ಮಳೆ | ಹಾಡಷ್ಟೇ ಅಲ್ಲ, ಈ ಅಭಿನಯ ನೋಡಲೇಬೇಕು…

May 27, 2025
7:55 AM

ಮುಂಗಾರು ಮಳೆ ಆರಂಭವಾಯಿತು. ಈ ಬಾರಿ ನಿರೀಕ್ಷೆಗೂ ಮುನ್ನವೇ ಮುಂಗಾರು ಬಂದಿದೆ. ಮುಂಗಾರು ಆರಂಭದ ಹೊತ್ತು ಎಲ್ಲರಿಗೂ ಸಂತಸ. ಹಿತವಾದ ಮಳೆಯು ಮನಸ್ಸಿಗೆ ನೀಡುವ ಮುದವೇ ಬೇರೆ. ಈ ಹಿತವಾದ ಮಳೆಗೆ ಪರಿಸರ ವೀಕ್ಷಣೆಯ ಖುಷಿಯೇ ಬೇರೆ. ಸುಮ್ಮನೆ ಕುಳಿತು ಹಾಡುಗಳನ್ನು ಕೇಳುತ್ತಿರುವುದೇ ಒಂದು “ಪರಿಸರ ಧ್ಯಾನ”.  ಈ ಹಿತವಾದ ಮಳೆಯ ಹಾಡುಗಳು ಎಷ್ಟೋ ಗೆದ್ದಿವೆ, ಅದಕ್ಕೆ ಕಾರಣವೂ ಅದೇ ಮಳೆ..!. ಅಂತಹ ಹಿತವಾದ ಮಳೆಯ ನಡುವೆ “ಮತ್ತದೇ ಬೇಸರ…” ಹಾಡಿಗೆ ಮಳೆಯ ಹಿನ್ನೆಲೆಯಲ್ಲಿ  ಬೆರಳುಗಳ ಚಲನೆಯಿಂದಲೇ ನೃತ್ಯ ಮಾಡಿದ್ದಾರೆ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ.…..ಮುಂದೆ ಓದಿ….

ಮಂಜುಳಾ ಸುಬ್ರಹ್ಮಣ್ಯ

ಮಂಜುಳಾ ಸುಬ್ರಹ್ಮಣ್ಯ ಅವರು ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಹಲವಾರು ವೇದಿಕೆಗಳಲ್ಲಿ ವೈಯುಕ್ತಿಕ ಹಾಗೂ ತಮ್ಮ ತಂಡದೊಂದಿಗೆ ನೃತ್ಯ, ನೃತ್ಯ ರೂಪಕ, ದೃಶ್ಯ ರೂಪಕ, ನಾಟಕ ಪ್ರದರ್ಶನಗಳನ್ನು ನೀಡುತ್ತಾ ತಮ್ಮ ಸೃಜನಶೀಲತೆಯಿಂದ ರಂಗಭೂಮಿ ಹಾಗೂ ನಾಟ್ಯ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಕೇರಳದ ಸಮರ ಕಲೆ ಕಳರಿ ಪಯ್ಯಟ್ಟುವನ್ನು ಕಲಿತಿರುತ್ತಾರೆ. ಮಂಜುಳಾ ಅವರು ದೂರದರ್ಶನದಲ್ಲಿ ಭರತನಾಟ್ಯದ ‘ಬಿ’ ಗ್ರೇಡ್ ಕಲಾವಿದೆ ಹಾಗೂ ನಾಟಕದಲ್ಲಿ ಆಕಾಶವಾಣಿಯ ‘ಬಿ’ ಗ್ರೇಡ್ ಕಲಾವಿದೆಯಾಗಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ, ನೃತ್ಯ ಸಂಯೋಜಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  ಇವರ ಸಂಶೋಧನಾ ಪ್ರವೃತ್ತಿಯನ್ನು ಗುರುತಿಸಿ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಸಚಿವಾಲಯವು ಜೂನಿಯರ್ ಫೆಲೋಶಿಪ್ ನೀಡಿ ಪ್ರೋತ್ಸಾಹಿಸಿದೆ.

ಈ ಬಾರಿಯ ಮೊದಲ ಮಳೆಗೆ “ಮತ್ತದೇ ಬೇಸರ…”  ಹಾಡಿನ ಜೊತೆಗೆ ಮಳೆಯ ಹಿನ್ನೆಲೆಯಲ್ಲಿ ತನ್ನ ಹಸ್ತ ಹಾಗೂ ಬೆರಳುಗಳ ಚಲನೆಯಿಂದಲೇ ನೃತ್ಯ ಮಾಡಿದ್ದಾರೆ. ಬಹಳ ಸುಂದರವಾಗಿ ಮೂಡಿಬಂದಿದೆ. ಅದರ ವಿಡಿಯೋ ಇಲ್ಲಿದೆ…

ಹಿತವಾದ ಮಳೆಗೆ  ಸಾಕಷ್ಟು ಹಾಡುಗಳು ಕ್ಲಿಕ್‌ ಆಗಿವೆ. ಈ ಹಾಡಿಗೆ ಹಸ್ತ ಹಾಗೂ ಬೆರಳುಗಳ ಚಲನೆಯಿಂದಲೇ ನೃತ್ಯ ಮಾಡಿರುವುದು ಇನ್ನಷ್ಟು ಸೊಗಸಾಗಿದೆ.  ಕನ್ನಡದ ಅದೆಷ್ಟೋ ಹಾಡುಗಳಿ ಮಳೆಗೆ ಸಂಬಂಧಿಸಿದ್ದು ಇದೆ. ಅಂದರೆ ಮಳೆಯೇ ಸೊಗಸು ಕವಿಗೆ. ಸಿನಿಮಾದಲ್ಲೂ ಮಳೆ ಹಾಡು ಕ್ಲಿಕ್‌ ಆಗಿರುವುದು ಹೆಚ್ಚು. ಭಾವನೆಗಳನ್ನೂ ಮಳೆಯ ಹಾಡಿನ ಮೂಲಕ ದಾಟಿಸುವ ಕೆಲಸವೂ ಸುಲಭವಾಗಿದೆ. ಭುವಿಗೆ ಇಳಿಯುವ ಮೊದಲ ಮಳೆಯಲ್ಲಿ ಅದೇನೋ ಮಾಂತ್ರಿಕ ಶಕ್ತಿಯಿದೆ. ಪ್ರತಿಬಾರಿ ಮಳೆಗಾಲ ಬಂದಾಗ ಈ ಹಾಡುಗಳನ್ನು ನೆನಪಾಗುತ್ತದೆ.

Advertisement

ಸ್ವಾತಿ ಮುತ್ತಿನ ಮಳೆ ಹನಿಯೇ, ಮುಂಗಾರು ಮಳೆಯೇ, ಮುತ್ತು ಮುತ್ತು ನೀರಾ ಹನಿಯಾ, ಬಂದ ಬಂದ ಮೇಘರಾಜ, ಎಲ್ಲೋ ಮಳೆಯಾಗಿದೆ ಇಂದು, ಮಳೆ ಬರುವ ಹಾಗಿದೆ, ಮೊದಲ ಮಳೆಯಂತೆ, ಮಳೆಯಲಿ ಜೊತೆಯಲಿ… ಹೀಗೇ ಹಲವು ಹಾಡುಗಳು “ಮಳೆ ಹಾಡು”ಗಳು ಕ್ಲಿಕ್‌ ಆಗಿವೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!
December 17, 2025
7:54 AM
by: ದ ರೂರಲ್ ಮಿರರ್.ಕಾಂ
ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..
December 17, 2025
7:17 AM
by: ರೂರಲ್‌ ಮಿರರ್ ಸುದ್ದಿಜಾಲ
ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ
December 17, 2025
7:06 AM
by: ರೂರಲ್‌ ಮಿರರ್ ಸುದ್ದಿಜಾಲ
2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು
December 17, 2025
7:02 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror