ಪಿಎಂ ಫಸಲ್‌‌‌‌ಬಿಮಾ ಯೋಜನೆ ವಿಸ್ತರಣೆ | ಕೇಂದ್ರ ಸಚಿವ ಸಂಪುಟ ಒಪ್ಪಿಗೆ

January 2, 2025
6:34 AM

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ನೀಡುವ ಅನುದಾನ ಮೊತ್ತವನ್ನು 69 ಸಾವಿರದ 515 ಕೋಟಿ ರೂಪಾಯಿಗೆ ಏರಿಸಲಾಗಿದೆ. …..ಮುಂದೆ ಓದಿ….

Advertisement
Advertisement

ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸಂಪುಟ ಸಭೆಯ ವಿವರಗಳನ್ನು ನೀಡಿದರು. ಹೊಸ ವರ್ಷದ ಮೊದಲ ಸಚಿವ ಸಂಪುಟ ಸಭೆಯನ್ನು ಪ್ರಧಾನಿಯವರು ರೈತರಿಗೆ ಸಮರ್ಪಿಸಿದ್ದಾರೆ.  ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ ಸಂಬಂಧಿಸಿದ ವಿವಿಧ ಆಯಾಮಗಳ ಬಗ್ಗೆ ಚರ್ಚಿಸಲಾಗಿದ್ದು, ರೈತರ ಕಲ್ಯಾಣಕ್ಕೆ ಸಂಪೂರ್ಣ ಕೇಂದ್ರೀಕರಿಸಲಾಗಿದೆ.  ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ನೀಡುವ ಅನುದಾನ ಮೊತ್ತವನ್ನು 69 ಸಾವಿರದ 515 ಕೋಟಿ ರೂಪಾಯಿಗೆ ಏರಿಸಲಾಗಿದೆ. ಈ ನಿರ್ಧಾರದಿಂದ ನಾಲ್ಕು ಕೋಟಿ ರೈತರಿಗೆ ಪ್ರಯೋಜನವಾಗಲಿದೆ.  ಫಸಲ್ ಬಿಮಾ ಯೋಜನೆ ಮೂರನೇ ಅತಿದೊಡ್ಡ ವಿಮಾ ಯೋಜನೆಯಾಗಿದೆ. ಯೋಜನೆಯಡಿ ಕಳೆದ 8 ವರ್ಷಗಳಲ್ಲಿ 70 ಸಾವಿರ ಕೋಟಿ ರೂಪಾಯಿ ವಿಮಾ ಮೊತ್ತ ಪಾವತಿಸಲಾಗಿದೆ ಎಂದರು.

ಫಸಲ್ ಬಿಮಾ ಯೋಜನೆಯಡಿ ಆವಿಷ್ಕಾರ ಮತ್ತು ತಂತ್ರಜ್ಞಾನಕ್ಕೆ 800 ಕೋಟಿ ರೂಪಾಯಿ ನಿಧಿ ಒದಗಿಸಲಾಗಿದೆ.  ಯೋಜನೆಯಡಿ ಸುಲಭವಾಗಿ ನೋಂದಣಿ ಮಾಡಿಕೊಳ್ಳಲು ಮತ್ತು ವಿಮಾದಾರರ ವ್ಯಾಪ್ತಿ ಹೆಚ್ಚಿಸಲು ಸರ್ಕಾರ ಈ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ನಿರ್ಧರಿಸಿದೆ.  ಈಶಾನ್ಯ ಮತ್ತು ಹಿಮಾಲಯ ಪ್ರಾಂತ್ಯದ ರಾಜ್ಯಗಳಿಗೆ ನಿಧಿಯನ್ನು  90:10 ಅನುಪಾತದಲ್ಲಿ, ಇತರ ರಾಜ್ಯಗಳಿಗೆ 50:50 ಅನುಪಾತದಲ್ಲಿ ನೀಡಲಾಗುವುದು.  ಯೋಜನೆಯಡಿ ಶೇಕಡಾ 88ರಷ್ಟು ರೈತರು ಕಡಿಮೆ ಆದಾಯ ಹೊಂದಿದವರಾಗಿದ್ದು, ಶೇಕಡಾ 57ರಷ್ಟು ರೈತರು ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರಾಗಿದ್ದಾರೆ ಎಂದರು.

50 ಕೆ.ಜಿ. ಡಿಎಪಿ ರಸಗೊಬ್ಬರ ಚೀಲಕ್ಕೆ 1 ಸಾವಿರದ 350 ರೂಪಾಯಿ ಮುಂದುವರಿಸಲಾಗಿದೆ.  ಇತರ ದೇಶಗಳಲ್ಲಿ ಡಿಎಪಿ ದರ 3 ಸಾವಿರಕ್ಕೂ ಅಧಿಕವಾಗಿದೆ.  ಈ ಪ್ಯಾಕೇಜ್ ಗೆ 3 ಸಾವಿರದ 850 ಕೋಟಿ ರೂಪಾಯಿ ವೆಚ್ಚವಾಗಲಿದೆ.  ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮಾರುಕಟ್ಟೆ ಏರಿಳಿತಗಳಿಂದ ರೈತರಿಗೆ ಹೊರೆಯಾಗದಂತೆ ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.  2014ರಿಂದ 2024ರ ವರೆಗೆ 11 ಲಕ್ಷ 90 ಸಾವಿರ ಕೋಟಿ ರೂಪಾಯಿ ರಸಗೊಬ್ಬರ ಸಬ್ಸಿಡಿ ನೀಡಲಾಗಿದೆ.  ಇದು 2004ರಿಂದ 2014ರ ವರೆಗೆ ನೀಡಲಾದ ಸಬ್ಸಿಡಿಗಿಂತ ಎರಡುಪಟ್ಟು ಹೆಚ್ಚು ಎಂದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ
July 26, 2025
10:25 PM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ
July 26, 2025
10:13 PM
by: The Rural Mirror ಸುದ್ದಿಜಾಲ
ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ
July 26, 2025
10:05 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ
July 26, 2025
9:12 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group