2032 ರ ವೇಳೆಗೆ ದೇಶದ ಇಂಧನ ಬೇಡಿಕೆ ದ್ವಿಗುಣ | ಪಿಎಂ ಸೂರ್ಯಘರ್ ಯೋಜನೆಗೆ ಆದ್ಯತೆ ಅಗತ್ಯ |

October 27, 2024
6:45 AM
ದೇಶದ ಒಟ್ಟಾರೆ ವಿದ್ಯುತ್ ನಲ್ಲಿ ಶೇಕಡ 44ರಷ್ಟು ನವೀಕರಿಸಬಹುದಾದ ಇಂಧನ ಮೂಲವಿದ್ದು, ಕೆಲವೇ ವರ್ಷದಲ್ಲಿ ಈ ಪ್ರಮಾಣ ಶೇಕಡ 50 ದಾಟಲಿದೆ.

2014ರ ತನಕ ದೇಶದಲ್ಲಿ 75 ಗಿಗಾ ವ್ಯಾಟ್ ಮಾತ್ರ ನವೀಕರಿಸಬಹುದಾದ ಇಂಧನ ಉತ್ಪಾದನೆ ಆಗುತ್ತಿತ್ತು. ಇದೀಗ ಈ ಪ್ರಮಾಣ 208 ಗಿಗಾ ವ್ಯಾಟ್ ಗೆ ಏರಿಕೆಯಾಗಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ದೇಶೀಯ ಉತ್ಪಾದಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 2032ರ ವೇಳೆಗೆ ಭಾರತದ ಇಂಧನ ಬೇಡಿಕೆ ದ್ವಿಗುಣವಾಗಲಿದ್ದು, ಅದಕ್ಕೆ ಪೂರಕವಾಗಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ದಾದ್ ಜೋಶಿ  ಹೇಳಿದರು.

Advertisement

ಕರ್ನಾಟಕ ನವೀಕರಿಸಬಹುದಾದ ಇಂಧನ ವ್ಯವಸ್ಥೆ ಉತ್ಪಾದಕರ ಸಂಘ-KRESMA ಹಾಗೂ ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಘಟಕ ವತಿಯಿಂದ ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಕುರಿತ ಸಂವಾದ ಮತ್ತು ಜಾಗೃತಿ ಕಾರ್ಯಕ್ರಮವನ್ನು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ದಾದ್ ಜೋಶಿ ಉದ್ಘಾಟಿಸಿದರು. ಈ ವೇಳೆ ಕೈಪಿಡಿ, ಭಿತ್ತಿಪತ್ರ ಹಾಗೂ ಪುಸ್ತಕ ಬಿಡುಗಡೆ ಮಾಡಿದರು.

ದೇಶದಲ್ಲಿ ಪಿಎಂ ಸೂರ್ಯಘರ್ ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಛಾವಣಿ ಮೇಲೆ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದ್ದು, ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು ನೀಡಿದೆ. ದೇಶದ ಒಟ್ಟಾರೆ ವಿದ್ಯುತ್ ನಲ್ಲಿ ಶೇಕಡ 44ರಷ್ಟು ನವೀಕರಿಸಬಹುದಾದ ಇಂಧನ ಮೂಲವಿದ್ದು, ಕೆಲವೇ ವರ್ಷದಲ್ಲಿ ಈ ಪ್ರಮಾಣ ಶೇಕಡ 50 ದಾಟಲಿದೆ ಎಂದು ಪ್ರಹ್ಲಾದ್‌ ಜೋಶಿ ಹೇಳಿದರು.

ಈ ಸಂದರ್ಭದಲ್ಲಿ KRESMA ಸಂಸ್ಥಾಪಕ ಅಧ್ಯಕ್ಷ ರಮೇಶ್ ಶಿವಣ್ಣ, ಅಧ್ಯಕ್ಷ ಸುರೇಂದ್ರ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬುಧನ ಚಲನೆ | 3 ರಾಶಿಗೆ ಸಂಪತ್ತಿನ ಮಳೆ, ಯಶಸ್ಸು
April 15, 2025
7:43 AM
by: ದ ರೂರಲ್ ಮಿರರ್.ಕಾಂ
ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ
April 14, 2025
7:40 PM
by: The Rural Mirror ಸುದ್ದಿಜಾಲ
ಚಾಮರಾಜನಗರ ಜಿಲ್ಲೆ ಸಿದ್ದಾಪುರ ಜಮೀನು ವಿವಾದ | ರೈತರು ಆತಂಕಪಡುವ ಅಗತ್ಯವಿಲ್ಲ
April 14, 2025
7:28 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |
April 14, 2025
12:45 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group