RRR ಸಿನಿಮಾದ ನಾಟು, ನಾಟು ಸಾಂಗ್ 95ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಅದಕ್ಕೆ ಪ್ರಧಾನಿ ಮೋದಿಯವರು ಚಿತ್ರತಂಡದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ. ಈ ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
ಚಂದ್ರಬೋಸ್ ಅವರ ಸಾಹಿತ್ಯ, ರಾಹುಲ್ ಸಿಪ್ಲಿಗುಂಜ್, ಕಾಲ ಭೈರವ ಅವರ ಗಾಯನದೊಂದಿಗೆ ಎಂ.ಎಂ ಕೀರವಾಣಿ ಸಂಯೋಜಿಸಿದ ಈ ಹಾಡು ಮಾರ್ಚ್ 2022 ರಲ್ಲಿ ಬಿಡುಗಡೆ ಆಯಿತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜನಪ್ರಿಯವಾಯಿತು.
ಆಸ್ಕರ್ ಗೆದ್ದ RRR ಚಿತ್ರತಂಡಕ್ಕೆ ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ. ‘ಅಸಾಧಾರಣ! ‘ನಾಟು ನಾಟು‘ ಜನಪ್ರಿಯತೆ ಜಾಗತಿಕವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವಕ್ಕಾಗಿ @mmkeeravaani, @boselyricist ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಭಾರತವು ಹರ್ಷಗೊಂಡಿದೆ. ಮತ್ತು ಹೆಮ್ಮೆ.’ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ ಲಭಿಸಿದ್ದು, ಅವರಿಗೆ ತುಂಬಾ ಖುಷಿಯಾಗಿದೆ. ಈ ಮೊದಲು ಹಾಡು ಗೋಲ್ಡನ್ ಗ್ಲೋಬ್ಸ್ ಸೇರಿ ಕೆಲವು ಪ್ರತಿಷ್ಠಿತ ಅವಾರ್ಡ್ ಪಡೆದುಕೊಂಡಿತ್ತು. ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟ ಜೂನಿಯರ್ ಎನ್ಟಿಆರ್, ರಾಮ್ ಚರಣ್ ಸಹ ತುಂಬಾ ಖುಷಿಯಾಗಿದ್ದಾರೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ