ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕುಶಲೋಪಚಾರಿ ವಿಚಾರಿಸಿದ್ದಾರೆ. ಈ ವೇಳೆ ಪಕ್ಷ, ಸಂಘಟನೆ ಸದಾ ನಿಮ್ಮೊಂದಿಗೆ ಇದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇವತ್ತು ಬೆಳಗ್ಗೆ ಪ್ರಧಾನಿ ಮೋದಿ ಕರೆ ಮಾಡಿದ್ದರು. ಮೋದಿಯವರ ಕರೆ ಅಂದಾಗ ನನಗೆ ಆಶ್ಚರ್ಯವಾಯ್ತು. ಹಿರಿಯರ ಸೂಚನೆ ಪ್ರಕಾರ ನಿವೃತ್ತಿ ಪತ್ರ ಬರೆದಿದ್ದೆ. ಈ ಹಿನ್ನೆಲೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಶೆಟ್ಟರ್ ಪಕ್ಷ ಬಿಡುವಾಗ ಅವರಿಗೆ ಪತ್ರ ಬರೆದಿದ್ದೆ. ನನ್ನ ನಿರ್ಧಾರ ನನಗೆ ವಿಶೇಷ ಅನಿಸಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಪ್ರಶಂಸೆ ಬಿಜೆಪಿ ಸಂಸ್ಕಾರ. ಟಿಕೆಟ್ ಸಿಗೋದಿಲ್ಲ ಅಂತ ಬೇಸರ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel