ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ | ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಬೆಂಗಾಲವಲು ಪಡೆ | ವಿಡಿಯೋ ವೈರಲ್‌ |

Advertisement
Advertisement

ಶುಕ್ರವಾರ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸ್ವಲ್ಪ ಹೊತ್ತು ನಿಂತಿತು. ಇದೀಗ ಈ  ವಿಡಿಯೋ ವೈರಲ್‌ ಆಗಿದೆ.

Advertisement

ಗುಜರಾತ್ ಬಿಜೆಪಿ ಮತ್ತುಸುದ್ದಿ ಸಂಸ್ಥೆ ಎಎನ್‌ಐ  ಹಂಚಿಕೊಂಡ ವೀಡಿಯೊ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ಎರಡು ಕಾರುಗಳು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಅಹಮದಾಬಾದ್-ಗಾಂಧಿನಗರ ರಸ್ತೆಯಲ್ಲಿ ನಿಧಾನವಾಗಿ ಎಡಭಾಗಕ್ಕೆ ಚಲಿಸಿದೆ. ಅಹಮದಾಬಾದ್‌ನಲ್ಲಿ ಸಾರ್ವಜನಿಕ ರಾಲಿಯಲ್ಲಿ ಭಾಗವಹಿಸಿದ ಪ್ರಧಾನಿಗಳು ಅವರು ಅಲ್ಲಿಂದ ಗಾಂಧಿನಗರದ ರಾಜಭವನದತ್ತ ಹೊರಟಿದ್ದರು. ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪ್ರಧಾನಿಗಳ ವಾಹನಕ್ಕೆ ದಾರಿ ಮಾಡಿ ಕೊಡಲಾಗಿತ್ತು. ಈ ವೇಳೆ ಆಂಬುಲೆನ್ಸ್‌ ಒಂದು ಬಂದಿದ್ದು, ಅದಕ್ಕೆ ಪ್ರಧಾನಿ ಅವರ ರಕ್ಷಣೆಗಿದ್ದ ವಾಹನಗಳು ದಾರಿ ಮಾಡಿಕೊಟ್ಟಿವೆ.

Advertisement
Advertisement

ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ಹೋಗುವ ಮಾರ್ಗದಲ್ಲಿ, ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಪ್ರಧಾನಿ ಮೋದಿಯವರ ವಾಹನವನ್ನು ನಿಲ್ಲಿಸಲಾಯಿತು” ಎಂದು ಗುಜರಾತ್ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ. ಗುಜರಾತ್ ಭೇಟಿಯ ಎರಡನೇ ದಿನದಂದು, ಪ್ರಧಾನಿ ಮೋದಿ ಅವರು ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು ಮತ್ತು ಅಹಮದಾಬಾದ್ ಮೆಟ್ರೋ ರೈಲು ಯೋಜನೆಗೆ ಮೊದಲ ಹಂತದ ಚಾಲನೆ ನೀಡಿದರು.

Advertisement

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ | ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಬೆಂಗಾಲವಲು ಪಡೆ | ವಿಡಿಯೋ ವೈರಲ್‌ |"

Leave a comment

Your email address will not be published.


*