MIRROR FOCUS

ಕೃಷಿ, ಸಾಂಪ್ರದಾಯಿಕ ಔಷಧ ಸೇರಿ ಹಲವಾರು ಒಪ್ಪಂದ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರತ ಪ್ರವಾಸದಲ್ಲಿರುವ ಅಂಗೋಲಾ ಅಧ್ಯಕ್ಷ ಜೋವೊ ಮ್ಯಾನುಯೆಲ್ ಗೊನ್ಸಾಲ್ವೆಸ್ ಲಾರೆಂಕೊ ಮತ್ತು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಇಂದು ಉಭಯ ದೇಶಗಳ  ನಡುವೆ ದೆಹಲಿಯಲ್ಲಿ ಕೃಷಿ, ಸಾಂಪ್ರದಾಯಿಕ ಔಷಧ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಒಪ್ಪಂದಗಳ ವಿನಿಮಯ ನಡೆಯಿತು.ಉಭಯ ದೇಶಗಳ ನಾಯಕರ  ನಡುವೆ ನಡೆದ ನಿಯೋಗ ಮಟ್ಟದ ಮಾತುಕತೆಯ ನಂತರ ಈ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

Advertisement

ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪೆಹಲ್ಗಾಮ್‌ ಉಗ್ರರ ದಾಳಿಯನ್ನು ಉಲ್ಲೇಖಿಸಿ, ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ಭಾರತ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದರು. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದಲ್ಲಿ ಅಂಗೋಲಾ ನೀಡಿದ ಬೆಂಬಲಕ್ಕಾಗಿ  ಧನ್ಯವಾದ ಅರ್ಪಿಸಿದ ಪ್ರಧಾನಿ,  ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಬೆದರಿಕೆ ಎಂದು ಭಾರತ ಮತ್ತು ಅಂಗೋಲಾ ಒಪ್ಪಿಕೊಂಡಿವೆ ಎಂದು ಹೇಳಿದರು.

ಉಭಯ ದೇಶಗಳು  ಈ ವರ್ಷ ತಮ್ಮ ರಾಜತಾಂತ್ರಿಕ ಸಂಬಂಧಗಳ 40 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ. ಅಂಗೋಲಾದ ಸೇನಾ ಪಡೆಗಳ ಆಧುನೀಕರಣಕ್ಕಾಗಿ 200 ಮಿಲಿಯನ್ ಡಾಲರ್‌ಗಳ ರಕ್ಷಣಾ ಕ್ರೆಡಿಟ್ ಲೈನ್ ಅನ್ನು ಅನುಮೋದಿಸಲಾಗಿದೆ ಎಂದ ಪ್ರಧಾನಿ,  ಅಂಗೋಲಾದ ಸಶಸ್ತ್ರ ಪಡೆಗಳ ತರಬೇತಿಯಲ್ಲಿ ಭಾರತ ಸಹಕರಿಸಲು ಸಂತೋಷವಾಗುತ್ತದೆ ಎಂದರು. ಆಫ್ರಿಕನ್ ಒಕ್ಕೂಟದ ಅಧ್ಯಕ್ಷತೆಗಾಗಿ ಅಂಗೋಲಾಗೆ  ಶುಭಾಶಯ ಸಲ್ಲಿಸಿದ ಪ್ರಧಾನಿ, ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ, ಆಫ್ರಿಕನ್ ಒಕ್ಕೂಟಕ್ಕೆ  ಶಾಶ್ವತ ಸದಸ್ಯತ್ವ ದೊರೆತಿರುವುದು ಭಾರತಕ್ಕೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಆ.5-7 ಉತ್ತಮ ಮಳೆ – ಹವಾಮಾನ ಇಲಾಖೆ ಮಾಹಿತಿ

ರಾಜ್ಯದ ಕೆಲವು ಕಡೆ ಮಳೆ ಕಡಿಮೆ ಇದ್ದು, ಮುಂದಿನ 7 ದಿನಗಳ ಹವಾಮಾನ…

17 minutes ago

ಪ್ರೇಮ ಸಂಬಂಧದಲ್ಲಿ ಈ ರಾಶಿಯವರಿಗೆ ವಿಶ್ವಾಸದ ಕೊರತೆಯ ಸಮಸ್ಯೆ

ಪ್ರೇಮ ಸಂಬಂಧವು ಭಾವನಾತ್ಮಕ ಸಾಮರಸ್ಯ, ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ನಿಂತಿದೆ.…

34 minutes ago

ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯ ಹೊಸ ಮಾದರಿಯ 6 ಕಾರು ಧರ್ಮಸ್ಥಳಕ್ಕೆ ಕೊಡುಗೆ

ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ…

46 minutes ago

ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ

ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…

20 hours ago

ಸವಿರುಚಿ | ಹಲಸಿನ ಬೇಳೆ (ಹ ಬೀ) ಸೂಪ್‌

ಹಲಸಿನ ಬೇಳೆ ಸೂಪ್‌ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…

23 hours ago

ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು

ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…

1 day ago