ಒಮಿಕ್ರಾನ್ ಹೊಸ ರೂಪಾಂತರವನ್ನು ತಡೆಗಟ್ಟಲು ಭಾರತೀಯರೆಲ್ಲರೂ ಒಂದಾಗಿ ಮತ್ತೆ ಹೋರಾಟ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಈ ಮನ್ ಕಿ ಬಾತ್ ಕಾರ್ಯಕ್ರಮದ 84 ನೇ ಸಂಚಿಕೆ ಮತ್ತು ವರ್ಷದ ಕೊನೆಯ ಆವೃತ್ತಿಯಲ್ಲಿ ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡರು. ಒಮಿಕ್ರಾನ್ ವಿರುದ್ಧ ಹೋರಾಡಲು ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತಿನ ಶಕ್ತಿಯು ಅವಶ್ಯಕತೆಯಿದೆ ಎಂದ ಅವರು ಈಗ ಕೊರೋನಾವು ಒಮಿಕ್ರಾನ್ ಮೂಲಕ ನಮ್ಮ ಮನೆ ಬಾಗಿಲು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಸಾಂಕ್ರಾಮಿಕ ರೋಗದ ನಡುವೆ ಭಾರತವು ಕುಟುಂಬವಾಗಿ ಒಟ್ಟಿಗೆ ನಿಂತಿದೆ ಎಂದು ಮೋದಿ ಹೇಳಿದರು.
ದೇಶದ ವಿಜ್ಞಾನಿಗಳು ರೂಪಾಂತರಿ ಒಮಿಕ್ರಾನ್‌ನ ಬಗ್ಗೆ ನಿರಂತರ ಅಧ್ಯಯನವನ್ನು ನಡೆಸುತ್ತಿದ್ದಾರೆ. ಆದುದರಿಂದ ಈ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನವು ಮುಖ್ಯವಾಗಿದೆ. ದೇಶವನ್ನುದ್ದೇಶಿಸಿ ಶನಿವಾರ ಮಾತನಾಡಿದ್ದ ಮೋದಿ, ದೇಶದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3 ರಿಂದ ಕೋವಿಡ್ ತಡೆ ಲಸಿಕೆ ನೀಡಲಾಗುವುದು. ಮಾತ್ರವಲ್ಲದೆ ದೇಶದ ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಹೇಳಿದ್ದಾರೆ.