ಜಲಸಂರಕ್ಷಣೆಯ ಮಾದರಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ | 8 ವರ್ಷಗಳಲ್ಲಿ ದೇಶದಲ್ಲಿ 11 ಶತಕೋಟಿ ಘನ ಮೀಟರ್ ನೀರು ಸಂರಕ್ಷಣೆ |

March 30, 2025
10:20 PM
ಕಳೆದ 8 ವರ್ಷಗಳಲ್ಲಿ 11 ಶತಕೋಟಿ ಘನ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನದನ್ನು ಹೊಸದಾಗಿ ನಿರ್ಮಿಸಲಾದ ಟ್ಯಾಂಕ್‌ಗಳು, ಕೊಳಗಳು ಮತ್ತು ಇತರ ನೀರಿನ ಪುನರ್‌ ಭರ್ತಿ ರಚನೆಗಳ ಮೂಲಕ ನೀರನ್ನು ಸಂರಕ್ಷಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮಳೆ ನೀರನ್ನು ಸಂರಕ್ಷಿಸುವ ಮೂಲಕ ನಾವು ಬಹಳಷ್ಟು ನೀರನ್ನು ವ್ಯರ್ಥವಾಗುವುದನ್ನು ತಪ್ಪಿಸಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದದಲ್ಲಿ ತಿಳಿಸಿದ್ದಾರೆ.  ಇದೇ ವೇಳೆ ಗದಗ ಜಿಲ್ಲೆಯ ಗ್ರಾಮಸ್ಥರ ನೀರು ಸಂರಕ್ಷಣೆ ಕುರಿತ ಕ್ರಮದ ಕುರಿತು ಉಲ್ಲೇಖಿಸಿದರು. ……..ಮುಂದೆ ಓದಿ…..

Advertisement
Advertisement

ದೇಶದ ಹಲವು ಭಾಗಗಳಲ್ಲಿ ನೀರಿನ ಸಂರಕ್ಷಣೆಗಾಗಿ ಅಭೂತಪೂರ್ವ ಕೆಲಸ ಮಾಡಲಾಗಿದೆ. ಕಳೆದ 8 ವರ್ಷಗಳಲ್ಲಿ 11 ಶತಕೋಟಿ ಘನ ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನದನ್ನು ಹೊಸದಾಗಿ ನಿರ್ಮಿಸಲಾದ ಟ್ಯಾಂಕ್‌ಗಳು, ಕೊಳಗಳು ಮತ್ತು ಇತರ ನೀರಿನ ಪುನರ್‌ ಭರ್ತಿ ರಚನೆಗಳ ಮೂಲಕ ನೀರನ್ನು ಸಂರಕ್ಷಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಜನರು ರೂಪಿಸಿರುವ ಒಂದು ಮಾದರಿ ಕುರಿತು ಮಾಹಿತಿ ಹಂಚಿಕೊಂಡ ಪ್ರಧಾನಿ, ಕೆಲವು ವರ್ಷಗಳ ಹಿಂದೆ, ಇಲ್ಲಿನ ಎರಡು ಹಳ್ಳಿಗಳ ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿದ್ದವು. ಪ್ರಾಣಿಗಳಿಗೂ ಕುಡಿಯಲು ನೀರು ಇಲ್ಲದಂತಾಗಿತ್ತು. ಕ್ರಮೇಣ ಆ ಕೆರೆ, ಹುಲ್ಲು ಮತ್ತು ಕಸಕಡ್ಡಿಗಳಿಂದ ತುಂಬಿಹೋಯಿತು. ಆದರೆ ಕೆಲವು ಗ್ರಾಮಸ್ಥರು, ಮನಸ್ಸಿದ್ದಲ್ಲಿ ಮಾರ್ಗ ಎಂಬ ಮಾತಿನಂತೆ ಕೆರೆ ಪುನರುಜ್ಜೀವನಗೊಳಿಸಲು ನಿರ್ಧರಿಸಿ, ಕಾರ್ಯ ಪ್ರವೃತ್ತರಾದರು. ಗ್ರಾಮಸ್ಥರ ಈ ಪ್ರಯತ್ನವನ್ನು ನೋಡಿ, ಸುತ್ತಮುತ್ತಲ ಸಾಮಾಜಿಕ ಸಂಸ್ಥೆಗಳು ಸಹ ಅವರೊಂದಿಗೆ ಕೈಜೋಡಿಸಿದವು. ಎಲ್ಲರೂ ಒಗ್ಗೂಡಿ ಕಸಕಡ್ಡಿ ಸ್ವಚ್ಛಗೊಳಿಸಿ, ಹೂಳೆತ್ತುವ ಕೆಲಸ ಮಾಡಿದರು.  ಕೆಲ ಸಮಯದ ನಂತರ ಕೆರೆ ಪ್ರದೇಶವು ಪುನರುಜ್ಜೀನಗೊಂಡಿತು ಎಂದು ಶ್ಲಾಘಿಸಿದರು.  ನಿಜಕ್ಕೂ, ಇದು `catch the rain’  ಅಭಿಯಾನದ ಒಂದು ಉತ್ತಮ ಉದಾಹರಣೆಯಾಗಿದೆ. ಸಮುದಾಯ ಮಟ್ಟದಲ್ಲಿ ಇಂತಹ ಪ್ರಯತ್ನಗಳಿಗೆ ಎಲ್ಲರೂ ಕೈಜೋಡಿಸಬಹುದು. ನಿಮ್ಮ ಮನೆಯ ಛಾವಣಿ ಅಥವಾ ಅಂಗಳದಲ್ಲಿ ಪಕ್ಷಿಗಳಿಗೆ ನೀರನ್ನು ಇರಿಸಿ ಎಂದು ಅವರು ಸಲಹೆ ನೀಡಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ | ಕಲಬುರಗಿ ಜಿಲ್ಲೆಗೆ ಹೆಚ್ಚಿನ ಬೆಳೆ ವಿಮೆ
July 26, 2025
3:56 PM
by: The Rural Mirror ಸುದ್ದಿಜಾಲ
ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ
July 26, 2025
3:16 PM
by: The Rural Mirror ಸುದ್ದಿಜಾಲ
ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ
July 26, 2025
2:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?
July 26, 2025
11:18 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group