ಮನೆ ಮೇಲ್ಚಾವಣಿಯಲ್ಲೇ ವಿದ್ಯುತ್ ಉತ್ಪಾದನೆ | ಪಿಎಂ ಸೂರ್ಯ ಘರ್ ಯೋಜನೆಗೆ ಪ್ರಧಾನಿ ಚಾಲನೆ

February 17, 2024
5:04 PM

ಮನೆಯ ಮೇಲ್ಚಾವಣೆಯಲ್ಲಿ ಸೌರ ಫಲಕಗಳ(Solar Panel) ಅಳವಡಿಕೆಗೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ‘ಪಿಎಂ ಸೂರ್ಯ ಘರ್: ಮುಫ್ತ ಬಿಜಲಿ ಯೋಜನೆ'(PM Surya Ghar Muft Bijli Yojana) ಅನ್ನು ಘೋಷಿಸಿದರು.ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ (Free Power)ಶಕ್ತಿ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗುವ ಗುರಿಯನ್ನು ಈ ಯೋಜನೆ ಹೊಂದಿದೆ.

Advertisement
Advertisement

2024-25ನೇ ಸಾಲಿನ ಮಧ್ಯಂತರ ಬಜೆಟ್(Budget) ಮಂಡನೆ ಸಂದರ್ಭದಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ವಿತ್ತ ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitaraman) ಘೋಷಿಸಿದರು. ಸೋಲಾರ್ ಪ್ಯಾನೆಲ್ ಯೋಜನೆ ಅಡಿಯಲ್ಲಿ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗುತ್ತದೆ ಮತ್ತು ಇದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ರೀತಿ ಸಬ್ಸಿಡಿಗಳನ್ನು ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡೋದ್ರಿಂದ ಜನರ ಮೇಲೆ ಯಾವುದೇ ವೆಚ್ಚದ ಹೊರೆ ಇರೋದಿಲ್ಲ ಎಂದು ಪ್ರಧಾನಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಮೇಲ್ಚಾವಣೆ ಸೌರವಿದ್ಯುತ್ ವ್ಯವಸ್ಥೆಯನ್ನು ಉತ್ತೇಜಿಸಲು ಸ್ಥಳೀಯ ಪಟ್ಟಣ ಹಾಗೂ ಗ್ರಾಮ ಪಂಚಾಯತಿಗಳಿಗೆ ಸರ್ಕಾರ ಪ್ರೋತ್ಸಾಹಧನ ಕೂಡ ನೀಡಲಿದೆ. ಇನ್ನು ಈ ಯೋಜನೆಯಿಂದ ಹೆಚ್ಚಿನ ಆದಾಯ, ಕಡಿಮೆ ವಿದ್ಯುತ್ ಬಿಲ್ ಗಳು ಹಾಗೂ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಮೋದಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇನ್ನು ಮೇಲ್ಚಾವಣೆ ಸೌರ ವಿದ್ಯುತ್ ಫಲಕಗಳನ್ನು ಕಟ್ಟಡ, ಮನೆ ಅಥವಾ ವಾಸ್ತವ್ಯದ ಕಟ್ಟಡಗಳ ಮೇಲೆ ಅಳವಡಿಸಲು ಅವಕಾಶ ನೀಡಲಾಗಿದೆ. ಇನ್ನು ಪಿಎಂ ಸೂರ್ಯ ಘರ್: ಮುಫ್ತಿ ಬಿಜಲಿ ಯೋಜನೆಗೆ https://pmsuryaghar.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ?

ಹಂತ 1: ಈ ಕೆಳಗಿನ ಮಾಹಿತಿಗಳನ್ನು ಪೋರ್ಟಲ್ ನಲ್ಲಿ ಭರ್ತಿ ಮಾಡಿ.
ನಿಮ್ಮ ರಾಜ್ಯ ಆಯ್ಕೆ ಮಾಡಿ.
ನಿಮ್ಮ ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿ.
ನಿಮ್ಮ ವಿದ್ಯುತ್ ಗ್ರಾಹಕರ ಸಂಖ್ಯೆ ಭರ್ತಿ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ.
ನಿಮ್ಮ ಇ-ಮೇಲ್ ನಮೂದಿಸಿ.

ಹಂತ 2: ನಿಮ್ಮ ಗ್ರಾಹಕ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ.
ಅರ್ಜಿಯಲ್ಲಿರುವಂತೆ ಮೇಲ್ಚಾವಣಿ ಸೋಲಾರ್ ಯೋಜನೆಗೆ ಅರ್ಜಿ ಸಲ್ಲಿಸಿ.

ಹಂತ 3: ಅನುಮೋದನೆಗೆ ಕಾಯಿರಿ.
ನಿಮ್ಮ DISCOM ಅಲ್ಲಿ ಯಾವುದೇ ನೋಂದಾಯಿತ ವ್ಯಾಪಾರಿಗಳಿಂದ ಸೋಲಾರ್ ಸಾಧನ ಅಳವಡಿಸಿಕೊಳ್ಳಿ.

ಹಂತ 4: ಒಮ್ಮೆ ಅಳವಡಿಕೆ ಪೂರ್ಣಗೊಂಡ ಬಳಿಕ ಘಟಕದ ಮಾಹಿತಿಗಳನ್ನು ಸಲ್ಲಿಕೆ ಮಾಡಿ. ಹಾಗೆಯೇ ನೆಟ್ ಮೀಟರ್ ಗೆ ಅರ್ಜಿ ಸಲ್ಲಿಸಿ.

ಹಂತ 5: ನೆಟ್ ಮೀಟರ್ ಅಳವಡಿಕೆ ಹಾಗೂ DISCOM ಪರಿಶೀಲನೆ ಬಳಿಕ ಪೋರ್ಟಲ್ ನಲ್ಲಿ ಕಮೀಷನಿಂಗ್ ಪ್ರಮಾಣಪತ್ರ ಸೃಷ್ಟಿಯಾಗುತ್ತದೆ.

ಹಂತ 6: ಒಮ್ಮೆ ನಿಮಗೆ ಕಮೀಷನಿಂಗ್ ವರದಿ ಬಂದ ಬಳಿಕ ಬ್ಯಾಂಕ್ ಖಾತೆ ಮಾಹಿತಿಗಳು ಹಾಗೂ ಕ್ಯಾನ್ಸಲ್ ಮಾಡಿರುವ ಚೆಕ್ ಅನ್ನು ಪೋರ್ಟಲ್ ಮೂಲಕ ಸಲ್ಲಿಕೆ ಮಾಡಿ. 30 ದಿನಗಳೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಬರುತ್ತದೆ.

– ಅಂತರ್ಜಾಲ ಮಾಹಿತಿ

Prime Minister Narendra Modi announced the launch of PM Surya Ghar Muft Bijli Yojana, aimed at providing up to 300 units of free electricity monthly to 1 crore households in the country. The project with an investment exceeding Rs 75,000 crore, aims to seek to boost income levels, reduce power bills, and improve employment opportunities, Modi said.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
January 30, 2026
7:27 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror