ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆ | ದಕ್ಷಿಣ ಕನ್ನಡದಲ್ಲೂ ಯಶಸ್ವಿಯಾಗಿ ಅನುಷ್ಟಾನ |

September 16, 2024
11:17 AM

ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆ ದೇಶದಾದ್ಯಂತ ಚಾಲನೆಗೊಂಡಿದೆ. ಈ ಯೋಜನೆಯಡಿ “ಮಾದರಿ ಸೌರ ಗ್ರಾಮಗಳʼ ನಿರ್ಮಾಣದ ಅನುಷ್ಠಾನಕ್ಕಾಗಿ ಭಾರತ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಗೊಂಡಿತ್ತು. ಹಲವು ಕಡೆ ಈ ಯೋಜನೆ ಅನುಷ್ಟಾನಗೊಳ್ಳುತ್ತಿದೆ. ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.…..ಮುಂದೆ ಓದಿ….

Advertisement
Advertisement
Advertisement

ಈ ಯೋಜನೆಯಡಿ ʼಮಾದರಿ ಸೌರ ಗ್ರಾಮʼಗಳನ್ನು ನಿರ್ಮಾಣ ಮಾಡುವುದು ಯೋಜನೆಯ ಒಂದು ಭಾಗವಾಗಿದ್ದು, ಭಾರತದ ಪ್ರತಿಯೊಂದು ಜಿಲ್ಲೆಯಲ್ಲಿ ತಲಾ ಒಂದೊಂದು ಮಾದರಿ ಸೌರ ವಿದ್ಯುತ್‌ ಗ್ರಾಮಗಳನ್ನು ನಿರ್ಮಿಸಲು ಉತ್ತೇಜನ ಮತ್ತು ಗ್ರಾಮದ ಸಮುದಾಯಗಳು ತಮ್ಮ ಶಕ್ತಿಯ ಅಗತ್ಯತೆಗಳನ್ನು ಈಡೇರಿಸುವ ಜೊತೆಗೆ ಸ್ವಾವಲಂಬಿಯಾಗುವಂತೆ ಮಾಡುವ ಗುರಿ ಹೊಂದಲಾಗಿದೆ. ‌

Advertisement

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಈ ಯೋಜನೆ ಜಾರಿಯಾಗುತ್ತಿದೆ. ಈ ಬಗ್ಗೆ ಮಾತನಾಡಿದ ವ್ಯಾಪಾರಿ  ದಾಮೋದರ್ ಕಾಮತ್, ತಮ್ಮ ಮನೆಯ ಮೇಲೆ ಸೋಲಾರ್ ಯೋಜನೆ ಅಳವಡಿಸಿಕೊಂಡಿದ್ದು, ಮನೆಗೆ ಬೇಕಾದ ವಿದ್ಯುತ್ ಉತ್ಪಾದಿಸಿಕೊಳ್ಳಲು ಸಹಕಾರಿಯಾಗಿದೆ. ಬ್ಯಾಂಕ್ ನಿಂದ ಸಾಲ ಮತ್ತು ಸಹಾಯಧನ ಸಿಗುತ್ತಿದೆ ಎನ್ನುತ್ತಾರೆ.

Advertisement

ವೈದ್ಯ ಡಾ. ಅಣ್ಣಪ್ಪ ಕಾಮತ್, ಪಿಎಂ ಸೂರ್ಯಘರ್ ಯೋಜನೆ ಲಾಭದಾಯಕವಾಗಿದೆ. ಮನೆಗೆ ಬೇಕಾದ ವಿದ್ಯುತ್ ಬಳಕೆ ಮಾಡಿಕೊಂಡು ಉಳಿಕೆ ವಿದ್ಯುತ್ ಮೆಸ್ಕಾಂಗೆ ನೀಡುತ್ತಿದ್ದೇವೆ. ಪ್ರಧಾನಮಂತ್ರಿಗಳ ಈ ಯೋಜನೆ ಅನುಕೂಲಕರ ಎಂದು ಹೇಳುತ್ತಾರೆ.

ಉಪನ್ಯಾಸಕ ಡಾ. ಸುಧಾಕರ್, ಪಿಎಂ ಸೂರ್ಯಘರ್ ಯೋಜನೆಯಡಿ 5 ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಸಿದ್ದು, 78 ಸಾವಿರ ರೂಪಾಯಿ ಸಹಾಯಧನ ಮಂಜೂರಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.

Advertisement

ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಲೋಹಿತ್, ಸೌರಶಕ್ತಿ ಮೂಲಕ ಉತ್ಪಾದನೆಯಾಗುವ ವಿದ್ಯುತ್ ನಿಂದ ದೇಶದಲ್ಲಿ ಸಂಪನ್ಮೂಲಗಳ ಸದ್ಭಳಕೆಗೆ ಸಹಕಾರಿಯಾಗಲಿದೆ. ಅದರಲ್ಲಿ ಪಿಎಂ ಸೂರ್ಯಘರ್ ಯೋಜನೆಯು ಒಂದು ಕುಟುಂಬಕ್ಕೆ ಬೇಕಾಗುವ ವಿದ್ಯುತ್ ಅನ್ನು ತಮ್ಮ ಮನೆಯ ಛಾವಣಿ ಮೇಲೆ ಸೌರಶಕ್ತಿ ಮೂಲಕ ಉತ್ಪಾದಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror