ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆ ದೇಶದಾದ್ಯಂತ ಚಾಲನೆಗೊಂಡಿದೆ. ಈ ಯೋಜನೆಯಡಿ “ಮಾದರಿ ಸೌರ ಗ್ರಾಮಗಳʼ ನಿರ್ಮಾಣದ ಅನುಷ್ಠಾನಕ್ಕಾಗಿ ಭಾರತ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಗೊಂಡಿತ್ತು. ಹಲವು ಕಡೆ ಈ ಯೋಜನೆ ಅನುಷ್ಟಾನಗೊಳ್ಳುತ್ತಿದೆ. ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.…..ಮುಂದೆ ಓದಿ….
ಈ ಯೋಜನೆಯಡಿ ʼಮಾದರಿ ಸೌರ ಗ್ರಾಮʼಗಳನ್ನು ನಿರ್ಮಾಣ ಮಾಡುವುದು ಯೋಜನೆಯ ಒಂದು ಭಾಗವಾಗಿದ್ದು, ಭಾರತದ ಪ್ರತಿಯೊಂದು ಜಿಲ್ಲೆಯಲ್ಲಿ ತಲಾ ಒಂದೊಂದು ಮಾದರಿ ಸೌರ ವಿದ್ಯುತ್ ಗ್ರಾಮಗಳನ್ನು ನಿರ್ಮಿಸಲು ಉತ್ತೇಜನ ಮತ್ತು ಗ್ರಾಮದ ಸಮುದಾಯಗಳು ತಮ್ಮ ಶಕ್ತಿಯ ಅಗತ್ಯತೆಗಳನ್ನು ಈಡೇರಿಸುವ ಜೊತೆಗೆ ಸ್ವಾವಲಂಬಿಯಾಗುವಂತೆ ಮಾಡುವ ಗುರಿ ಹೊಂದಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಈ ಯೋಜನೆ ಜಾರಿಯಾಗುತ್ತಿದೆ. ಈ ಬಗ್ಗೆ ಮಾತನಾಡಿದ ವ್ಯಾಪಾರಿ ದಾಮೋದರ್ ಕಾಮತ್, ತಮ್ಮ ಮನೆಯ ಮೇಲೆ ಸೋಲಾರ್ ಯೋಜನೆ ಅಳವಡಿಸಿಕೊಂಡಿದ್ದು, ಮನೆಗೆ ಬೇಕಾದ ವಿದ್ಯುತ್ ಉತ್ಪಾದಿಸಿಕೊಳ್ಳಲು ಸಹಕಾರಿಯಾಗಿದೆ. ಬ್ಯಾಂಕ್ ನಿಂದ ಸಾಲ ಮತ್ತು ಸಹಾಯಧನ ಸಿಗುತ್ತಿದೆ ಎನ್ನುತ್ತಾರೆ.
ವೈದ್ಯ ಡಾ. ಅಣ್ಣಪ್ಪ ಕಾಮತ್, ಪಿಎಂ ಸೂರ್ಯಘರ್ ಯೋಜನೆ ಲಾಭದಾಯಕವಾಗಿದೆ. ಮನೆಗೆ ಬೇಕಾದ ವಿದ್ಯುತ್ ಬಳಕೆ ಮಾಡಿಕೊಂಡು ಉಳಿಕೆ ವಿದ್ಯುತ್ ಮೆಸ್ಕಾಂಗೆ ನೀಡುತ್ತಿದ್ದೇವೆ. ಪ್ರಧಾನಮಂತ್ರಿಗಳ ಈ ಯೋಜನೆ ಅನುಕೂಲಕರ ಎಂದು ಹೇಳುತ್ತಾರೆ.
ಉಪನ್ಯಾಸಕ ಡಾ. ಸುಧಾಕರ್, ಪಿಎಂ ಸೂರ್ಯಘರ್ ಯೋಜನೆಯಡಿ 5 ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್ ಅಳವಡಿಸಿದ್ದು, 78 ಸಾವಿರ ರೂಪಾಯಿ ಸಹಾಯಧನ ಮಂಜೂರಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.
ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಲೋಹಿತ್, ಸೌರಶಕ್ತಿ ಮೂಲಕ ಉತ್ಪಾದನೆಯಾಗುವ ವಿದ್ಯುತ್ ನಿಂದ ದೇಶದಲ್ಲಿ ಸಂಪನ್ಮೂಲಗಳ ಸದ್ಭಳಕೆಗೆ ಸಹಕಾರಿಯಾಗಲಿದೆ. ಅದರಲ್ಲಿ ಪಿಎಂ ಸೂರ್ಯಘರ್ ಯೋಜನೆಯು ಒಂದು ಕುಟುಂಬಕ್ಕೆ ಬೇಕಾಗುವ ವಿದ್ಯುತ್ ಅನ್ನು ತಮ್ಮ ಮನೆಯ ಛಾವಣಿ ಮೇಲೆ ಸೌರಶಕ್ತಿ ಮೂಲಕ ಉತ್ಪಾದಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…