ಅ.17 ದೆಹಲಿಯಲ್ಲಿ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022 | ‘ಭಾರತ್‌’ ಬ್ರ್ಯಾಂಡ್‌ ಯೂರಿಯಾ ಬಿಡುಗಡೆ | ಏನಿದು “ಭಾರತ್”‌ ಯೂರಿಯಾ ? |

October 16, 2022
3:59 PM

ಕೃಷಿ ಹಾಗೂ ರಸಗೊಬ್ಬರ ಸಚಿವಾಲಯ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವತಿಯಿಂದ  ಪಿಎಂ ಕಿಸಾನ್‌ ಸಮ್ಮಾನ್‌ ಸಮ್ಮೇಳನವು ದೆಹಲಿಯಲ್ಲಿ ಅ.17 ರಿಂದ 2 ದಿನಗಳ ಕಾಲ ನಡೆಯಲಿದೆ. ಈ ಸಂದರ್ಭ ಭಾರತ್‌’ ಬ್ರ್ಯಾಂಡ್‌ನಡಿ ಯೂರಿಯೂ ಬಿಡುಗಡೆಯಾಗಲಿದೆ. ಇದೇ ವೇಳೆ ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ.

ರೈತರಿಗೆ ಸಹಾಯಧನದ ಮೂಲಕ ವಿತರಣೆಯಾಗುವ ಗೊಬ್ಬರಗಳು ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆ ಅಡಿಯಲ್ಲಿ ಭಾರತ್‌ ಬ್ರಾಂಡ್‌ ಮೂಲಕ ವಿತರಣೆಯಾಗಲಿದೆ. “ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022”  ಕಾರ್ಯಕ್ರಮದಲ್ಲಿ ರೈತರು, ಅಗ್ರಿ ಸ್ಟಾರ್ಟಪ್‌ಗಳು, ಸಂಶೋಧಕರು, ನೀತಿ ನಿರೂಪಕರು, ಬ್ಯಾಂಕರ್‌ಗಳು ಮತ್ತು ಬಂಡವಾಳಗಾರರು ಈ ಕಾರ್ಯಕ್ರಮದಲ್ಲಿ ಇರುತ್ತಾರೆ. ಈ ಕಾರ್ಯಕ್ರಮವು ರೈತರು ಮತ್ತು ಅಗ್ರಿ ಸ್ಟಾರ್ಟ್‌ಅಪ್‌ಗಳನ್ನು ಒಂದೇ ವೇದಿಕೆಯಲ್ಲಿ ತರುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಕಾರ್ಯಕ್ರಮದಲ್ಲಿ ಒಂದು ಕೋಟಿಗೂ ಹೆಚ್ಚು ರೈತರು ಸೇರಲಿದ್ದಾರೆ. 732 ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು), 75 ಐಸಿಎಆರ್ ಸಂಸ್ಥೆಗಳು, 75 ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, 600 ಪಿಎಂ ಕಿಸಾನ್ ಕೇಂದ್ರಗಳು, 50,000 ಪ್ರಾಥಮಿಕ ಕೃಷಿ ಸಹಕಾರ ಸಂಘಗಳು (ಪಿಎಸಿಎಸ್), ಮತ್ತು 2 ಲಕ್ಷ ಸಮುದಾಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯ ಮೂಲಕವಾಗಿ ರಸಗೊಬ್ಬರ ವಿತರಣೆಯ ಕ್ರಮ ಕೈಗೊಳ್ಳಲಾಗುತ್ತದೆ.
ರಾಷ್ಟ್ರದಾದ್ಯಂತ ರಸಗೊಬ್ಬರ ಬ್ರಾಂಡ್‌ಗಳನ್ನು “ಭಾರತ್” ಬ್ರಾಂಡ್‌ನಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡುವುದನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಸರ್ಕಾರದಿಂದ ಸಹಾಯಧನ ಲಭ್ಯವಾಗುವ ಗೊಬ್ಬರಗಳು ಭಾರತ್‌ ಬ್ರಾಂಡ್‌ ಮೂಲಕ ಮಾರುಕಟ್ಟೆಗೆ ರವಾನೆಯಾಗಬೇಕಿದೆ. ಅದು “ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಒಪಿ ಮತ್ತು ಭಾರತ್ ಎನ್‌ಪಿಕೆ ಆಗಿರಬೇಕು. ಅದರ ಮೊದಲ ಭಾಗವಾಗಿ ಪ್ರಧಾನಿಗಳು ಭಾರತ್‌ ಯೂರಿಯಾ ಬಿಡುಗಡೆ ಮಾಡಲಿದ್ದಾರೆ.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ
March 15, 2025
7:00 AM
by: ದಿವ್ಯ ಮಹೇಶ್
ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...