ಕೃಷಿ ಹಾಗೂ ರಸಗೊಬ್ಬರ ಸಚಿವಾಲಯ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವತಿಯಿಂದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನವು ದೆಹಲಿಯಲ್ಲಿ ಅ.17 ರಿಂದ 2 ದಿನಗಳ ಕಾಲ ನಡೆಯಲಿದೆ. ಈ ಸಂದರ್ಭ ಭಾರತ್’ ಬ್ರ್ಯಾಂಡ್‌ನಡಿ ಯೂರಿಯೂ ಬಿಡುಗಡೆಯಾಗಲಿದೆ. ಇದೇ ವೇಳೆ ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ.
ರೈತರಿಗೆ ಸಹಾಯಧನದ ಮೂಲಕ ವಿತರಣೆಯಾಗುವ ಗೊಬ್ಬರಗಳು ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆ ಅಡಿಯಲ್ಲಿ ಭಾರತ್ ಬ್ರಾಂಡ್ ಮೂಲಕ ವಿತರಣೆಯಾಗಲಿದೆ. “ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022” ಕಾರ್ಯಕ್ರಮದಲ್ಲಿ ರೈತರು, ಅಗ್ರಿ ಸ್ಟಾರ್ಟಪ್‌ಗಳು, ಸಂಶೋಧಕರು, ನೀತಿ ನಿರೂಪಕರು, ಬ್ಯಾಂಕರ್‌ಗಳು ಮತ್ತು ಬಂಡವಾಳಗಾರರು ಈ ಕಾರ್ಯಕ್ರಮದಲ್ಲಿ ಇರುತ್ತಾರೆ. ಈ ಕಾರ್ಯಕ್ರಮವು ರೈತರು ಮತ್ತು ಅಗ್ರಿ ಸ್ಟಾರ್ಟ್‌ಅಪ್‌ಗಳನ್ನು ಒಂದೇ ವೇದಿಕೆಯಲ್ಲಿ ತರುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕಾರ್ಯಕ್ರಮದಲ್ಲಿ ಒಂದು ಕೋಟಿಗೂ ಹೆಚ್ಚು ರೈತರು ಸೇರಲಿದ್ದಾರೆ. 732 ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು), 75 ಐಸಿಎಆರ್ ಸಂಸ್ಥೆಗಳು, 75 ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, 600 ಪಿಎಂ ಕಿಸಾನ್ ಕೇಂದ್ರಗಳು, 50,000 ಪ್ರಾಥಮಿಕ ಕೃಷಿ ಸಹಕಾರ ಸಂಘಗಳು (ಪಿಎಸಿಎಸ್), ಮತ್ತು 2 ಲಕ್ಷ ಸಮುದಾಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯ ಮೂಲಕವಾಗಿ ರಸಗೊಬ್ಬರ ವಿತರಣೆಯ ಕ್ರಮ ಕೈಗೊಳ್ಳಲಾಗುತ್ತದೆ.
ರಾಷ್ಟ್ರದಾದ್ಯಂತ ರಸಗೊಬ್ಬರ ಬ್ರಾಂಡ್‌ಗಳನ್ನು “ಭಾರತ್” ಬ್ರಾಂಡ್‌ನಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡುವುದನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಸರ್ಕಾರದಿಂದ ಸಹಾಯಧನ ಲಭ್ಯವಾಗುವ ಗೊಬ್ಬರಗಳು ಭಾರತ್ ಬ್ರಾಂಡ್ ಮೂಲಕ ಮಾರುಕಟ್ಟೆಗೆ ರವಾನೆಯಾಗಬೇಕಿದೆ. ಅದು “ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಒಪಿ ಮತ್ತು ಭಾರತ್ ಎನ್‌ಪಿಕೆ ಆಗಿರಬೇಕು. ಅದರ ಮೊದಲ ಭಾಗವಾಗಿ ಪ್ರಧಾನಿಗಳು ಭಾರತ್ ಯೂರಿಯಾ ಬಿಡುಗಡೆ ಮಾಡಲಿದ್ದಾರೆ.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…