ತಮ್ಮ ಕುಲಕಸುಬನ್ನು ಅಥವಾ ವೃತ್ತಿಯನ್ನು ಮುಂದುವರಿಸಲು ಕಷ್ಟಪಡುತ್ತಿರುವವರಿಗೆ ಬೆಂಬಲ ನೀಡುವ ಉದ್ದೇಶದಿಂದ ಜಾರಿಗೆ ಬಂದಿರುವ ಯೋಜನೆಯೇ ಪಿಎಂ ವಿಶ್ವಕರ್ಮ ಯೋಜನೆ. ಕೇಂದ್ರ ಸರ್ಕಾರವ ಜಾರಿಗೆ ತಂದಿರುವ ಈ ಮಹಾತ್ವಾಕಾಂಕ್ಷಿ ಯೋಜನಯ ಮೂಕ್ಯ ಉದ್ದೇಶವೇ ದೇಶದ ಮೂಲೆಯಲ್ಲಿರುವ ಕುಶಲಕರ್ಮಿಗಳಗೆ ಮತ್ತು ಸಾಂಪ್ರದಾಯಿಕ ವೃತ್ತಿ ನಡೆಸುವವರಿಗೆ ನೆರವಾಗುವುದು. ಕೇವಲ ಹೆಸರಿಗೆ ಮಾತ್ರ ಯೋಜನೆಯಲ್ಲ, ಇದು ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಬ್ಯುಸಿನೆಸ್ ಲೋನ್ ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ರೂಪಿಸಲಾದ ವ್ಯವಸ್ಥೆಯಾಗಿದೆ.
ಸಾಲದ ಮೊತ್ತ ಮತ್ತು ಹಂತಗಳ ವಿವರಣೆ:
• ಮೊದಲ ಹಂತಗಳು – 50,000 ವರೆಗೆ- ಉದ್ಯಮ ಆರಂಭಿಸಲು ಅಥವಾ ಬಂಡವಾಳ ಹೂಡಿಕೆಗೆ ಪ್ರಾಥಮಿಕ ನೆರವು
• ಎರಡನೇ ಹಂತ-ರೂ 1,00,000 ದಿಂದ ರೂ3,00,000 ವರೆಗೆ- ಮೊದಲ ಹಂತದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದ ನಂತರ, ಉದ್ಯಮ ವಿಸ್ತರಣೆಗೆ ಈ ದೊಡ್ಡ ಮೊತ್ತ ಸಿಗುತ್ತದೆ.
ಈ ಸಾಲ ಸೌಲಭ್ಯದ ವಿಶೇಷವೆನೆಂದರೆ, ಇದಕ್ಕೆ ಅನ್ವಯವಾಗುವ ಬಡ್ಡಿದರ ಮಾರುಕಟ್ಟೆಯಲ್ಲಿನ ಇತರೆ ಸಾಲಗಳಿಗೆ ಹೋಲಿಸಿದರೆ ತೀರಾ ಕಡಿಮೆ. ಜೊತೆಗೆ ಸರ್ಕಾರದಿಂದ ಬಡ್ಡಿ ಸಬ್ಸಿಡಿ ಕೂಡ ಲಭ್ಯವಿರುವುದರಿಂದ, ಮರುಪಾವತಿಯ ಹೊರೆ ಕಡಿಮೆ ಇರುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ತೀರಿಸಿದರೆ ಮುಂದಿನ ಹಂತದ ಸಾಲ ಪಡೆಯಲು ದಾರಿ ಸುಗಮವಾಗುತ್ತದೆ.
ಅರ್ಜಿಗೆ ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್
• ಬ್ಯಾಂಕ್ ಖಾತೆ ವಿವರಗಳು
• ವೃತ್ತಿ ದೃಡೀಕರಣ
• ವಿಳಾಸ ದಾಖಲೆ
• ಮೊಬೈಲ್ ಸಂಖ್ಯೆ
• ಪಾಸ್ ಪೋರ್ಟ್ ಅಳತೆಯ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ? : ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ: https://pmvishwakarma̤.gov̤.in
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


