ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೆ ಅರ್ಧಕ್ಕೆ ನಿಲ್ಲಿಸಬೇಕಾಗುವ ಪರಿಸ್ಥಿತಿಗಳು ಎದುರಾಗುತ್ತದೆ. ಇಂತಹ ಮಕ್ಕಳಿಗಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಅಧಿಕಾರಣ ಇಲಾಖೆಯ ಮುಖ್ಯ ಕಾರ್ಯಕ್ರಮಗಳ ಅಡಿಯಲ್ಲಿ ಪಿಎಂ ಯಶಸ್ವಿನಿ ವಿದ್ಯಾರ್ಥಿವೇತನ ಯೋಜನೆಯನ್ನು 2021 ರಲ್ಲಿ ಪ್ರಾರಂಭಿಸಲಾಗಿದ್ದು.
ಈ ಯೋಜನೆಯು 9ನೇ ತರಗತಿಯಿಂದ ಡಿಗ್ರಿವರೆಗಿನ ಶಾಲಾ-ಕಾಲೇಜು ಶಿಕ್ಷಣಕ್ಕೆ ಸಹಾಯ ನೀಡಲಾಗುತ್ತಿದ್ದು, ಪ್ರತಿ ವರ್ಷ ರೂ3,000ಕೋಟಿ ಬಜೆಟ್ ನೊಂದಿಗೆ 1ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಲುಪುತ್ತದೆ. ಕಳೆದ 4 ವರ್ಷಗಳಲ್ಲಿ ಈ ನೆರವು 2ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಲುಪಿದ್ದು, ಅವರಲ್ಲಿ 70% ಗ್ರಾಮೀಣ ಪ್ರದೇಶದವರು ಸೇರಿದ್ದಾರೆ. ಈ ಯೋಜನೆಯು ಕೇವಲ ಹಣಕಾಸು ಸಹಾಯಕ್ಕೆ ಮಾತ್ರವಾಗಿಲ್ಲ ಬದಲಾಗಿ ಡಿಜಿಟಲ್ ಶಿಕ್ಷಣ ಮತ್ತು ಹಾಸ್ಟೆಲ್ ವೆಚ್ಚಕ್ಕೂ ಬೆಂಬಲ ನೀಡಲಾಗುತ್ತದೆ.
ಈ ಹಿಂದೆ ಈ ಸೌಲಭ್ಯವನ್ನು ಪಡೆಯಲು ಪರೀಕ್ಷೆಗಳನ್ನು ಬರೆಯಬೇಕಿತ್ತು. ಆದರೆ ಈ ವರ್ಷದಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಯಾರಿಗೆಲ್ಲಾ ಈ ಸೌಲಭ್ಯ ಪಡೆಯಬಹುದು:
- ವರ್ಗ: OB̧C EBC ಅಥವಾ DNT ಅಂದರೆ ಅಲೆಮಾರಿ ಸಮುದಾಯದವರಿಗೆ
- ಆದಾಯ: ತಂದೆ-ತಾಯಿ ವಾರ್ಷಿಕ ಆದಾಯ ರೂ 2.5 ಲಕ್ಷದ ಒಳಗಿರಬೇಕು.
- ತರಗತಿ: ಪ್ರಸ್ತುತ 9 ನೇ ಅಥವಾ11ನೇ ತರಗತಿಯಲ್ಲಿ ಓದುತ್ತಿರಬೇಕು. ಮಾತ್ರವಲ್ಲ, ಸರ್ಕಾರಿ ಶಾಲೆಯಲ್ಲಿ ಓದಬೇಕು.
- ಅರ್ಜಿ ಸಲ್ಲಿಸುವ ವಿಧಾನ: ವೆಬ್ ಸೈಟ್ ನಲ್ಲಿ Apply for schoolrship ನಲ್ಲಿ PM YASASVI ಆಯ್ಕೆ ಮಾಡಿ ನಿಮ್ಮ ಜಾತಿ ಪ್ರಮಾಣ ಪತ್ರ, ಆದಾಯ ಪತ್ರ, ಮಾರ್ಕ್ಸ್ ಕಾರ್ಡ್ ಆಪ್ಲೋಡ್ ಮಾಡಿ.

