#PMFBY | ಫಾಲೋಅಪ್‌ | ಅಡಿಕೆ ಕೃಷಿಕರಿಗೆ ಫಸಲು ವಿಮಾ ಯೋಜನೆ | ಸ್ವಲ್ಪ ಕಾಯಿರಿ ಅಡಿಕೆಗೂ ಬರುತ್ತದೆ ವಿಮೆ.. |

June 24, 2023
10:44 PM

ಹವಾಮಾನ ವೈಪರೀತ್ಯದ ಕಾರಣದಿಂದ ನಾಶವಾಗುವ ಕೃಷಿಗೆ ಪರಿಹಾರವಾಗಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯ ಬಗ್ಗೆ ಈ ಬಾರಿ ಕೃಷಿಕರಲ್ಲಿ ಸಾಕಷ್ಟು ಗೊಂದಲಗಳು ಇದೆ. ಅದರಲ್ಲೂ ಅಡಿಕೆ ಬೆಳೆಗಾರರಿಗೆ ತಮ್ಮ ಬೆಳೆಗೆ ವಿಮೆ ಈ ಬಾರಿ ಇಲ್ಲ ಎನ್ನುವ ಗೊಂದಲ ಇತ್ತು. ಈಗಲೂ ಗೊಂದಲ ಮುಗಿದಿಲ್ಲ. ಆದರೆ ಅಡಿಕೆಗೂ ವಿಮೆ ಬರುತ್ತದೆ ಎನ್ನುವುದು ಅಧಿಕಾರಿಗಳ ಭರವಸೆ.

Advertisement
Advertisement

ಅಡಿಕೆಗೆ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ಜಾರಿಯಲ್ಲಿದೆ. ಈ ಬಾರಿ ಜೂನ್‌ ಅಂತ್ಯವಾದರೂ ಈ ಯೋಜನೆ ಜಾರಿಯಾಗಿಲ್ಲ. ಇದೀಗ ಅಡಿಕೆ ಹೊರತುಪಡಿಸಿ ಇತರ 36 ಬೆಳೆಗಳಿಗೆ ಫಸಲ್‌ ಭೀಮಾ ಯೋಜನೆಗೆ ಚಾಲನೆ ದೊರೆತಿದೆ. ಈ ಬಾರಿ ಅಡಿಕೆಯನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆತಂಕ ಕೃಷಿಕರಲ್ಲಿತ್ತು. ಹವಾಮಾನ ವೈಪರೀತ್ಯದ ಕಾರಣದಿಂದ ಕೃಷಿಗೆ ಹಾನಿಯಾದರೆ ಸರ್ಕಾರದ ಮುಂದೆ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಬೇಕಾಗಿಲ್ಲ, ಬೆಳೆವಿಮೆಯ ಹಣ ನಿಶ್ಚಿತವಾಗಿಯೂ ಬರುವುದರಿಂದ ಕೃಷಿಕರು ಬೆಳೆ ನಷ್ಟವನ್ನು ಸುಧಾರಿಸಿಕೊಳ್ಳುತ್ತಿದ್ದರು. ಹೀಗಾಗಿ ಬೆಳೆ ವಿಮೆಯ ಕಡೆಗೆ ಈಚೆಗೆ ಹೆಚ್ಚಿನ ಕೃಷಿಕರು ಆಸಕ್ತರಾಗಿದ್ದರು. ಇದೀಗ ಸರ್ಕಾರಕ್ಕೆ ಇಲ್ಲಿ ಆಗಿರುವ ವಿಳಂಬ ಹಾಗೂ ಲೋಪದ ಬಗ್ಗೆ ಮನವರಿಕೆ ಮಾಡುವ ಕೆಲಸಗಳು ನಡೆಯುತ್ತಿದೆ. ಈ ನಡುವೆಯೇ ವಿಮಾ ಕಂಪನಿಯ ಗುರುತು ಮಾಡಲಾಗಿದ್ದು, ಮುಂದಿನ ತಿಂಗಳ ಒಳಗೆ ಪ್ರೀಮಿಯಂ ಕಟ್ಟಲು ಅವಕಾಶ ಇರುತ್ತದೆ ಎನ್ನುವುದು ಅಧಿಕಾರಿಗಳ ವಿಶ್ವಾಸ.

ಕಳೆದ ಎರಡು ವರ್ಷಗಳಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಈ ವಿಮೆ ಉಪಯುಕ್ತವಾಗಿತ್ತು. ಒಂದು ಹೆಕ್ಟೇರ್ ಅಡಿಕೆ ಬೆಳೆ ವಿಮೆಗೆ ರೈತರು ರೂ.6400,ರಾಜ್ಯ ಸರ್ಕಾರ 75% ಮತ್ತು ಕೇಂದ್ರ ಸರ್ಕಾರ 25% ಒಟ್ಟು ಮೊತ್ತ ರೂ 65,202 ಪಾವತಿಸುತ್ತದೆ.ರೈತರ ಆಪತ್ತಿಗೆ ಸರಕಾರ ತಂದ ಬೆಳೆ ವಿಮಾ ಯೋಜನೆ ನೆರವಾಗಿತ್ತು.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಲಿಕೆದ ಬೊಳ್ಳಿ ಅರವಿಂದ್ ಬೋಳಾರ್ ಇವರಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಕಡೆಯಿಂದ ಸನ್ಮಾನ
May 23, 2025
3:50 PM
by: ದ ರೂರಲ್ ಮಿರರ್.ಕಾಂ
ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ
May 23, 2025
7:30 AM
by: ದ ರೂರಲ್ ಮಿರರ್.ಕಾಂ
ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group