ಮಾಗುವುದು ಸಾಧನೆ ಬೀಗುವುದು ಸುಮ್ಮನೆ

September 16, 2025
7:14 AM
ಜಯಪ್ರಕಾಶ್ ಎ ನಾಕೂರು ಅವರ ಕವನ | ಕವನದ ಶೀರ್ಷಿಕೆ - ಮಾಗುವುದು ಸಾಧನೆ- ಬೀಗುವುದು ಸುಮ್ಮನೆ

ಬೀಗುವಿಕೆಗಿಂತ ಮಾಗುವಿಕೆಯದು ಉತ್ತಮ
ಮಾಗಿಯೂ ಬೀಗದಿರುವಿಕೆಯು ಅತ್ಯುತ್ತಮ
ಮಾಗದೆ ಮಾಗಿರುವಂತೆ ಬೀಗುವುದು ವ್ಯಸನ
ಮಾಗದೆ ಬೀಗುವುದಕೆ ವೇಷವೇ ಸಾಧನ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||

ಮಾಗಲೋಸುಗ ಕಳಚಬೇಕು ಮುಖವಾಡವನು
ಮಾಗಲೋಸುಗ ತೆರೆಯಬೇಕಂತಃಚಕ್ಷುವನು
ಮಾಗಲೋಸುಗ ಸವೆಸಬೇಕು ಕಾಯವನು
ಮಾಗಲೋಸುಗ ಬಳಸಬೇಕಂತಃಕರಣವನು
ಪಂಚಜ್ಞಾನೇಂದ್ರಿಯ ಪಂಚಕರ್ಮೇಂದ್ರಿಯಂ
ಗಳನು ಸರಿಯಾದ ಕ್ರಮದಿಂದ ಬಳಸುತಲಿ
ಧರ್ಮಮಾರ್ಗವೆ ಸಾಧುಮಾರ್ಗವೆಂದರಿತು ಸನ್ಮಾರ್ಗದಲಿ ಮನುಜ ಸಾಗುವುದು ಒಳಿತು ||

ದೇಹ ತೊಳೆಯಲು ಬೇಕು ಸ್ನಾನ
ಮನವ ತೊಳೆಯಲು ಬೇಕು ಧ್ಯಾನ
ಬುದ್ಧಿ ಬೆಳೆಯಲು ಬೇಕು ಚಿಂತನ
ಬಾಹ್ಯ ಅಭ್ಯಂತರದಿ ಪಾಲಿಸಲು ಶೌಚವನು
ತೊಲಗುವುದು ಬೇಡದಾ ಕಳೆಯು
ಹುಲುಸಾಗಿ ಬೆಳೆಯುವುದು ಬೆಳೆಯು ||

ಫಲತುಂಬಿದಾ ವೃಕ್ಷ ಬಾಗುವುದು ದಿಟವು
ಬಾಗಿದಾ ವೃಕ್ಷವದು ಮಾಗಿದ ಸಂಕೇತವು ಬಾಗಬೇಕಾದಲ್ಲಿ ಬಾಗುವಾ ಕಾಯವದು
ಬೀಗದೆಂದೆಂದೂ ಮಾಗುವುದು ದಿಟವು
ಬಾಗಬೇಕಾದದ್ದು ಕಾಯ
ಮಾಗಬೇಕಾದದ್ದು ನ್ಯಾಯ ||

ಬೀಗುವವ ಬಾಗಲಾರ
ಬಾಗದವ ಮಾಗಲಾರ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||‌

✍️ ಜಯಪ್ರಕಾಶ್ ಎ ನಾಕೂರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?
October 6, 2026
1:39 PM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ
October 6, 2026
7:09 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್
October 6, 2026
7:03 AM
by: ದ ರೂರಲ್ ಮಿರರ್.ಕಾಂ
ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ
October 6, 2026
6:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror