ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಹೇಮಾವತಿ ನದಿ ನೀರಿಗೆ ವಿಷದ ಅಂಶ ಸೇರ್ಪಡೆಯಾಗಿದ್ದು ನೂರಾರು ಮೀನುಗಳು ಸಾವನಪ್ಪಿವೆ. ನದಿಯ ದಡದಲ್ಲಿ ಸುಮಾರು 2 ಕಿಲೋ ಮೀಟರ್ ದೂರದವರೆಗೂ ಸಾವನಪ್ಪಿರುವ ಮೀನುಗಳು ತೇಲುತಿದ್ದು ಯಾರೋ ಕಿಡಿಗೇಡಿಗಳು ವಿಷದ ರಾಸಾಯನಿಕ ನದಿಗೆ ಹಾಕಿ ಮೀನುಗಳನ್ನು ಸಾವನ್ನಪ್ಪಿರುವ ಸಾಧ್ಯತೆ ಇರಬಹುದು ಎಂದು ಸ್ಥಳಿಯರು ತಿಳಿಸಿದ್ದಾರೆ. ಅಲ್ಲದೇ ನದಿ ನೀರು ಹರಿದು ಹಾಸನ ಜಿಲ್ಲೆ ಗೊರೂರು ಜಲಾಶಯ ಸೇರುತ್ತದೆ ನಡುವೆ ಸಾಕಷ್ಟು ಜನರು ನೀರನ್ನು ಬಳಸುತ್ತಾರೆ. ಜಲಚರಗಳಿಗೂ ತೊಂದರೆಯಾಗುತ್ತದೆ ಸಂಬಂದಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಣಕಲ್ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೀನು ಹಿಡಿಯಲು ಅಡಿಕೆಗೆ ಬಳಸಲು ಮೈಲುತುತ್ತವನ್ನು ನದಿಯಲ್ಲಿ ಮಿಶ್ರಣ ಮಾಡಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಮಲೆನಾಡಿಗರ ಜೀವನದಿಯಾಗಿರುವ ಹೇಮಾವತಿ ನದಿಯ ನೀರು ಕಲುಷಿತಗೊಳ್ಳುತ್ತಿದೆ. ಕುಡಿಯಲು ಕೂಡ ಇದೆ ನೀರನ್ನು ಉಪಯೋಗಿಸುವುದರಿಂದ ಎಚ್ಚರಿಕೆ ಅಗತ್ಯವಿದೆ.
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…