ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಕಾಲೇಜಿನ ವಿದ್ಯಾರ್ಥಿಯ ವಿರುದ್ಧ ವಿದ್ಯಾರ್ಥಿನಿಯ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದು, ಇದರಿಂದಾಗಿ ಪೊಲೀಸರು ವಿದ್ಯಾರ್ಥಿಗೆ ಎಚ್ಚರಿಕೆ ನೀಡಿ ಕಳುಹಿಸಿದ ಘಟನೆಯೊಂದು ಪುತ್ತೂರು ಮುಕ್ವೆ ಸಮೀಪ ನಡೆದಿದೆ.
ಗೆಜ್ಜೆಗಿರಿ ಸಮೀಪದ ನಿವಾಸಿ ಕಾಲೇಜು ವಿದ್ಯಾರ್ಥಿ ತನ್ನ ಸಹಪಾಠಿ ಸ್ನೇಹಿತೆಯನ್ನು ಭೇಟಿಯಾಗಲೆಂದು ಮುಕ್ವೆಗೆ ಬಂದಿದ್ದನು. ಆತ ಬರುವ ಬಗ್ಗೆ ವಿದ್ಯಾರ್ಥಿನಿಗೆ ತಿಳಿದಿತ್ತು ಎಂದು ಹೇಳಲಾಗುತ್ತಿದೆಯಾದರೂ, ಆ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಆತನ ವರ್ತನೆಯನ್ನು ಕಂಡ ವಿದ್ಯಾರ್ಥಿನಿಯ ಮನೆಯವರಿಗೆ ಗೊಂದಲ ಉಂಟಾಗಿತ್ತು.ಹಲವು ಸಂಶಯಗಳಿದ್ದ ಕಾರಣ ಮನೆಯವರು ವಿದ್ಯಾರ್ಥಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel