ಗುಜರಾತ್ ಎಲ್ಲೆಡೆ ರಾಮನ ಭಕ್ತ ಹನುಮನ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮೊರ್ಬಿಯಲ್ಲಿ ನಿರ್ಮಿಸಲಾಗಿರುವ 108 ಅಡಿ ಹನುಮಾನ್ ಪ್ರತಿಮೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಿದರು.
ಹನುಮಂಜಿ ಚಾರ್ ಧಾಮ್’ ಯೋಜನೆಯ ಭಾಗವಾಗಿ ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಪ್ರತಿಮೆಗಳಲ್ಲಿ ಈ ಪ್ರತಿಮೆ ಎರಡನೆಯದು ಎಂದು ಪ್ರಧಾನಿ ಕಾರ್ಯಾಲಯ ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
Today, we mark the special occasion of Hanuman Jayanti. In Morbi, at 11 AM, a 108 feet statue of Hanuman ji will be inaugurated. I am honoured to be getting the opportunity to be a part of this programme via video conferencing. https://t.co/qjvLIHWWiO pic.twitter.com/kbHcIxd90Z
Advertisement— Narendra Modi (@narendramodi) April 16, 2022
ಸರಣಿಯ ಮೊದಲ ಪ್ರತಿಮೆಯನ್ನು ಉತ್ತರದಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 2010 ರಲ್ಲಿ ಸ್ಥಾಪಿಸಲಾಯಿತು. ಆದರೆ, ಮೂರನೇ ಪ್ರತಿಮೆಯ ಕೆಲಸವನ್ನು ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರಾರಂಭಿಸಲಾಗಿದೆ ಎಂದು ಪಿಎಂಒ ಮಾಹಿತಿ ನೀಡಿದೆ.