ಕಾಂಗ್ರೆಸ್‌ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳಿಗೆ ಖರ್ಚು ಎಷ್ಟು ಗೊತ್ತ

May 27, 2023
1:56 PM

ಐದು ಗ್ಯಾರಂಟಿಗಳಲ್ಲೊಂದಾದ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹಜ್ಯೋತಿ’ ಯೋಜನೆಗೆ ಮಾಸಿಕ 1955 ಕೋಟಿ ರು.ನಂತೆ ವಾರ್ಷಿಕ ಅಂದಾಜು 23,400 ಕೋಟಿ ರು. ಅನುದಾನ ಅಗತ್ಯವಿದೆ ಎಂಬ ಮಾಹಿತಿಯನ್ನು ವರದಿಯಲ್ಲಿ ತಿಳಿಸಿದೆ. ಇದರೊಂದಿಗೆ ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಯೋಜನೆಯೇ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಐದೂ ಗ್ಯಾರಂಟಿಗಳ ಜಾರಿಗೆ 50 ಸಾವಿರ ರು. ಕೋಟಿ ರು. ಅಂದಾಜಿಸಿರುವ ಸರ್ಕಾರಕ್ಕೆ ಇದರ ಅರ್ಧದಷ್ಟುಅನುದಾನ ಗೃಹಜ್ಯೋತಿ ಒಂದೇ ಯೋಜನೆಗೆ ಬೇಕಾಗುತ್ತದೆ.

Advertisement

ಮುಖ್ಯಮಂತ್ರಿಗಳ ಸೂಚನೆಯಂತೆ ಇಂಧನ ಇಲಾಖೆಯು ಬೆಸ್ಕಾಂ, ಚೆಸ್ಕಾಂ ಸೇರಿದಂತೆ ತನ್ನೆಲ್ಲಾ ವಿದ್ಯುತ್‌ ಸರಬರಾಜು ನಿಗಮಗಳಿಂದ ಮಾಸಿಕ 200 ಯುನಿಟ್‌ನೊಳಗೆ ವಿದ್ಯುತ್‌ ಬಳಕೆದಾರರ ಮಾಹಿತಿ ಸಂಗ್ರಹಿಸಿದೆ. ಆ ಪ್ರಕಾರ, ರಾಜ್ಯದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 86 ಲಕ್ಷ, ಚೆಸ್ಕಾಂನಡಿ 20 ಲಕ್ಷ, ಮೆಸ್ಕಾಂ ವ್ಯಾಪ್ತಿಯಲ್ಲಿ 15 ಲಕ್ಷ, ಹೆಸ್ಕಾಂ ವ್ಯಾಪ್ತಿಯಲ್ಲಿ 28 ಲಕ್ಷ ಹಾಗೂ ಜೆಸ್ಕಾ ಅಡಿ 19 ಲಕ್ಷ ಸಂಪರ್ಕಗಳು ಸೇರಿ ಒಟ್ಟಾರೆ ಎಲ್ಲಾ ನಿಗಮಗಳ ಅಡಿ 1.70 ಕೋಟಿ ವಿದ್ಯುತ್‌ ಸಂಪರ್ಕಗಳಿದ್ದು, ಈ ಪೈಕಿ 1.20 ಕೋಟಿಯಷ್ಟು ಬಳಕೆದಾರರು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆದಾರರಾಗಿದ್ದಾರೆ.

ಇವರೆಲ್ಲರಿಗೂ ಗೃಹಜ್ಯೋತಿ ಯೋಜನೆ ಜಾರಿಗೆ ಮಾಸಿಕ 1955 ಕೋಟಿ ರು.ನಂತೆ 23,400 ಕೋಟಿ ರು.ಗಳಷ್ಟುಅನುದಾನ ಬೇಕೆಂದು ತಿಳಿಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಗೃಹ ಬಳಕೆ ವಿದ್ಯುತ್‌ಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೇರೆ ಬೇರೆ ರೀತಿಯ ದರ ನಿಗದಿಪಡಿಸಲಾಗಿದೆ. ಆ ಪ್ರಕಾರ ಗೃಹಜ್ಯೋತಿ ಯೋಜನೆ ಜಾರಿಯಿಂದ ಮಾಸಿಕ ಗರಿಷ್ಠ 200 ಯುನಿಟ್‌ವರೆಗೆ ವಿದ್ಯುತ್‌ ಬಳಸುವ ಫಲಾನುಭವಿಗೆ ಗ್ರಾಮೀಣ ಭಾಗದಲ್ಲಿ 1000 ರು., ನಗರ ಪ್ರದೇಶದಲ್ಲಿ 1200 ರು. ನಷ್ಟುಉಳಿತಾಯವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಕೃಷಿ ಪಂಪ್‌ಸೆಟ್‌ಗೆ 7 ತಾಸು ವಿದ್ಯುತ್ ಪೂರೈಕೆಗೆ ರಾಜ್ಯ ಸರ್ಕಾರ ಬದ್ಧ | ಇಂಧನ ಸಚಿವ ಕೆ.ಜೆ. ಜಾರ್ಜ್
February 19, 2025
7:22 AM
by: The Rural Mirror ಸುದ್ದಿಜಾಲ
ರೈತರ ಬೇಡಿಕೆ ಈಡೇರಿಕೆ ಸರ್ಕಾರದ ಮೊದಲ ಆದ್ಯತೆ- ಮುಖ್ಯಮಂತ್ರಿ ಸಿದ್ದರಾಮಯ್ಯ
February 17, 2025
9:27 PM
by: The Rural Mirror ಸುದ್ದಿಜಾಲ
ರಾಜ್ಯದ ನೀರಾವರಿ ವಿಷಯ | ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
February 16, 2025
3:07 PM
by: The Rural Mirror ಸುದ್ದಿಜಾಲ
ದೊಡ್ಡ ಪ್ರಮಾಣದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಆದ್ಯತೆ | ಸಚಿವ ಅಶ್ವಿನಿ ವೈಷ್ಣವ್
February 16, 2025
2:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group