ವಾರದ ಅತಿಥಿ | ರಾಜಕಾರಣದಲ್ಲಿ “ನೈತಿಕ ಮೌಲ್ಯ” ತುಂಬಬೇಕು | ಸಮಾಜದಲ್ಲಿ”ಅನೇಕಾಂತವಾದ” ಬೆಳೆಯಬೇಕು |

April 28, 2024
1:07 PM
ರಾಜಕಾರಣದಲ್ಲಿ ನೈತಿಕ ಮೌಲ್ಯ ತುಂಬಬೇಕಾದ್ದು ಏಕೆ ? ಸಮಾಜದಲ್ಲಿ ಸಾಮರಸ್ಯ ಮೂಡಲು ಏನು ಮಾಡಬೇಕು ? ಈ ಅಂಶಗಳ ಬಗ್ಗೆ ನಮ್ಮ ವಾರದ ಅತಿಥಿ ಶ್ರೇಯಾಂಸ ಕುಮಾರ್‌ ಅವರು ಮಾತನಾಡಿದ್ದಾರೆ.

ಈಚೆಗೆ ರಾಜಕಾರಣದ ಬಗ್ಗೆ ತಾತ್ಸಾರ ಭಾವನೆ ಹೆಚ್ಚಾಗುತ್ತಿದೆ. ಸಾಮರಸ್ಯ ಹದಗೆಡುತ್ತಿದೆ. ಸುಧಾರಣೆ ಕಂಡಿದ್ದ ಸಮಾಜ ಮತ್ತೆ ಹಳಿ ತಪ್ಪುತ್ತಿದೆಯೇ ಎಂದು ಅನೇಕರು ಆತಂಕ ಪಡುತ್ತಾರೆ. ಆದರೆ ಸುಧಾರಣೆ ಕಾಣಬೇಕಾದ್ದು ಎಲ್ಲಿ..? ಹೇಗೆ..? ಈ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಸುಳ್ಯ ತಾಲೂಕಿನ ಪಂಜದ ಶ್ರೇಯಾಂಸ್ ಕುಮಾರ್‌ ಅವರು ರಾಜಕಾರಣ ಮತ್ತು ಸಮಾಜದ ಬಗ್ಗೆ ಮಾತನಾಡಿದ್ದಾರೆ… ದ ರೂರಲ್‌ ಮಿರರ್.ಕಾಂ ವಾರದ ವ್ಯಕ್ತಿಯಾಗಿ ಶ್ರೇಯಾಂಸ ಕುಮಾರ್‌ ಮಾತನಾಡಿದ್ದು ಹೀಗೆ…

Advertisement
Advertisement
Advertisement
Advertisement
ಈಚೆಗಿನ ದಿನಗಳಲ್ಲಿ ರಾಜಕಾರಣಿಗಳ ಬಗ್ಗೆ ನೋಡಬೇಕು. ಸುಳ್ಯ-ಪುತ್ತೂರು-ಬೆಳ್ತಂಗಡಿಯ ಅಂದಿನ  ಶಾಸಕರಾಗಿದ್ದ ವೆಂಕಟ್ರಮಣ ಗೌಡ ಅವರು ನಮ್ಮ ಮನೆಯ ಪಕ್ಕ ಇದ್ದರು. ಹೀಗಾಗಿ ಅವರನ್ನು ಹೆಚ್ಚಾಗಿ ತಿಳಿದಿದ್ದೆ. ಅವರು ಯಾವುದೇ ಆಡಂಬರದಿಂದ ಇರಲಿಲ್ಲ. ಸಾಮಾಜಿಕ ಕಾಳಜಿಯಿಂದಲೇ ಇದ್ದರು. ಪುತ್ತೂರು-ಸುಳ್ಯ-ಸುಬ್ರಹ್ಮಣ್ಯ ರಸ್ತೆ ಅಭಿವೃದ್ದಿ ಮಾಡಿದ್ದು 1962. ಅವರು ಪುತ್ತೂರಿನಲ್ಲಿ ಮನೆ ಮಾಡುವ ವೇಳೆ ಪುತ್ತೂರು-ಸುಳ್ಯ-ಸುಬ್ರಹ್ಮಣ್ಯ ರಸ್ತೆಯಲ್ಲಿ ಒಂದೇ ಒಂದು ಸೇತುವೆ ಇರಲಿಲ್ಲ, ರಸ್ತೆಗೆ ಜಲ್ಲಿಯೂ ಇರಲಿಲ್ಲ. ಅವರು ಬಂದ ನಂತರ ಎಲ್ಲಾ ಸೇತುವೆ, ರಸ್ತೆಗೆ ಡಾಬರು ಮಾಡಿದ್ದು ವೆಂಕಟ್ರಮಣ ಗೌಡರು. ಅವರಂತಹ ನಿಷ್ಟಾವಂತ ರಾಜಕಾರಣಿ ಇಂದಿನವರೆಗೂ ಇಲ್ಲ. ನನಗೆ ಗೊತ್ತಿದ್ದ ಹಾಗೆ ಅವರ ಖಾತೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಹಣ ಅಂದು ಇರಲಿಲ್ಲ, ಬಹಳ ಸರಳವಾಗಿ ಅವರು ಬದುಕಿದ್ದರು. 
ಒಮ್ಮೆ ಅವರ ಮನೆಗೆ ನಿಜಲಿಂಗಪ್ಪ ಅವರು ಬಂದಿದ್ದರು. ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಬಹಳ ಸರಳವಾಗಿ ಸ್ವಾಗತಿಸಿ ಎಲ್ಲರಂತೆಯೇ ಅವರನ್ನೂ ಕಂಡಿದ್ದರು. ಒಂದೇ ಒಂದು ಸಲವೂ ಪೊಲೀಸ್‌ ಠಾಣೆಗೆ ಯಾವುದೋ ಕೇಸಿಗಾಗಿ ದೂರವಾಣಿ ಕರೆ ಮಾಡಿದವರಲ್ಲ. ಅವರ ಕಾರಲ್ಲಿ ಒಂದು ಅಡಿಯಷ್ಟು ಕಡತಗಳು ಯಾವಾಗಲೂ ಇತ್ತು. ಯಾವಾಗ ಎಲ್ಲಿ ಸೇತುವೆ ಆಗುತ್ತದೆ, ಸೇತುವೆ ಆಗಬೇಕು ಎಂದು ಅವರ ಬಳಿ ಮಾಹಿತಿ ಇರುತ್ತಿತ್ತು, ಎಲ್ಲಿ ಸೇತುವೆ ಆಗಬೇಕು ಹೇಗೆ ಮಾಡಬೇಕು ಎಂಬುದರ ಬಗ್ಗೆ ಕಡತಗಳನ್ನು ಇರಿಸಿಕೊಂಡು ಕೆಲಸ ಮಾಡುತ್ತಿದ್ದರು. ಅಂದು ರಚನೆ ಮಾಡಿರುವ ಸೇತುವೆ, ರಸ್ತೆಗಳು ಬಹುಕಾಲ ಬಾಳ್ವಿಕೆ ಬಂದಿದ್ದವು. ಒಂದೇ ಒಂದರಲ್ಲಿ ಗುದ್ದಲಿ ಪೂಜೆ, ಉದ್ಘಾಟಿಸಿದವರ ಹೆಸರು ಇಲ್ಲ. ಅವರೆಲ್ಲಾ ಇದು ಸರ್ಕಾರದ ಕೆಲಸ, ನಮ್ಮ ಜವಾಬ್ದಾರಿ ಎಂದು ಕೆಲಸ ಮಾಡುತ್ತಿದ್ದರು. ಅದು ನನ್ನ ಕರ್ತವ್ಯ ಎಂದು ಕೆಲಸ ಮಾಡುತ್ತಿದ್ದರು. ಹೆಸರೇ ಇಲ್ಲದೆ ಸಾರ್ವಜನಿಕ ಕೆಲಸ ಮಾಡಿದ ಅಂದಿನ ರಾಜಕಾರಣಿಗಳು ಹಲವಾರು ಮಂದಿ ಇದ್ದರು. 
ಸಾರ್ವಜನಿಕ ಜೀವನದಲ್ಲಿ ಜಾತಿ ಅಗತ್ಯ ಇಲ್ಲ. ಈಗ ಜಾತಿ, ಧರ್ಮ ಓಲೈಕೆ ಅದುವೇ ರಾಜಕಾರಣದ ಸಮಸ್ಯೆಯಾಗಿದೆ. ಸಮಾಜದ ದೃಷ್ಟಿಯಿಂದ ಇಂದು ರಾಜಕಾರಣ ಅಗತ್ಯ ಇಲ್ಲ. ಭಾರತದಲ್ಲಿ 5000 ಜಾತಿ ಉಂಟು. ಅದರಲ್ಲಿ ಉಪಜಾತಿ ಇದೆ, ಜಾತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಾತಿ ಹೆಚ್ಚಾಗುವುದು ಒಳ್ಳೆಯದಲ್ಲ, ಹೀಗಾದರೆ ಸೌಹಾರ್ದತೆ ಹೇಗೆ ಸಾಧ್ಯ. ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯಬೇಕು.
ಆದರೆ, ಈಗ ಮಕ್ಕಳಲ್ಲಿಯೇ ವಿಷ ಬೀಜ ಬಿತ್ತಿದರೆ ಭವಿಷ್ಯ ಹೇಗೆ? ಮಕ್ಕಳನ್ನು ಸರಿಯಾದ ದಾರಿಯಲ್ಲಿ ಅಂದರೆ ಜಾತಿ-ಧರ್ಮದ ವಿಷ ಬೀಜ ಬಿತ್ತದೆಯೇ ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಯೋಚನೆ ಅಗತ್ಯ ಇದೆ. ಧಾರ್ಮಿಕ ಆಚರಣೆ ಬೇರೆ, ವಿಷ ಬೀಜ ಬೇರೆ. ಧಾರ್ಮಿಕ ಆಚರಣೆ ಮಾಡಬೇಕಾದ್ದು ಸರಿ, ಅವರವರ ಆಚರಣೆಗಳನ್ನು ಅವರವರು ಮಾಡಬೇಕು. ಆದರೆ ನನ್ನ ಧಾರ್ಮಿಕ ಆಚರಣೆಯೇ ಸರಿ, ಅವನದ್ದು ತಪ್ಪು ಎನ್ನುವುದು ವಿಷ ಬೀಜ ಅಷ್ಟೇ.
ಅದಕ್ಕಾಗಿ ಎರಡು ವಾದಗಳು ಇದೆ.ಏಕಂತವಾದ ಹಾಗೂ ಅನೇಕಾಂತವಾದ. ಏಕಾಂತವಾದವು ನಾನು ನಂಬುವ ದೇವರು ಸತ್ಯ-ಉಳಿದ್ದದು ಅಲ್ಲ ಎನ್ನುವುದು. ಇದು ಸರಿಯಲ್ಲ. 
ಅನೇಕಾಂತವಾದವು ನನ್ನ ದೇವರು ಸರಿ. ಅವರ ದೇವರೂ ಸರಿ ಎಂದು ಒಪ್ಪುವುದು. ಇದು ಸರಿಯಾದ ಸಂಗತಿ. ಈ ವಾದವನ್ನು ಈಚೆಗೆ ನಡೆದ ಅಧ್ಯಯನವು ಕೂಡಾ ಇದನ್ನು ಒಪ್ಪಿದೆ. ಇದನ್ನು ಒಪ್ಪಿಕೊಂಡರೆ ಜಗತ್ತಿನಲ್ಲಿ ಕೋಮು ಸೌಹಾರ್ದತೆ ಬರಲು ಸಾಧ್ಯವಿದೆ ಎಂದು ಅಧ್ಗಯನ ಹೇಳಿದೆ.
ಇಂದು ಸಣ್ಣ ಸಮಾಜ ವಿದ್ಯಾವಂತ ಸಮಾಜ ಎನ್ನಲು ಸಾಧ್ಯವಿಲ್ಲ. ವಿದ್ಯಾವಂತ ಸಮಾಜವು ಸಮಾಜಕ್ಕೆ ತೆರದುಕೊಂಡಿರಬೇಕು, ಎಲ್ಲರೊಂದಿಗೆ ಒಂದಾಗಿರಬೇಕು. ಇಸ್ರೇಲ್‌ ಗಮನಿಸಿ ಅದು ವಿದ್ಯಾವಂತ ದೇಶವಾದರೂ ಗುಂಪುಗಾರಿಕೆ ಇದೆ. ಆ ರೀತಿ ಆಗದೇ ಇರಬೇಕಾದರೆ ಅನೇಕಾಂತವಾದ ಬರಬೇಕು, ಎಲ್ಲಾ ದೇವರನ್ನೂ ಒಪ್ಪುವುದು ಹಾಗೂ ಅವರವರು ಅವರವರ ದೇವರನ್ನು ಪೂಜಿಸುವುದರಿಂದ  ಸಮಾಜಕ್ಕೆ ಮಾರಕ ಇಲ್ಲ. ಸಮಾಜ ಗಟ್ಟಿಯಾಗುತ್ತದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror