ಕೆಎಸ್‌ಆರ್‌ಟಿಸಿ ಬಸ್ಸು ಇದು. ಹೊಗೆಯುಗುಳುವ ಪರಿ ನೋಡಿದರೆ ಅಬ್ಬಾ ಎನಿಸುತ್ತದೆ…!. ವಾಯುಮಾಲಿನ್ಯ ತಪಾಸಣೆಯ ಅವಧಿ ಒಂದು ದಿನ ಮುಗಿದರೂ ದಂಡದ ಮೇಲೆ ದಂಡ ಬೀಳುತ್ತದೆ..!. ಈ ಸರ್ಕಾರಿ ವಾಹನ ವಿಪರೀತ ಹೊಗೆ ಬಿಡುವುದಕ್ಕೆ ಏನು ದಂಡ..? ಅಂದರೆ ಹೊಗೆ ಬಿಡುವುದಕ್ಕೆ ಅಲ್ಲ ದಂಡ, ಹೊಗೆ ಇಲ್ಲದೇ ಇರುವುದಕ್ಕೆ ದಂಡವೇ…?
#KSRTC ಬಸ್ಸು ಮಾಡುವ ಪರಿಸರ ಮಾಲಿನ್ಯ ಗಮನಿಸಿ….! ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ಬಸ್ಸು ಇದು. @KSRTC_Journeys @osd_cmkarnataka
Environmental pollution that KSRTC buses do….!.This bus going from Mangalore to Kukke Subrahmanya. pic.twitter.com/9FUZS4z1Zr
— theruralmirror (@ruralmirror) September 30, 2023
ಮಂಗಳೂರು-ಕುಕ್ಕೆ ಸುಬ್ರಹ್ಮಣ್ಯ ಓಡಾಡುವ ಕೆಎಸ್‌ಆರ್‌ಟಿಸಿ ಬಸ್ಸು ಇದು. ಈ ಬಸ್ಸಿನ ಹಿಂದೆ ಹೋದವರ ಪಾಡು ಅಷ್ಟೇ. ವಿಪರೀತವಾಗಿ ಗೊಗೆ ಉಗುಳುತ್ತದೆ. ಇದಕ್ಕೆ ಏನು ಕಾರಣ ಎಂದು ಇಲಾಖೆಗಳೇ ಹೇಳಬೇಕಷ್ಟೆ. ಹಿಂದೊಮ್ಮೆ ಇದೇ ರೀತಿ ಹೊಗೆ ಉಗುಳುವ ಬಸ್ಸು ಕಂಡುಬಂದಾಗ ಇಲಾಖೆಯ ಗಮನಕ್ಕೆ ಸಾರ್ವಜನಿಕರೊಬ್ಬರು ತಂದಿದ್ದರು. ಆಗ ಬಂದಿರುವ ಉತ್ತರ , ಬಸ್ಸು ನಿಲ್ದಾಣದಿಂದ ಹೊರಡುವಾಗ ಸರಿ ಇತ್ತು, ದಾರಿ ಮಧ್ಯದಲ್ಲಿ ವಾಹನದ ಭಾಗವೊಂದು ತಾಂತ್ರಿಕ ಕಾರಣದಿಂದ ಕೆಟ್ಟು ಹೊಗೆ ಬರಲು ಆರಂಭವಾಗಿದೆ ಎಂದು ಉತ್ತರ ನೀಡಿತ್ತು ಇಲಾಖೆ. ಆದರೆ ದಿನವೂ ಅನೇಕ ಕೆಎಸ್‌ಆರ್‌ಟಿಸಿ ಬಸ್ಸುಗಳು ಇದೇ ಮಾದರಿಯಲ್ಲಿ ಹೊಗೆ ಬಿಡುತ್ತಾ ಸಾಗುತ್ತಿದೆ. ಸರ್ಕಾರ ಉಚಿತ ನೀಡುವಷ್ಟೇ ಗಂಭೀರವಾಗಿ ಮಾಲಿನ್ಯ ನಿಯಂತ್ರಣದ ಕಡೆಗೂ ಗಮನಹರಿಸಬೇಕು ಎನ್ನುವುದು ಕಾಳಜಿ ಅಷ್ಟೇ.