ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ | ಇತ್ತೀಚೆಗೆ ಬಹಳಷ್ಟು ಕಾಡುವ ಕಾಯಿಲೆ | ಆಯುರ್ವೇದದಲ್ಲಿದೆ ಪರಿಹಾರ

August 17, 2023
1:23 PM
ಪಿಸಿಒಎಸ್ ಇರುವ ಮಹಿಳೆಯರಲ್ಲಿ ಪುರುಷ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಅಂಡಾಶಯಗಳಲ್ಲಿ ಅತಿಯಾದ ಈ ಪುರುಷ ಹಾರ್ಮೋನ್ ಗಳ ಕಾರ್ಯದಿಂದಾಗಿ ಕೋಶಗಳನ್ನು ಉತ್ಪತ್ತಿ ಮಾಡುತ್ತವೆ. ಈ ಬಗ್ಗೆ ಆಯುರ್ವೇದ ವೈದ್ಯೆ ಡಾ.ಜ್ಯೋತಿ ಮಾಹಿತಿ ನೀಡಿದ್ದಾರೆ.

ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್‌ PCOS ಒಂದು ವ್ಯಾಪಕವಾದ ಗಂಡು ಮತ್ತು ಹೆಣ್ಣಾಗಿ ಪರಿವರ್ತಿಸುವ ಹಾರ್ಮೋನ್ ನ ಅಸ್ವಸ್ಥತೆ ಯಾಗಿದೆ. ಟೆಸ್ಟೋಸ್ಟಿರೋನ್ ಹಾರ್ಮೋನ್ ಅಧಿಕವಾಗಿರುವಲ್ಲಿ ಅದು ಪುಲ್ಲಿಂಗ ಪಾತ್ರವನ್ನು, ಪ್ರೊಜೆಸ್ಟ್ರಾನ್ ಮತ್ತು ಈಸ್ಟ್ರೋಜನ್ಹಾರ್ಮೋನ್ ಅಧಿಕವಾಗಿರುವಲ್ಲಿ ಅದು ಸ್ತ್ರೀಲಿಂಗ ಪಾತ್ರಗಳನ್ನು ತರುತ್ತದೆ.

Advertisement
Advertisement
Advertisement

ಆದರೆ ಪಿಸಿಒಎಸ್ ಇರುವ ಮಹಿಳೆಯರಲ್ಲಿ ಪುರುಷ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಅಂಡಾಶಯಗಳಲ್ಲಿ ಅತಿಯಾದ ಈ ಪುರುಷ ಹಾರ್ಮೋನ್ ಗಳ ಕಾರ್ಯದಿಂದಾಗಿ ಕೋಶಗಳನ್ನು (ಸಣ್ಣ ಸಣ್ಣ ನೀರು ಗುಳ್ಳೆಗಳು ) ಉತ್ಪತ್ತಿ ಮಾಡುತ್ತವೆ. ಮತ್ತು ನಿಯಮಿತವಾಗಿ ಅಂಡಾಶಯದ ಮೊಟ್ಟೆ ಅಥವಾ ಅಂಡಾಣು ಬಿಡುಗಡೆ ಮಾಡಲು ವಿಫಲವಾಗುತ್ತದೆ. ಅಂತಹ ಹೆಣ್ಣು ಮಕ್ಕಳಲ್ಲಿ ಕೆಲವು ಸಂದರ್ಭಗಳಲ್ಲಿ ದೀರ್ಘಕಾಲದ ಮುಟ್ಟಿನ ಅವಧಿಗಳು ಹಾಗೂ ಋತುಚಕ್ರದಲ್ಲಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ ಈ ಸ್ಥಿತಿಯಲ್ಲಿ ಚಿಕಿತ್ಸೆ ನೀಡದೆ ಹೋದಲ್ಲಿ ಸರಿಯಾದ ಅಂಡಾಣುಗಳ ಬಿಡುಗಡೆ ಆಗದೆ ಋತುಚಕ್ರದ ಗಂಭೀರ ಸಮಸ್ಯೆ ಉಂಟಾಗಿ ಬಂಜೆತನಕ್ಕೆ ಕಾರಣವಾಗುತ್ತದ.

Advertisement

PCOS ಸಾಮಾನ್ಯ ಲಕ್ಷಣಗಳು :

  • ಮಹಿಳೆಯರಲ್ಲಿ ಅನಿಮಿಯಿತ ಹಾಗೂ ನೋವುಭರಿತ ಋತುಚಕ್ರ
  •   ಅನಿರೀಕ್ಷಿತ ತೂಕ ಏರಿಕೆ / obesity
  •  ಹಾರ್ಮೋನ್ ಗಳ ವ್ಯತ್ಯಾಸದಿಂದ ಮೂಡಿ ಬರುವ ಮೊಡವೆಗಳು
  •  ದೇಹದ ಮೇಲೆ ಹಾಗೂ ಮುಖದ ಮೇಲೆ ಹೆಚ್ಚಿನ ಕೂದಲು ಬೆಳವಣಿಗೆ #Hirsutism. ಮಹಿಳೆಯರ ದೇಹದಲ್ಲಿ ಆಂಡ್ರೋಜನ್   ಹಾರ್ಮೋನ್ನ ಮಟ್ಟ ಹೆಚ್ಚಾಗುವುದರಿಂದ ದೇಹದಲ್ಲಿ ಅತಿಯಾದ ಕೂದಲ ಸಮಸ್ಯೆ ಉಂಟಾಗುವುದು
  •  ಗರ್ಭ ಧರಿಸಲು ಸಮಸ್ಯೆ ಆಗುತ್ತಿರುವುದು  70% ಕ್ಕಿಂತ ಹೆಚ್ಚು ಅಂಡೋತ್ಪತ್ತಿ ಫಲವತ್ತತೆ ಸಮಸ್ಯೆಗಳು PCOS ನಿಂದ ಉಂಟಾಗುತ್ತದೆ. ಆದರೆ ಇಲ್ಲಿ ಒಂದು ಅಂಶವನ್ನು ಮುಖ್ಯವಾಗಿ ನೆನಪಿಡಬೇಕು ಏನೆಂದರೆ, ಬಂಜೆತನಕ್ಕೂ PCOS ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ. ಮಹಿಳೆಯರಲ್ಲಿ ಹೆಚ್ಚುತ್ತಿರುವ ಆಂಡ್ರೋಜನ್ ಹಾರ್ಮೋನ್ ಮಟ್ಟದಿಂದ ಅಂಡೋತ್ಪತ್ತಿಯ ಪ್ರಕ್ರಿಯೆ ನಿಧಾನವಾಗಬಹುದು ಇದರಿಂದ ಪಿಸಿಓಎಸ್ ಹೊಂದಿರುವ ಮಹಿಳೆಯರು ಗರ್ಭ ಧರಿಸಲು ಕಷ್ಟವಾಗುತ್ತದೆ.
  • ನೆತ್ತಿಯ ಭಾಗದ ಕೂದಲು ಉದುರುವುದು#Alopecia
  • ಆದರೆ ನೆನಪಿಡಿ, ಈ ಮೇಲಿನ ಒಂದು ಅಥವಾ ಹೆಚ್ಚಿನ ಗುಣಲಕ್ಷಣಗಳು ನಿಮಗೆ ಕಂಡುಬಂದಿದ್ದರೆ ತಕ್ಷಣವೇ ಅದು ಪಿಸಿಓಎಸ್ ಎಂಬ ನಿರ್ಧಾರಕ್ಕೆ ಬರುವ ಅಗತ್ಯವಿಲ್ಲ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

ಆಯುರ್ವೇದ ಪರಿಹಾರ:

Advertisement
  • ಯೋಗಾಸನ…. PCOS ಸಮಸ್ಯೆಯಲ್ಲಿ ಮಾನಸಿಕ ಒತ್ತಡವು ಒಂದು ಕಾರಣ ಆದ ಕಾರಣ ಯೋಗ ಮಾಡುವುದರಿಂದ ಪಿಸಿಒಎಸ್ ಅನ್ನು ತಡೆಗಟ್ಟಬಹುದು
  • ಸುಪ್ತ ಬದ್ದ ಕೋಣಾಸನ,,ಶವಾಸನ ಸೂರ್ಯ ನಮಸ್ಕಾರ ಪ್ರಾಣಯಾಮ ಧ್ಯಾನ ಇವುಗಳನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ pcos ಸಮಸ್ಯೆಯನ್ನು ದೂರ ಮಾಡಬಹುದು.
  •  ಉತ್ತಮ ಆಹಾರ:– ಕಡಿಮೆ ಕೊಬ್ಬಿನ ಆಹಾರ ಸೇವನೆ,ಕಡಿಮೆ ಉಪ್ಪು ಹಾಗು ಹೆಚ್ಚು ಹಣ್ಣು ತರಕಾರಿ ಮತ್ತು ಧಾನ್ಯಗಳನ್ನು ಸೇವಿಸಿ.. ಸಕ್ಕರೆ ಭರಿತ ಆಹಾರ, ಜಂಕ್ ಫುಡ್,ಮೈದಾಹಿಟ್ಟು ಹಾಗೂ ಸಂಸ್ಕರಿಸಿದ ಆಹಾರಗಳನ್ನು ತ್ಯಜಿಸುವುದು ಉತ್ತಮ.
  • ಪಂಚಕರ್ಮ ಚಿಕಿತ್ಸೆ:–  ಪಿಸಿಒಎಸ್ ಸಮಸ್ಯೆಯಲ್ಲಿ ಕಫ ವಾತ ಹರ ಚಿಕಿತ್ಸೆ ಉತ್ತಮ.
  • ವಿಪರೀತ ಕಫ ಉಲ್ಬಣದಿಂದ ಉಂಟಾದ pcos ಸಮಸ್ಯೆ ಗೆ ವಮನ ಚಿಕಿತ್ಸೆ,,ಅಪಾನವಾತಾವನ್ನು ಸಮತೋಲನಗೊಳಿಸಲು ಬಸ್ತಿ ಎನ್ನುವ ಪಂಚ ಕರ್ಮ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಲೇಖನಬಸ್ತಿ ಹಾಗೂ ಉದ್ವರ್ತನ ಚಿಕಿತ್ಸೆಯಿಂದ ದೆಹದ ತೂಕವನ್ನು ಕಡಿಮೆಗೊಳಿಸುವುದರ ಮೂಲಕ ಹಾರ್ಮೋನ್ ಅನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದು.
  • ಉತ್ತರಬಸ್ತಿ :- ಪಿಸಿಓಸ್ ನಿಂದ ಉಂಟಾಗುವ ಬಂಜೆತನ ಹಾಗೂ ಅಂಡೋತ್ಪತ್ತಿಯ ಪ್ರಚೋದನೆಗಾಗಿ ಬಳಸಲಾಗುತ್ತದೆ. ಪಿಸಿಒಎಸ್ ಆರಂಭಿಕ ಚಿಕಿತ್ಸಾ ಮಾರ್ಗಗಳಲ್ಲಿ ಪಂಚ ಕರ್ಮವೂ ಒಂದಾಗಿದೆ. ಪಂಚಕರ್ಮ ಚಿಕಿತ್ಸೆಗಳಾದ ವಮನ,ವೀರೇಚನ, ಬಸ್ತಿ ಇವುಗಳಿಂದ ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡಿ ಪಿಸಿಒಎಸ್ ತಡೆಗಟ್ಟಬಹುದು

ಆಯುರ್ವೇದವು ಪಿ ಸಿ ಓ ಸಿ ಗೆ ಅತ್ಯಂತ ಪರಿಣಾಮಕಾರಿ ಔಷಧಿಗಳನ್ನು ಮತ್ತು ಚಿಕಿತ್ಸೆಗಳನ್ನು ಒದಗಿಸುತ್ತದೆ ನೈಸರ್ಗಿಕ ಪರಿಕಲ್ಪನೆಗೆ ಸಹಾಯ ಮಾಡುವ ಸಂತಾನೋತ್ಪತ್ತಿ ಆರೈಕೆ ಮೇಲೆ ಕೇಂದ್ರೀಕರಿಸುತ್ತದೆ. ಇಂದಿನ ಈ ಆಧುನಿಕ ಯುಗದಲ್ಲಿ ಬದಲಾದ ಜೀವನ ಶೈಲಿ ಹಾಗೂ ಅತಿಯಾದ ಒತ್ತಡ ಇವುಗಳಿಂದ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ಗೆ ಆರಂಭದಲ್ಲಿ ಸರಿಯಾಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

ಬರಹ :
Dr. Jyothi K, Ayurveda, Mangaluru,
, Mob – 94481 68053

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜ.10 ರಿಂದ ಜಾನುವಾರುಗಳಿಗೆ ಉಚಿತ ಕಂದು ರೋಗ ಲಸಿಕೆ
January 10, 2025
7:03 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಳ ಕುರಿತು ಅಧ್ಯಯನ ನಡೆಸುವಂತೆ  ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆ
January 10, 2025
6:48 AM
by: The Rural Mirror ಸುದ್ದಿಜಾಲ
ಮಂಗನ ಕಾಯಿಲೆ | ಪಂಚಾಯತ್‌ಗಳಲ್ಲಿ ಅರಿವು ಮೂಡಿಸಲು ಸಲಹೆ |
January 10, 2025
6:35 AM
by: The Rural Mirror ಸುದ್ದಿಜಾಲ
ರಬ್ಬರ್ ಟ್ಯಾಪರ್: ವಿಮಾ ಯೋಜನೆ
January 10, 2025
6:25 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror