ಕುಮಾರಪರ್ವತದಲ್ಲಿ ಪೂಜೆ | ಪರ್ವತದ ತುತ್ತತುದಿಯಲ್ಲಿ ನಡೆದ ಪೂಜೆ | ಕಾರ್ತಿಕೇಯನ ಮಹಿಮೆಯ ಬಗ್ಗೆ ಸದ್ಗುರು ಹೇಳುವುದು ಹೀಗೆ…! |

January 2, 2024
7:38 PM
ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರಪಾದ ಮತ್ತು  ವಾಸುಕಿಗೆ ಕುಕ್ಕೆಸುಬ್ರಹ್ಮಣ್ಯ ದೇವಳದ ವತಿಯಿಂದ ಪೂಜೆ  ನಡೆಯಿತು.

ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರಪಾದ ಮತ್ತು  ವಾಸುಕಿಗೆ ಕುಕ್ಕೆಸುಬ್ರಹ್ಮಣ್ಯ ದೇವಳದ ವತಿಯಿಂದ  ಪೂಜೆ  ನಡೆಯಿತು. ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರವಿರುವ  ಕುಮಾರಪರ್ವತದ ತುತ್ತ ತುದಿಯಲ್ಲಿ ಈ ಪೂಜೆ ನಡೆಯಿತು.ಚಂಪಾ ಷಷ್ಠಿ ನಡೆದ ಬಳಿಕದ ಕೃಷ್ಣ ಪಕ್ಷದ ಷಷ್ಠಿಯಿಂದ ಈ ಪೂಜೆ ನಡೆಯುತ್ತದೆ. ಸುಮಾರು 200 ಕ್ಕೂ ಅಧಿಕ ಭಕ್ತರು ಭಾಗವಹಿಸಿದರು.

Advertisement

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕುಮಾರಪರ್ವತಕ್ಕೆ  ಸಂಬಂಧವಿದೆ. ಕುಮಾರಪರ್ವತದ ತುತ್ತ ತುದಿಯಲ್ಲಿನ ಶಿಲೆಯಲ್ಲಿ ಕುಮಾರಸ್ವಾಮಿಯ ಪಾದಗಳ ಪಡಿಯಚ್ಚು ಇದೆ. ಇದರ ಪಕ್ಕದಲ್ಲಿ ವಾಸುಕಿ ನೆಲೆಯಾಗಿದ್ದಾರೆ. ಇಲ್ಲಿ  ದೇವಳದ  ಅರ್ಚಕರೇ ತೆರಳಿ ಕುಮಾರ ಪಾದಗಳಿಗೆ ಮತ್ತು ವಾಸುಕಿಗೆ ಅಭಿಷೇಕ ನೆರವೇರಿಸಿ ಪೂಜೆ ಮಾಡುವುದು ಸಂಪ್ರದಾಯ.

ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಕುಮಾರಧಾರೆಯಲ್ಲಿ ತೊಳೆದ. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದ ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ.

ಈ ನಡುವೆ ಸದ್ಗುರು ಜಗ್ಗಿ ವಾಸುದೇವ ಅವರು ಅಗಸ್ತ್ಯ ಮುನಿಗಳ ಬಗ್ಗೆ ಮಾತನಾಡುತ್ತಾ, ಕಾರ್ತಿಕೇಯನ ಕೋಪವನ್ನೂ ಅಗಸ್ತ್ಯರು ಇಳಿಸಿದ್ದಾರೆ ಎಂದು ಉಲ್ಲೇಖಿಸುತ್ತಾರೆ. ಅವರು ಉಲ್ಲೇಖಿಸುವಂತೆ, ಕಾರ್ತಿಕೇಯ ಶಿವನ ಮಗ. ಕಾರ್ತಿಕೇಯನಿಗೆ ಕೋಪ ಬಂದು ತಂದೆಯಿಂದ ದೂರ ಹೋಗಲು ಬಯಸಿದ. ಹೀಗಾಗಿ ಆತ ದೂರ ಬರುತ್ತಾ, ದಕ್ಷಿಣ ಕಡೆಗೆ ಹೋಗಿ ಉತ್ತಮ ಯೋಧನಾದ. ಎಲ್ಲರನ್ನೂ ಗೆದ್ದ. ಗೆದ್ದಿರುವುದು ಆಡಳಿತ ನಡೆಸಲು ಅಲ್ಲ. ಅನ್ಯಾಯ ಕಂಡಾಗ ಸಾಯಿಸುತ್ತಾ ಬಂದ. ನ್ಯಾಯ ಸ್ಥಾಪಿಸಲು ಬಯಸಿ ಈ ಯುದ್ಧಗಳನ್ನು ಮಾಡಿದ. ಕೋಪ ಇದ್ದಾಗ ಎಲ್ಲವೂ ಅನ್ಯಾಯ ಇದ್ದ ಹಾಗೆ ಕಾಣುತ್ತದೆ. ಹೀಗಾಗಿ ತುಂಬಾ ಜನರನ್ನು ಕಾರ್ತಿಕೇಯ ಕೊಂದ.

ದಕ್ಷಿಣಕ್ಕೆ ಬಂದ ಅಗಸ್ತ್ಯರು ಕಾರ್ತಿಕೇಯನ ಈ ಕೋಪವನ್ನು ತಣಿಸಲು ಜ್ಞಾನೋದಯದ ಮಾರ್ಗ ಬಳಸಿದರು. ಹೀಗಾಗಿ ಕಾರ್ತಿಕೇಯ ಶಾಂತನಾದ್ದು ಸುಬ್ರಹ್ಮಣ್ಯದಲ್ಲಿ. ಅಲ್ಲೇ ಆತ ಖಡ್ಗವನ್ನು ತೊಳೆದ. ಬಳಿಕ ಕೆಲ ಕಾಲ ಅಲ್ಲೇ ಇದ್ದು ಕುಮಾರ ಪರ್ವತಕ್ಕೆ ಹೋಗಿ ನಿಂತ ಭಂಗಿಯಲ್ಲಿ ಸಮಾಧಿಯನ್ನು ಪಡೆದ ಎಂದು ಉಲ್ಲೇಖಿಸುತ್ತಾರೆ ಸದ್ಗುರು.

Pooja was performed by Kukke subrahmanya temple to Kumarapada and Vasuki at the top of Kumara Parvatha. Every year this puja takes place after Champa Shashti. Thus Kukke Subrahmanya Temple and Kumar Parvata have a religious connection.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ
April 4, 2025
7:22 AM
by: The Rural Mirror ಸುದ್ದಿಜಾಲ
ಪಂಚಗ್ರಹಿ ಯೋಗ ಎಂದರೇನು..? | ಈ ಯೋಗವು ಮಹತ್ವದ್ದಾಗಿದೆ ಏಕೆ.. ?
April 4, 2025
7:16 AM
by: ದ ರೂರಲ್ ಮಿರರ್.ಕಾಂ
ಕೃಷಿ ಸಖಿಯರ ಪ್ರಥಮ ಪ್ರಗತಿ ಪರಿಶೀಲನಾ ಸಭೆ | ವಿವಿಧ ತರಕಾರಿ ಬೀಜಗಳ ವಿತರಣೆ | ತರಕಾರಿ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ |
April 4, 2025
12:17 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಎರಡು ದಿನ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
April 3, 2025
8:17 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group