ನಾಗ್ಪುರದಲ್ಲಿ ದಾಸ್ತಾನು ಇರಿಸಿದ್ದ ವಿದೇಶಿ ಅಡಿಕೆ ಪತ್ತೆ | 20 ಸಾವಿರ ಕೆಜಿ ಅಡಿಕೆ ವಶಕ್ಕೆ ಪಡೆದ ಪೊಲೀಸರು |

February 11, 2024
4:26 PM
ವಿದೇಶಿ ಅಡಿಕೆ ಆಮದು ಹಾಗೂ ಕಳಪೆ ಅಡಿಕೆಯನ್ನು ಮಾರುಕಟ್ಟೆಗೆ ರವಾನೆ ಮಾಡುತ್ತಿರುವ ಬಗ್ಗೆ ಪೊಲೀಸರು ಬಿಗು ತಪಾಸಣೆ ಆರಂಭಿಸಿದ್ದಾರೆ.

ವಾರದ ಹಿಂದೆ ಮುಂದ್ರಾ ಬಂದರಿನಲ್ಲಿ ಎಣ್ಣೆಯ ಹೆಸರಿನಲ್ಲಿ ಆಮದಾಗಿದ್ದ ಅಡಿಕೆ ಪತ್ತೆಯಾಗಿತ್ತು. ಇದೀಗ ನಾಗ್ಪುರದಲ್ಲಿ ದಾಸ್ತಾನು ಇರಿಸಿದ್ದ ಸುಮಾರು 20 ಸಾವಿರ ಕೆಜಿ ಅಡಿಕೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement
Advertisement

ಕೋಲ್ಡ್ ಸ್ಟೋರೇಜ್‌ನಲ್ಲಿ ದಾಸ್ತಾನು ಇರಿಸಿದ್ದ ಅಡಿಕೆಯನ್ನು ಲೋಡ್ ಮಾಡುತ್ತಿದ್ದ ವೇಳೆ ಪೊಲೀಸರು ಇಪ್ಪತ್ತು ಸಾವಿರ ಕೆಜಿ ತೂಕದ 250 ಮೂಟೆಗಳ ಕಳಪೆ ಗುಣಮಟ್ಟದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸರಕುಗಳನ್ನು  ಆಹಾರ ಮತ್ತು ಔಷಧಿಗಳ ಆಡಳಿತಕ್ಕೆ (ಎಫ್ಡಿಎ) ಹಸ್ತಾಂತರಿಸಲಾಗಿದೆ.

Advertisement

ಮಧ್ಯ ಭಾರತದ ಮಹಾರಾಷ್ಟ್ರದ ನಾಗ್ಪುರ, ಉತ್ತರ ಪ್ರದೇಶ, ಗುಜರಾತ್‌ ಮೊದಲಾದ ಪ್ರದೇಶಗಳು  ಅಡಿಕೆ ಪೂರೈಕೆಯ ಪ್ರಮುಖ ಕೇಂದ್ರಗಳು. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ವ್ಯವಹಾರ ನಡೆಯುತ್ತದೆ. ಈಚೆಗೆ ಕೆಲವು ವ್ಯಾಪಾರಿಗಳು ವಿದೇಶದ ಅಡಿಕೆಯನ್ನು ಬೃಹತ್‌ ಪ್ರಮಾಣದಲ್ಲಿ ಕಳ್ಳ ದಾರಿಯ ಮೂಲಕ ಅಥವಾ ನಕಲಿ ಹೆಸರಿನಲ್ಲಿ ಅಡಿಕೆ ಆಮದು ಮಾಡುತ್ತಿರುವುದು ಬೆಳೆಕಿಗೆ ಬಂದಿದೆ. ಹೀಗಾಗಿ ತಪಾಸಣೆ ಬಿಗುಗೊಂಡಿದೆ. ಕೆಲವು ವ್ಯಾಪಾರಿಗಳು, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಶ್ರೀಲಂಕಾದಿಂದ ಕಡಿಮೆ ವೆಚ್ಚದಲ್ಲಿ ಕೆಳದರ್ಜೆಯ ಅಡಿಕೆಯನ್ನು ಕಳ್ಳಸಾಗಣೆ ಮಾಡುತ್ತಾರೆ, ಅವುಗಳನ್ನು ರಾಸಾಯನಿಕ ಸಿಹಿಕಾರಕಗಳು ಮತ್ತು ಸುವಾಸನೆಗಳೊಂದಿಗೆ ಸಂಸ್ಕರಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಇದೀಗ ಕಳಪೆ ಗುಣಮಟ್ಟದ ಅಡಿಕೆಯ ಮೇಲೆ ದಾಳಿ ಪ್ರಕ್ರಿಯೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಸುಳಿವಿನ ಮೇರೆಗೆ  ಡಿಸಿಪಿ ನಿಕೇತನ್ ಕದಂ ಅವರ ಮೇಲ್ವಿಚಾರಣೆಯಲ್ಲಿ ಹಿರಿಯ ಇನ್ಸ್‌ಪೆಕ್ಟರ್ ಗೋಕುಲ್ ಮಹಾಜನ್ ಅವರ ಕಲಾಮ್ನಾ ಪೊಲೀಸ್ ತಂಡವು ಕಳಪೆ ಗುಣಮಟ್ಟದ ಅಡಿಕೆ ವಶಪಡಿಸಿಕೊಂಡಿದೆ.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ : ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!
April 29, 2024
3:30 PM
by: The Rural Mirror ಸುದ್ದಿಜಾಲ
ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ
April 29, 2024
2:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror