ಜಾತಿ ವಿಷಯದಲ್ಲಿ ಬಡವಾದ ಶಾಲಾ ಮಕ್ಕಳು | 21 ವರ್ಷದ ಬಳಿಕ ಗ್ರಾಮೀಣ ಶಾಲೆಗೆ ದಕ್ಕಿದ ಬಿಸಿಯೂಟದ ಭಾಗ್ಯ…!

August 24, 2023
4:41 PM
ಯಾದಗಿರಿ ಜಿಲ್ಲೆಯ ಸರ್ಕಾರಿ ಗ್ರಾಮೀಣ ಶಾಲೆಯೊಂದರಲ್ಲಿ ಬರೋಬ್ಬರಿ 21 ವರ್ಷಗಳ ಬಳಿಕ ಮಕ್ಕಳಿಗೆ ಬಿಸಿಯೂಟದ ಭಾಗ್ಯ ಒದಗಿಸಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಚೆನ್ನೂರ್ ಗ್ರಾಮದ ಶಾಲೆಯಲ್ಲಿ ಜಾತಿ ಸಂಘರ್ಷದಿಂದ ಬಿಸಿಯೂಟ ಬಂದ್ ಆಗಿತ್ತು.

ಅದೆಷ್ಟೋ ಮಕ್ಕಳು ಕೇವಲ ಬಿಸಿಯೂಟದ ಕಾರಣದಿಂದ ಶಾಲೆಗೆ ಬರುವುದು ಇದೆ. ಒಳ್ಳೆ ಊಟ ಸಿಗುತ್ತೆ, ಮೊಟ್ಟೆ ಸಿಗುತ್ತೆ, ಹಾಲು ಸಿಗುತ್ತೆ. ಕೆಲ ಮಕ್ಕಳಿಗೆ ಅದೇನೋ ಸಂಭ್ರಮ. ಆದರೆ ಇಲ್ಲೊಂದು ಶಾಲೆಯಲ್ಲಿ ಕಳೆದ 21 ವರ್ಷಗಳಿಂದ ಮಕ್ಕಳಿಗೆ ಬಿಸಿಯೂಟ ವೇ ಇರಲಿಲ್ಲ. ಸರ್ಕಾರದ ನಿರ್ಲಕ್ಷ್ಯವೂ, ಊರಿನ ಜನರ ಉದ್ದಟತನವೂ ತಿಳಿಯದು. ಆದರೆ ವಂಚಿತರಾಗಿದ್ದು ಶಾಲೆ ಮಕ್ಕಳು. ಇದೀಗ ಮತ್ತೆ ಆ ಶಾಲೆಯ ಮಕ್ಕಳಿಗೆ ಬಿಸಿಯೂಟ ಉಣ್ಣುವ ಭಾಗ್ಯ ಒದಗಿ ಬಂದಿದೆ.

Advertisement

ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬರೋಬ್ಬರಿ 21 ವರ್ಷಗಳ ಬಳಿಕ ಮಕ್ಕಳಿಗೆ ಬಿಸಿಯೂಟದ ಭಾಗ್ಯ ಒದಗಿಸಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಚೆನ್ನೂರ್ ಗ್ರಾಮ ದ ಶಾಲೆಯಲ್ಲಿ ಜಾತಿ ಸಂಘರ್ಷದಿಂದ ಬಿಸಿಯೂಟ ಬಂದ್ ಆಗಿತ್ತು. ಅಧಿಕಾರಿಗಳ ಸಂಧಾನದ ಬಳಿಕ ಬಿಸಿಯೂಟ ಕೊನೆಗೂ ಆರಂಭಗೊಂಡಿದೆ.

2002 ರಲ್ಲಿ ಬಿಸಿಯೂಟ ಸಹಾಯಕಿಯರ ನೇಮಕದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಮೀಸಲಾತಿ ಪ್ರಕಾರ ಓರ್ವ ದಲಿತ ಮಹಿಳೆಗೆ ಅಡುಗೆ ಸಹಾಯಕಿ ಹುದ್ದೆಗೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ದಲಿತರು ಮಾಡಿದ ಅಡುಗೆ ನಾವು ತಿನ್ನಬಾರದು ಎಂದು  ತಗಾದೆ ತೆಗೆದಿದ್ದರು. ಇದೇ ಕಾರಣಕ್ಕೆ ಅಂದಿನಿಂದ ಶಾಲೆಯಲ್ಲಿ ಬಿಸಿಯೂಟ ಮಾಡಿರಲಿಲ್ಲ!

ಆದರೆ ನಿನ್ನೆ ಜಿಲ್ಲಾ ಅಕ್ಷರದಾಸೋಹದ ಅಧಿಕಾರಿಗಳು ಗ್ರಾಮಕ್ಕೆ ಭೇಡಿ ಎರಡೂ ಕಡೆಯವರಿಗೆ ಮನವೊಲಿಸಿದ್ದಾರೆ. ಬಳಿಕ ನಿನ್ನೆ ಸದ್ಯಕ್ಕೆ ವಿಶ್ವಗಂಗ ಸಂಸ್ಥೆಯ ಮೂಲಕ ಬಿಸಿಯೂಟ ವಿತರಣೆ ಮಾಡಲಾಗಿದೆ. ಮಕ್ಕಳು ಹಾಗೂ ಪೋಷಕರು 21 ವರ್ಷದ ಬಳಿಕ ಶಾಲೆಗೆ ಬಿಸಿಯೂಟ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 1 ರಿಂದ 5 ನೇ ತರಗತಿ ವರೆಗೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದಾಗಿದೆ. SDMC ರಚನೆ ಬಳಿಕ SDMC ತೀರ್ಮಾನದಂತೆ ಬಿಸಿಯೂಟ ಸಹಾಯಕಿಯರ ನೇಮಕ‌ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಪರೇಷನ್ ಸಿಂದೂರ್ – ಪಾಕಿಸ್ತಾನದ ದಾಳಿಗೆ ಭಾರತದ ಪ್ರತ್ಯುತ್ತರ
May 9, 2025
8:00 PM
by: The Rural Mirror ಸುದ್ದಿಜಾಲ
ಭಾರತ, ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಳ | ವಾಯುಪಡೆಯ ನೆಲೆಯಿಂದ ಎಚ್ಚರಿಕೆ
May 9, 2025
7:49 PM
by: The Rural Mirror ಸುದ್ದಿಜಾಲ
ಮೇ.11 ಮುಳಿಯ ಕೃಷಿ ಗೋಷ್ಟಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ | ಕೃಷಿ-ಕೃಷಿ ಮಾರುಕಟ್ಟೆ-ಕೃಷಿ ಯಾಂತ್ರೀಕರಣ -ಕೃಷಿ ಬೆಳವಣಿಗೆ |
May 9, 2025
7:46 AM
by: ದ ರೂರಲ್ ಮಿರರ್.ಕಾಂ
ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ
May 8, 2025
8:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group