#PositiveJournalism | ಪತ್ರಕರ್ತ ಯೋಚಿಸುವ ರೀತಿ ಸಮಾಜಮುಖಿಯಾಗಿರಬೇಕು | ಉಮೇಶ್‌ ಕುಮಾರ್‌ ಶಿಮ್ಲಡ್ಕ

October 8, 2023
10:46 AM
ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಹಾಗೂ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ನಡೆಯುವ ಸಕಾರಾತ್ಮಕ ಪತ್ರಿಕೋದ್ಯಮದ ಎರಡನೇ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಹಿಂದುಸ್ತಾನ್‌ ಟೈಮ್ಸ್‌ನ ಸುದ್ದಿ ಸಂಪಾದಕ ಉಮೇಶ್‌ ಕುಮಾರ್‌ ಶಿಮ್ಲಡ್ಕ ಮಾತನಾಡಿದರು.

ಸಮಾಜದಲ್ಲಿ ಜನಸಾಮಾನ್ಯ ಜನರು ಯೋಚಿಸುವ ರೀತಿಗೂ, ಪತ್ರಕರ್ತ ಯೋಚಿಸುವ ರೀತಿಗೂ ವ್ಯತ್ಯಾಸ ಇರುತ್ತದೆ. ಪತ್ರಕರ್ತ ಸಮಾಜದಲ್ಲಿನ ಒಳ್ಳೆಯ ಅಂಶಗಳ ಕಡೆಗೆ ಗಮನಹರಿಸಬೇಕಾಗಿದೆ, ಸಮಾಜಮುಖಿ ಸ್ಪಂದನೆಯ ಕಡೆಗೆ ಯೋಚಿಸಬೇಕು ಎಂದು ಹಿಂದುಸ್ತಾನ್‌ ಟೈಮ್ಸ್‌ನ ಸುದ್ದಿ ಸಂಪಾದಕ ಉಮೇಶ್‌ ಕುಮಾರ್‌ ಶಿಮ್ಲಡ್ಕ ಹೇಳಿದರು.

ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಹಾಗೂ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ನಡೆಯುವ ಸಕಾರಾತ್ಮಕ ಪತ್ರಿಕೋದ್ಯಮದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ಪತ್ರಿಕಾ ಕಚೇರಿಗಳಲ್ಲಿಯೂ ಪತ್ರಕರ್ತನ ಯೋಚನೆಗಳಿಗೆ , ಸ್ಕಿಲ್‌ ಗಳಿಗೇ ಮಾನ್ಯತೆ ಇದೆ. ಮಾಧ್ಯಮ ಕ್ಷೇತ್ರ ಹತ್ತಾರು ವಿಭಾಗಗಳಲ್ಲಿ ಬೆಳೆದಿದೆ.ಪತ್ರಿಕಾ ಕಚೇರಿಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಮಾತ್ರವೇ ಇಂದು ಉದ್ಯೋಗ ಎಂಬ ಭಾವನೆ ಬೇಕಾಗಿಲ್ಲ. ಡಿಜಿಟಲ್ ಮಾಧ್ಯಮ, ಪೊಡಾಕಾಸ್ಟ್ , ರೀಸರ್ಚ್ ಜರ್ನಲಿಸಂ, ಡಾಟಾ ಜರ್ನಲಿಸ್ಟ ಹೀಗೇ ಹತ್ತಾರು ವಿಭಾಗದಲ್ಲಿ ಬೆಳೆದಿದೆ. ವಿದ್ಯಾರ್ಥಿಗಳು ತನ್ನ ಸ್ಕಿಲ್‌ ಬೆಳೆಸಿಕೊಂಡು ತಾನೇ ಒಂದು ಬ್ರಾಂಡ್‌ ಆಗಿದ್ದಾಗ ಅವಕಾಶಗಳು ಲಭಿಸುತ್ತದೆ ಎಂದರು. ಸಕಾರಾತ್ಮಕವಾದ ಭಾವನೆ ಇದ್ದರೆ ಮಾತ್ರವೇ ವಿದ್ಯಾರ್ಥಿಗಳು ತನ್ನನ್ನು ಬ್ರಾಂಡ್‌ ಮಾಡಿಕೊಳ್ಳಲು, ಕೇಳಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತದೆ ಎಂದು  ಉಮೇಶ್‌ ಹೇಳಿದರು.

ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಸ್ಥಾಪಕ ಮಹೇಶ್‌ ಪುಚ್ಚಪ್ಪಾಡಿ, ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್‌ ಕುಮಾರ್‌ ಕಮ್ಮಜೆ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?
August 30, 2026
11:59 AM
by: ದ ರೂರಲ್ ಮಿರರ್.ಕಾಂ
ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು
August 30, 2026
5:57 AM
by: ದ ರೂರಲ್ ಮಿರರ್.ಕಾಂ
ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!
August 30, 2026
5:41 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌
August 29, 2026
6:50 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror