ಭಾರತೀಯ ಅಂಚೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ ನಿಯಮಿತದೊಂದಿಗೆ ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾವು ಮಾರಾಟ ಮಾಡುವ ಆರನೇ ವರ್ಷದ ಯೋಜನೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ.ನಾಗರಾಜು ಬೆಂಗಳೂರಿನಲ್ಲಿ ಚಾಲನೆ ನೀಡಿದರು.…..ಮುಂದೆ ಓದಿ….
ಈ ಸಂದರ್ಭ ಮಾತನಾಡಿದ ಎಸ್.ರಾಜೇಂದ್ರ ಕುಮಾರ್, ರೈತರಿಂದ ನೇರವಾಗಿ ಮಾರಾಟ ಮಾಡುವ ಈ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ವರ್ಷದಿಂದ ಮುಂಬೈ, ದೆಹಲಿ ಇತ್ಯಾದಿ ರಾಜ್ಯಗಳಿಗೂ ವಿಮಾನದ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಮುಖ್ಯಾಲಯ ಕ್ಷೇತ್ರದ ಅಂಚೆ ಸೇವೆಗಳ ನಿರ್ದೇಶಕಿ ವಿ.ತಾರಾ ಮಾತನಾಡಿ , ಯೋಜನೆಯ ಆರಂಭದಲ್ಲಿ ಹಲವು ಸಮಸ್ಯೆ ಇದ್ದವು. ಈಗ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
“ದ ರೂರಲ್ ಮಿರರ್.ಕಾಂ” WhatsApp Channel ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ..
ಡಾ. ಸಿ.ಜಿ.ನಾಗರಾಜು, ರೈತರಿಂದ ನೇರವಾಗಿ ಗ್ರಾಹಕರಿಗೆ ತಾಜಾ ಮಾವಿನ ಹಣ್ಣು ಮಾರಾಟ ಮಾಡುವ ಮೂಲಕ ಬೆಳೆಗಾರರ ನೆರವಿಗೆ ಬರಬೇಕು ಎನ್ನುವ ಉದ್ದೇಶದಿಂದ ಕಳೆದ ಆರು ವರ್ಷಗಳಿಂದ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡುವ ಯೋಜನೆ ಇದಾಗಿದ್ದು, ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಮಾವು ಬೆಳಗಾರರು ಈ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು , ಅಂಚೆ ಇಲಾಖೆ ಅನ್ ಲೈನ್ ಪೋರ್ಟಲ್ ಮೂಲಕ ಆರಂಭಿಸಿರುವ ನೇರ ಮಾರಾಟದಿಂದ ಸಾಕಷ್ಟು ಅನುಕೂಲವಾಗಿದೆ. ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದೆ. ಮಾವಿನ ಹಣ್ಣಿನ ಜೊತೆಗೆ ಹುಣಸೆ ಹಣ್ಣು ಸೇರಿದಂತೆ ವಿವಿಧ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು.
“ದ ರೂರಲ್ ಮಿರರ್.ಕಾಂ” WhatsApp Channel ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ..