ಭಾರತೀಯ ಅಂಚೆ ಇಲಾಖೆ ಆ. 25 ರಿಂದ ಅಮೆರಿಕಾಕ್ಕೆ ಅಂಚೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ಸಾಗಣೆ ಮೇಲೆ ಅಮೇರಿಕಾ ಹೊಸ ಸೀಮಾಸುಂಕಗಳನ್ನು ಪರಿಚಯಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಅಮೇರಿಕಾದ ಆಡಳಿತವು 800 ಯುಎಸ್ ಡಾಲರ್‌ವರೆಗಿನ ಸರಕುಗಳಿಗೆ ಸುಂಕ-ಮುಕ್ತ ಡಿ ಮಿನಿಮಿಸ್ ವಿನಾಯಿತಿಯನ್ನು ತೆಗೆದುಹಾಕುವುದಾಗಿ ಜುಲೈ 30 ರಂದು ಆದೇಶ ಹೊರಡಿಸಿತ್ತು. 100 ಯುಎಸ್ ಡಾಲರ್‌ವರೆಗಿನ ಉಡುಗೊರೆ ವಸ್ತುಗಳನ್ನು ಹೊರತುಪಡಿಸಿ ಎಲ್ಲಾ ಅಂಚೆ ವಸ್ತುಗಳೂ ಈ ಹೊಸ ಸೀಮಾಸುಂಕಗಳಿಗೆ ಒಳಪಡಲಿವೆ. ಈ ಆದೇಶ ಆಗಸ್ಟ್ 29 ರಿಂದ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆ ಅಮೇರಿಕಾಕ್ಕೆ ತಾತ್ಕಾಲಿಕವಾಗಿ ಅಂಚೆ ಸೇವೆ ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಪರಿಸ್ಥಿತಿಯನ್ನು ಅಂಚೆ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆದಷ್ಟು ಬೇಗ ಈ ಸೇವೆಗಳನ್ನು ಸರಾಗಗೊಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಅಮೇರಿಕಾಕ್ಕೆ ಅಂಚೆಯನ್ನು ಕಳುಹಿಸಲು ಪಾವತಿ ಮಾಡಿರುವ ಗ್ರಾಹಕರು ಮರುಪಾವತಿಯನ್ನು ಪಡೆಯಬಹುದು, ಉಂಟಾದ ಈ ಅನಾನುಕೂಲತೆಯ ಬಗ್ಗೆ ಅಂಚೆ ಇಲಾಖೆ ವಿಷಾದ ವ್ಯಕ್ತಪಡಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ಅಸ್ಸಾಂನಲ್ಲಿ ಐಸಿಎಆರ್–ಐಎಆರ್‌ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…
ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…
ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ.…